Menu

ಪಿಎಫ್ ಬಡ್ಡಿ ದರ ಶೇ.8.25ರಲ್ಲಿ ಯಥಾಸ್ಥಿತಿ

epf

ನವದೆಹಲಿ: ಭಾರತದ ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಇಪಿಎಫ್ಒ 2024-25ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇಕಡಾ 8.25ರ ಮಟ್ಟದಲ್ಲಿಯೇ ಮುಂದುವರಿಸಲಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಪಿಎಫ್ಒ ಬಡ್ಡಿದರವನ್ನು ಶೇಕಡಾ 8.15ರಿಂದ 2023-24ಕ್ಕೆ ಶೇಕಡಾ 8.25ಕ್ಕೆ ಹೆಚ್ಚಿಸಿತ್ತು.

ಇಪಿಎಫ್ಒನ ಉನ್ನತ ನೀತಿ ನಿರ್ಧಾರ ಸಮಿತಿ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್ (ಸಿಬಿಟಿ) ಶುಕ್ರವಾರ ನಡೆದ ಸಭೆಯಲ್ಲಿ 2024-25ನೇ ಸಾಲಿಗೆ ಇಪಿಎಫ್ ಮೇಲೆ ಈಗಿರುವ ಶೇಕಡಾ 8.25ರಷ್ಟು ಬಡ್ಡಿದರವನ್ನು ಮುಂದುವರಿಸಲು ನಿರ್ಧರಿಸಿದೆ.

ಸಿಬಿಟಿ ನಿರ್ಧಾರದ ನಂತರ, 2024-25ರ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುವುದು.

ಸರ್ಕಾರದ ಅನುಮೋದನೆಯ ನಂತರ, 2024-25ನೇ ಸಾಲಿನ ಇಪಿಎಫ್ ಮೇಲಿನ ಬಡ್ಡಿದರವನ್ನು ಇಪಿಎಫ್ಒನ 7 ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

ಮಾರ್ಚ್ 2022ರಲ್ಲಿ, ಇಪಿಎಫ್ಒ ತನ್ನ 7 ಕೋಟಿ ಚಂದಾದಾರರಿಗೆ 2021-22ರ ಇಪಿಎಫ್ ಮೇಲಿನ ಬಡ್ಡಿಯನ್ನು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1ಕ್ಕೆ ಇಳಿಸಿತ್ತು. 2020-21ರಲ್ಲಿ ಇದ್ದ ಇಪಿಎಫ್ ಮೇಲಿನ ಶೇಕಡಾ 8.10ರಷ್ಟು ಬಡ್ಡಿದರ 1977-78 ರ ನಂತರದ ಅತ್ಯಂತ ಕಡಿಮೆ ಬಡ್ಡಿದರವಾಗಿತ್ತು.

Related Posts

Leave a Reply

Your email address will not be published. Required fields are marked *