ಇಸ್ಲಮಾಬಾದ್: ಪಾಕಿಸ್ತಾನದ ಪ್ರಮುಖ ವಿಮಾನ ನಿಲ್ದಾಣ ಸೇರಿದಂತೆ 12 ನಗರಗಳ ಮೇಲೆ ಬಲೂಚಿಸ್ತಾನಿ ಪ್ರತ್ಯೇಕತಾವಾದಿಗಳು ನಡೆಸಿದ ಡ್ರೋಣ್ ದಾಳಿಯಲ್ಲಿ 21ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ.
ಕಳೆದ ತಿಂಗಳು ಪಾಕಿಸ್ತಾನದ ಪ್ರಯಾಣಿಕರ ರೈಲನ್ನು ಹೈಜಾಕ್ ಮಾಡಿದ್ದ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಸುಮಾರು 25ಕ್ಕೂ ಹೆಚ್ಚು ಡ್ರೋಣ್ ಗಳ ಮೂಲಕ 12 ನಗರಗಳ ಮೇಲೆ ದಾಳಿ ನಡೆಸಿದೆ.
ದಾಳಿಯಲ್ಲಿ ಲಾಹೋರ್ ನ ವಾಯುನೆಲೆಗೆ ಸಾಕಷ್ಟು ಹಾನಿಯಾಗಿದೆ ಎಂದು ಹೇಳಲಾಗಿದೆ. ಘಟನೆ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶೆಹಜಾಬ್ ತುರ್ತು ಸಭೆ ಕರೆದಿದ್ದಾರೆ.
ಒಂದು ಕಡೆ ಭಾರತ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ನೆಲದ ಮೇಲೆ ದಾಳಿ ನಡೆಸಿ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿ 70 ಉಗ್ರರನ್ನು ಬಲಿ ಪಡೆದ ಬೆನ್ನಲ್ಲೇ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಭೀಕರ ದಾಳಿ ನಡೆಸಿದೆ.
ಪಾಕಿಸ್ತಾನದ ಪ್ರಮುಖ ನಗರಗಳಾದ ಕರಾಚಿ, ಸಿಲಾಕೋಟ್, ಲಾಹೋರ್ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ದಾಳಿಯ ವೇಳೆ ಸೈರನ್ ಮೊಳಗಿದ್ದು, ಜನರು ಭಯದಿಂದ ಮನೆಯಿಂದ ಹೊರಗೆ ಬಾರದೇ ಅವಿತಿಟ್ಟುಕೊಂಡಿದ್ದರು. ಕೆಲವು ಕಡೆ ಮಾರುಕಟ್ಟೆ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಡ್ರೋಣ್ ದಾಳಿ ನಡೆದಿದ್ದು, ಸಾವು-ನೋವಿನ ವರದಿ ಬಂದಿಲ್ಲ.