ಜಾನುವಾರು,ಸಾಕು ನಾಯಿಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆಯು ಕಡೂರು ತಾಲೂಕಿನ ರಂಗೇನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ಎಮ್ಮೆದೊಡ್ಡಿ, ರಂಗೇನಹಳ್ಳಿ, ಶ್ರೀರಾಂಪುರ, ಗೊಲ್ಲರಹಟ್ಟಿ, ಶಿವಪುರ, ಲಕ್ಕೇನಹಳ್ಳಿ, ಮುಸ್ಲಾಪುರ ಭಾಗದಲ್ಲಿ ಚಿರತೆ ಸಂಚರಿಸುತ್ತಿತ್ತು. ಚಿರತೆ ಸಂಚಾರದಿಂದಈ ಭಾಗಗಳ ಜನ ಆತಂಕಗೊಂಡಿದ್ದರು.
ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದರು. ಅದರಂತೆ ಅರನ್ಯ ಇಲಾಖೆ ಬೋನು ಇಟ್ಟು ಕಾರ್ಯಾಚರಣೆ ನಡೆಸಿದ್ದು, ಈಗ ಜನ ನಿಟ್ಟುಸಿರು ಬಿಡುವಂತಾಗಿದೆ.
ಕಡೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಮಲಗಿದ್ದ ನಾಯಿಯನ್ನು ಕೊಂದು ಹೊತ್ತೊಯ್ದಿದೆ. ತರೀಕೆರೆ ತಾಲೂಕಿನ ಜಾತ್ರೆ ಮೈದಾನ ಗ್ರಾಮದಲ್ಲಿ ಘಟನೆ ನಡೆದಿದೆ. ಅಡಿಕೆ ಒಣಹಾಕಿದ್ದ ಬಯಲಲ್ಲಿ ಅಡಿಕೆ ಕಾಯಲು ನಾಯಿಯನ್ನು ಬಿಡಲಾಗಿತ್ತು. ಜಾತ್ರೆ ಮೈದಾನ ಗ್ರಾಮದ ಬಸವರಾಜ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.


