Menu

ವೀರೇಂದ್ರ ಪಪ್ಪಿ ಬಿಡುಗಡೆ ಕೋರಿ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ಸೇರಿದಂತೆ ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇಡಿ ಬಂಧನದಲ್ಲಿರುವ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಬಿಡುಗಡೆಗೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ.

ಪಪ್ಪಿ ಬಂಧನ ಕಾನೂನುಬಾಹಿರವೆಂದು ಬಿಡುಗಡೆ ಕೋರಿ ಅರ್ಜಿ ಸಲ್ಲಿಕೆಯಾಗಿದ್ದು, ಇಡಿ ಪರ ಎಎಸ್‌ಜಿ ಅರವಿಂದ್ ಕಾಮತ್ ವಾದ ಮಂಡಿಸಿದ್ದರು. ಸತೀಶ್ ಎಂಬವರು ಬೆಟ್ಟಿಂಗ್ ಎಕ್ಸ್‌ಚೇಂಜ್ ಆ್ಯಪ್ ನಲ್ಲಿ 30 ಸಾವಿರ ತೊಡಗಿಸಿದ್ದರು, ಈ ವಂಚನೆ ಸಂಬಂಧ ವಿವರವಾದ ದೂರು ದಾಖಲಿಸಿದ್ದಾರೆ. ಫೋನ್ ಪೈಸಾ ಗೇಟ್ ವೇ ನಲ್ಲಿ ಹಣ ಸಂದಾಯವಾಗುತ್ತಿತ್ತು. ಬೇರೆ ಕಂಪೆನಿಗಳ ಮೂಲಕ ಈ ಕಂಪನಿ ವ್ಯವಹಾರ ನಡೆಸುತ್ತಿದೆ. ಗೇಮಿಂಗ್ ಕಂಪೆನಿಗಳ ಮೂಲಕ ಗ್ರಾಹಕರನ್ನು ವಂಚಿಸುತ್ತಿದೆ. ಕೆವೈಸಿಯನ್ನೂ ಪಡೆಯದೆ ಹಣ ಸಂದಾಯದ ಗೇಟ್ ವೇ ಸೇವೆ ಒದಗಿಸುತ್ತಿವೆ. ಇದು ಕೇವಲ 30 ಸಾವಿರ ರೂಪಾಯಿಯ ಅಪರಾಧವಲ್ಲ. ತನಿಖೆ ಬಳಿಕ ಅಪರಾಧ ಹಣದ ಮೊತ್ತ ಬಹಳ ದೊಡ್ಡದಿರಬಹುದು. ಎಫ್‌ಐಆರ್ ನಲ್ಲಿ 30 ಸಾವಿರವಿದ್ದ ಮಾತ್ರಕ್ಕೆ ತನಿಖೆ ಅಷ್ಟಕ್ಕೇ ಸೀಮಿತವಾಗಿರಬೇಕಿಲ್ಲ, ಬಹಳ ದೊಡ್ಡ ಅರ್ಥಿಕ ಅಪರಾಧ ನಡೆದಿರುವ ಬಗ್ಗೆ ತನಿಖೆ ಅಗತ್ಯ. ಈ ದಂಧೆಯಿಂದ ದೇಶದ ಅರ್ಥವ್ಯವಸ್ಥೆ ಮೇಲೆಯೂ ಪರಿಣಾಮವಾಗಿರಬಹುದು. ಹೀಗಾಗಿ ಅಪರಾಧದ ಗಳಿಕೆಯ ತನಿಖೆ ವ್ಯಾಪ್ತಿ ವಿಸ್ತಾರವಾಗಿರಲಿದೆ ಎಂದು ಹೈಕೋರ್ಟ್‌ಗೆ ಎಎಸ್‌ಜಿ ಅರವಿಂದ್ ಕಾಮತ್ ಹೇಳಿದ್ದಾರೆ.

ಕೆ.ಸಿ.ವೀರೇಂದ್ರ ಪರ ಹಿರಿಯ ವಕೀಲ ಸಿದ್ದಾರ್ಥ ದವೆ ವಾದ ಮಂಡಿಸಿದ್ದು, ಇಡಿಯ ಇಸಿಐಆರ್ ನಲ್ಲಿ 4 ಎಫ್‌ಐಆರ್ ನಮೂದಿಸಲಾಗಿದೆ. 4 ಎಫ್‌ಐಆರ್ ಮುಕ್ತಾಯಗೊಂಡಿವೆ. ಬಂಧನಕ್ಕೆ ಕಾರಣ ನೀಡಿದಾಗ ಅಸ್ತಿತ್ವದಲ್ಲಿಲ್ಲದ ಎಫ್‌ಐಆರ್ ನಮೂದಿಸಲಾಗಿದೆ. ಹೀಗಾಗಿ ಬಂಧನವೇ ಕಾನೂನುಬಾಹಿರ. ಆರೋಪಿಯಲ್ಲದ ಎಫ್‌ಐಆರ್ ಉಲ್ಲೇಖಿಸಿ ಈಗ ವಾದ ಮಾಡಲಾಗುತ್ತಿದೆ. ಯಾವುದೇ ಪ್ರಶ್ನೆಯನ್ನೂ ಕೇಳದೇ ಕೆ.ಸಿ.ವೀರೇಂದ್ರ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ.

Related Posts

Leave a Reply

Your email address will not be published. Required fields are marked *