Menu

ಯುದ್ಧಕ್ಕೆ ಖಾಯಂ ಪರಿಹಾರ ಮತ್ತು ವಿಶ್ವಸಂಸ್ಥೆಯ ಕಾರ್ಯವೈಖರಿ

ಇರಾನ್ ಹೊಂದಿರುವ ನ್ಯೂಕ್ಲಿಯರ್ ಅಸ್ತ್ರಗಳು ಮತ್ತು ತೈಲ ಸ್ಥಾವರಗಳ ಅದಿಪತ್ಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಗಂಭೀರ ಮಾತುಕತೆ ನಡೆಯಬೇಕಿದೆ. ಇದು ಕೇವಲ ಮಧ್ಯ ಪ್ರಾಚ್ಯ ಮತ್ತು ಕೊಲ್ಲಿ ದೇಶಗಳಿಗೆ ಸಂಬಂಧಿಸಿದ ವಿಷಯವಾಗಿಲ್ಲ. ವಿಶ್ವಸಂಸ್ಥೆಯ ಎಲ್ಲ ಸದಸ್ಯ ದೇಶಗಳಿಗೂ ನೇರ ಸಂಬಂಧವಿರುವ ವಿಷಯವಿದು.

ಇಸ್ರೇಲ್ ಮತ್ತು ಕೊಲ್ಲಿ ದೇಶಗಳ ಮೇಲೆ ಇರಾನ್ ನಡೆಸಿದ ದಾಳಿಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಖಂಡಿಸಿದೆ. ಆದರೆ ಇರಾನ್ ಮೇಲೆ ದಾಳಿ ಮತ್ತು ಈ ದೇಶದ ೧೨೦ ಶಾಲಾ ಮಕ್ಕಳ ದಾರುಣ ಸಾವಿಗೆ ಕಾರಣವಾದ ಘಟನೆಯನ್ನು ಭದ್ರತಾ ಮಂಡಳಿ ಖಂಡಿಸಿಲ್ಲ, ಇದರ ಬಗ್ಗೆ ಚಕಾರ ಎತ್ತಿಲ್ಲ.

ಅಮಾಯಕ ಮಕ್ಕಳ ಸಾವಿಗೆ ಕಾರಣವಾದ ಘಟನೆ ಇಸ್ರೇಲ್ ಮಿಲಿಟರಿ ಪಡೆ ತಪ್ಪು ಗ್ರಹಿಕೆಯಿಂದ ಉಂಟಾಗಿದ್ದು ಎಂದು ಸಮರ್ಥಿಸಿಕೊಳ್ಳುವ ಅಮೆರಿಕ್ಕೆ ಈಗ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ. ವಿಶ್ವಸಂಸ್ಥೆಯ ಖಂಡನೆ ಮತ್ತು ಈಗಿನ ನಿರ್ಣಯವನ್ನು ಕಂಡಾಗ, ಭದ್ರತಾ ಮಂಡಳಿ ಅದೆಷ್ಟು ದುರ್ಬಲಗೊಂಡಿದೆ ಎಂಬುದು ಸ್ಪಷ್ಟ. ಯುದ್ದ ನಿಯಮಾವಳಿಗಳನ್ನು ಅಮೆರಿಕ ಮತ್ತು ಇಸ್ರೇಲ್ ಸಾರಾಸಗಟಾಗಿ ಉಲ್ಲಂಘಿಸಿದರೂ, ಇದರ ಬಗ್ಗೆ ಚಕಾರ ಎತ್ತದೆ ಭದ್ರತಾ ಮಂಡಳಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿರುವುದು ಖಂಡನೀಯ.

ದೊಡ್ಡಣ್ಣದ ಎಲ್ಲ ಕ್ರಮಗಳನ್ನು ಈಗ ಭದ್ರತಾ ಮಂಡಳಿಯಲ್ಲಿರುವ ಅಧಿಕಾರವರ್ಗ ಬಲವಾಗಿ ಸಮರ್ಥಿಸಿಕೊಳ್ಳುವುದನ್ನು ಕಂಡಾಗ, ನ್ಯಾಯ ಪಕ್ಷಪಾತಿ ಆಗಬೇಕಿರುವ ಮತ್ತು ಶೋಷಿತರಿಗೆ ನ್ಯಾಯವನ್ನು ದೊರಕಿಸಿಕೊಡಬೇಕಿರುವ ಭದ್ರತಾ ಮಂಡಳಿ ಇಂದು ಸಾಮ್ರಾಜ್ಯಶಾಹಿ ಪರವಾಗಿ ನಿಂತಿದೆಯೇ ಎಂಬ ಆತಂಕ ಮೂಡುವುದು ಸಹಜ.

ಕೊಲ್ಲಿ ದೇಶಗಳ ಮೇಲೆ ದಾಳಿ ನಡೆಸಿದ ಇರಾನ್ ಮೇಲೆ ತಪ್ಪು ಹೊರೆಸುವ ಭದ್ರತಾ ಮಂಡಳಿ , ಇಸ್ರೇಲ್ ಎಸಗಿದ ದಾಳಿಯನ್ನೂ ಖಂಡಿಸಬೇಕಲ್ಲವೇ? ಒಟ್ಟಿನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಣ ಈ ಅಂತಾರಾಷ್ಟ್ರೀಯ ಬಿಕ್ಕಟ್ಟು ಪರಿಹಾರವು ಸಂಧಾನ ಮತ್ತು ಮಾತುಕತೆಯ ಮೂಲಕ ಆಗಬೇಕೇ ವಿನಹ ಇದು ಅಮೆರಿಕ ಮತ್ತು ಮಿತ್ರ ದೇಶಗಳ ಅನಗತ್ಯ ಹಸ್ತಕ್ಷೇಪದಿಂದ ಬಿಕ್ಕಟ್ಟು ಬಗೆಹರಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಇರಾನ್ ಹೊಂದಿರುವ ನ್ಯೂಕ್ಲಿಯರ್ ಅಸ್ತ್ರಗಳು ಮತ್ತು ತೈಲ ಸ್ಥಾವರಗಳ ತೈಲ ಸ್ಥಾವರಗಳ ಅದಿಪತ್ಯ ಕುರಿತು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಗಂಭೀರ ಮಾತುಕತೆ ನಡೆಯಬೇಕಿದೆ. ಇದು ಕೇವಲ ಮಧ್ಯ ಪ್ರಾಚ್ಯ ಮತ್ತು ಕೊಲ್ಲಿ ದೇಶಗಳಿಗೆ ಸಂಬಂಧಿಸಿದ ವಿಷಯವಲ್ಲ. ತೈಲ ರಾಷ್ಟ್ರಗಳ ಮೇಲೆ ಏಷ್ಯಾ, ಯೂರೋಪ್ ಮತ್ತು ಅಮೆರಿಕ ಖಂಡಗಳು ನೇರವಾಗಿ ಅವಲಂಬಿತವಾಗಿರುವುದು ಕಟುಸತ್ಯ.

ಇದೇ ವೇಳೆ ಈ ವಿಚಾರದಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಯೇ ಸರಿಯಾದ ಮಾರ್ಗ. ಇವುಗಳ ಪಾಲನೆ ಮತ್ತು ಅನುಷ್ಠಾನದಲ್ಲಿ ಯಾವ ಬಗೆಯ ಹಸ್ತಕ್ಷೇಪ ಮತ್ತು ಮಧ್ಯಸ್ತಿಕೆಯೂ ಅನವಶ್ಯಕ. ಪ್ರಪಂಚದ ವಿನಾಶಕ್ಕೆ ತನ್ನ ಬಳಿಯಿರುವ ನ್ಯೂಕ್ಲಿಯಾರ್ ಅಸ್ತ್ರಗಳು ಬಳಕೆಯಿಲ್ಲ ಎಂದು ಇರಾನ್ ಹೇಳುತ್ತಿದೆ. ಆದರೆ ಇದನ್ನು ಅಮೆರಿಕ ಅಂತಹ ದೇಶ ಅನುಮಾನಿಸಿ ಇವರ ಮೇಲೆ ನೆಪ ತೆಗೆದು ಕದನಕ್ಕೆ ಕಾಲು ಕೆರದಿದ್ದು ಸರಿಯಲ್ಲ. ಗುಪ್ರವಾಗಿ ಮತ್ತು ರಹಸ್ಯಮಯವಾಗಿ ಯಾವ ಯಾವ ದೇಶ ಎಷ್ಟೆಷ್ಟು ನ್ಯೂಕ್ಲಿಯಾರ್ ಶಕ್ತಿಯನ್ನು ಹೊಂದಿದೆ ಎಂಬುದನ್ನು ವಿಶ್ವಸಂಸ್ಥೆ ಮುಕ್ತವಾಗಿ ಚರ್ಚಿಸಲು ಸಾಧ್ಯವೇ? ಪ್ರಸ್ತುತ ಪ್ರಪಂಚಕ್ಕಿಂದು ಬೇಕಿರುವುದು ಬಿಕ್ಕಟ್ಟಿಗೆ ಸರಿಯಾದ ಪರಿಹಾರವಷ್ಟೆ.

Related Posts

Leave a Reply

Your email address will not be published. Required fields are marked *