ಡಾ.ಜಿ.ಪರಮೇಶ್ವರ್‌ಗೆ ಸಿಎಂ ಆಗುವ ಅವಕಾಶ ಬರಲಿದೆ ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ತುಮಕೂರಿನ ಕೊರಟಗೆರೆಯ ಚಟ್ಟೆನಹಳ್ಳಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿಯಾಗಲಿ ಎನ್ನುವುದು ನಮ್ಮೆಲ್ಲರ ಹಲವು ವರ್ಷಗಳ ಬೇಡಿಕೆಯಾಗಿದೆ, ಇತ್ತೀಚೆಗೆ ಮುಖ್ಯ ಮಂತ್ರಿ ಸ್ಥಾನದ ಬಗ್ಗೆ ಚರ್ಚೆಗಳನ್ನು ನೋಡುತ್ತಿದ್ದೇವೆ. ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಂತೆ ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ರಾಜ್ಯ ಕಂಡ ಸಜ್ಜನರು, ಸಂಸ್ಕಾರವಂತರು, ವಿದ್ಯಾವಂತರು ಹಾಗೂ ರಾಜಕೀಯ ಜೀವನದಲ್ಲಿ ಗುರುತಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿನ ಹಲವರ ದಶಕಗಳ ಕನಸು ನೆರವೇರಲಿದೆ ಎಂದರು. ಸ್ವಾಮೀಜಿ ಮಾತು ಕೇಳಿ ಸಚಿವ ಡಾ.ಜಿ.ಪರಮೇಶ್ವರ ಮುಗುಳ್ನಕ್ಕರು.
ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆ ಬಗ್ಗೆ ಬಿಹಾರ ಚುನಾವಣೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ಬಿಹಾರ ಚುನಾವಣೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ನಡೆಯಲಿದೆ ಎಂಬ ಸುಳಿವು ನೀಡಿದರು.
ಶಿವಕುಮಾರ್ ಅವರನ್ನು ಹೋಲಿಕೆ ಮಾಡುವ ನಾಯಕರು ಈಗ ಯಾರಿದ್ದಾರೆ, ಅವರಿಗೆ ಅಷ್ಟೊಂದು ಸಾಮರ್ಥ್ಯ ಇದೆ, ಅವರು ಸಿಎಂ ಆಗುವ ಬಗ್ಗೆ ನಾವು ಹೇಳುವುದಕ್ಕಾಗುವುದಿಲ್ಲ. ಹೈಕಮಾಂಡ್ ತೀರ್ಮಾನ ಅಂತಿಮ ಆದಾಗ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದರು.


