Menu

ತವರು ಮನೆಗೆ ಹೋಗಿರುವ ಪತ್ನಿಯ ಕರೆತನ್ನಿ ಎಂದ ಮಗನ ಕೊಲೆಗೈದ ಪೋಷಕರು

ಮನೆಯಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳಿಂದ ಮುನಿಸಿಕೊಂಡು ತವರಿಗೆ ಹೋಗಿದ್ದ ಪತ್ನಿಯನ್ನು ಕರೆ ತರುವಂತೆ ಹೇಳಿದ ಮಗನನ್ನು ಪೋಷಕರೇ ಹತ್ಯೆಗೈದ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ.

ಸಿಮ್ರಂಜಂಗ್ ಸಿಂಗ್ ಎಂವರ ಪತ್ನಿ ನವಪ್ರೀತ್ ಕೌರ್ ತವರು ಮನೆಗೆ ಹೋಗಿದ್ದರು. ಕೋಪ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಆಕೆಯನ್ನು ವಾಪಸ್ ಕರೆದುಕೊಂಡು ಬನ್ನಿ ಎಂದು ಕೇಳಿದ್ದಕ್ಕೆ ಪೋಷಕರೇ ಕೊಲೆ ಮಾಡಿದ್ದಾರೆ.

ಸಿಮ್ರಂಜಂಗ್ ಸಿಂಗ್ ಪತ್ನಿ ನವಪ್ರೀತ್ ಕೌರ್ ಮತ್ತು ಎರಡು ವರ್ಷದ ಮಗನನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿದ್ದರು. ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದರಿಂದ ಪತ್ನಿ ಮನೆ ಬಿಟ್ಟು ಹೋಗಿದ್ದರು. ಅವರ ಅತ್ತೆ-ಸಿಮ್ರಂಜಂಗ್ ಸಿಂಗ್ ಪೋಷಕರಿಗೆ ಆಕೆ ಮನೆಗೆ ವಾಪಸಾಗುವುದು ಇಷ್ಟವಿರಲಿಲ್ಲ. ಮಗನಿಗೆ ಮರು ಮದುವೆ ಮಾಡಲು ನಿರ್ಧರಿಸಿದ್ದರು. ಮಗ ಮತ್ತೆ ಪತ್ನಿಯ ಕರೆ ತರುವಂತೆ ಒತ್ತಾಯಿಸಿದ್ದಕ್ಕೆ ಮಗನನ್ನು ಸಾಯಿಸಿದ್ದಾರೆ.

ಮಗ ಹಾಗೂ ಪೋಷಕರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಕೋಪದ ಭರದಲ್ಲಿ ಪೋಷಕರು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರವಾದ ಗಾಯಗಳಾಗಿ ಮಗ ಸ್ಥಳದಲ್ಲೇ ಅಸು ನೀಗಿದ್ದಾರೆ.

ನವಪ್ರೀತ್ ಗಂಡನ ಬಳಿಗೆ ಮರಳಲು ಸಿದ್ಧರಿ ದ್ದಾರೆ, ಆದರೆ ಅತ್ತೆ-ಮಾವ ಯಾವಾಗಲೂ ವಿರೋಧಿಸುತ್ತಿದ್ದರು ಎಂದು ಹೇಳಿದ್ದಾರೆ. ತನ್ನ ಮಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಮತ್ತು ಸಿಮ್ರಂಜಂಗ್ ಸಿಂಗ್ ಪೋಷಕರು ಆಕೆ ಹಿಂತಿರುಗುವುದನ್ನು ವಿರೋಧಿಸುತ್ತಿದ್ದರು ಎಂದು ನವಪ್ರೀತ್‌ನ ತಂದೆ ಆರೋಪಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿ ಅಜ್ನಾಲಾ ಪೊಲೀಸರುಸಿಮ್ರಾಂಜಂಗ್ ತಂದೆಯನ್ನು ಬಂಧಿಸಿದ್ದು, ತಾಯಿ ಪರಾರಿಯಾಗಿದ್ದಾರೆ.

Related Posts

Leave a Reply

Your email address will not be published. Required fields are marked *