Tuesday, November 04, 2025
Menu

ಪಾಕಿಸ್ತಾನ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೊದಲಿಗನಾಗದು: ಟ್ರಂಪ್‌ಗೆ ಪ್ರತ್ಯುತ್ತರ

ಅಮೆರಿಕ 30 ವರ್ಷಗಳ ಬಳಿಕ ಪರಮಾಣು ಪರೀಕ್ಷೆ ನಡೆಸಲು ಮುಂದಾಗಿದ್ದು, ಈ ಸಂಬಂಧ ಆ ರಾಷ್ಟ್ರದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ಹೇಳಿಕೆಗೆ ಪಾಕಿಸ್ತಾನ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ಪರಮಾಣು ಪರೀಕ್ಷೆಗಳನ್ನು ನಡೆಸಿದ ಮೊದಲಿಗ ಅಲ್ಲ, ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸುವ ಮೊದಲಿಗ ಆಗುವುದಿಲ್ಲ ಎಂದು ಹೇಳಿದೆ.

ಪಾಕಿಸ್ತಾನ, ಚೀನಾ, ರಷ್ಯಾ, ಉತ್ತರ ಕೊರಿಯಾ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ. ಹೀಗಿರುವಾಗ ಅಮೆರಿಕ ಮಾತ್ರ ಸಂಯಮ ತೋರಿಸುವ ದೇಶವಾಗಿ ಉಳಿಯಲು ಸಾಧ್ಯವಿಲ್ಲ. ನಾವೂ ಪರಮಾಣು ಪರೀಕ್ಷೆಗಳನ್ನು ನಡೆಸುತ್ತೇವೆ ಎಂದು ಟ್ರಂಪ್‌ ಅಣ್ವಸ್ತ್ರ ಪರೀಕ್ಷೆಯನ್ನು ಸಮರ್ಥಿಸಿಕೊಂಡಿದ್ದರು.

ಅದಕ್ಕೆ ಪಾಕಿಸ್ತಾನ ಹಿರಿಯ ಅಧಿಕಾರಿ ಉತ್ತರಿಸಿದ್ದು, ಪಾಕಿಸ್ತಾನ ಪರಮಾಣು ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿ ಪಾಕಿಸ್ತಾನ ಪರಮಾಣು ಪರೀಕ್ಷೆಗಳನ್ನು ನಡೆಸಿದ ಮೊದಲಿಗ ಅಲ್ಲ ಮತ್ತು ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸುವ ಮೊದಲಿಗ ಆಗುವುದಿಲ್ಲ ಎಂದು ಹೇಳಿದ್ದಾರೆ.

ಸಿಬಿಎಸ್ ನ್ಯೂಸ್‌ 60 ಮಿನಿಟ್ಸ್‌ ಗೆ ನೀಡಿದ್ದ ಸಂದರ್ಶನದಲ್ಲಿ ಟ್ರಂಪ್‌ ಮಾತನಾಡಿ ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ‌ದಂತಹ ದೇಶಗಳು ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿವೆ. ಅಮೆರಿಕ ಪರಮಾಣು ಪರೀಕ್ಷೆ ನಡೆಸಿದರೆ ಮಾತ್ರ ವಿರೋಧ ವ್ಯಕ್ತವಾಗುತ್ತವೆ, ಎಲ್ಲರೂ ಭೂಗತವಾಗಿ ಪರಮಾಣು ಪರೀಕ್ಷೆ ನಡೆಸುತ್ತಲೇ ಇದ್ದಾರೆ, ಪರೀಕ್ಷೆ ನಡೆಸದ ಏಕೈಕ ದೇಶ ನಾನು ಆಗಲು ಬಯಸುವುದಿಲ್ಲ ಎಂದು ಹೇಳಿದ್ದರು.

ಉತ್ತರ ಕೊರಿಯಾ ಹೊರತಾಗಿ ಯಾವ ದೇಶವು 90ರ ದಶಕದ ನಂತರ ಅಣ್ವಸ್ತ್ರ ಪರೀಕ್ಷೆ ನಡೆಸಿಲ್ಲ. 1996 ರಿಂದ ಅಮೆರಿಕ ಸಮಗ್ರ ಪರೀಕ್ಷಾ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿದೆ, ಕೊನೆ ಬಾರಿ 1992ರಲ್ಲಿ ಅಮೆರಿಕ ಕೊನೆಯ ಪರಮಾಣು ಸ್ಫೋಟ ನಡೆಸಿತ್ತು .ರಷ್ಯಾ ಹಾಗೂ ಚೀನಾ ಸಹ 1996ರ ನಂತರ ಯಾವುದೇ ಪರಮಾಣು ಪರೀಕ್ಷೆಗಳನ್ನು ನಡೆಸಿಲ್ಲ. ಪಾಕಿಸ್ತಾನ ಸಿಟಿಬಿಟಿ ಒಪ್ಪಂದಕ್ಕೆ ಸಹಿ ಹಾಕದಿದ್ದರೂ 1998ರಲ್ಲಿ ಕೊನೆಯ ಪರಮಾಣು ಪರೀಕ್ಷೆ ನಡೆಸಿ ಏಕಪಕ್ಷೀಯ ನಿಷೇಧವನ್ನು ಪಾಲಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದೆ.

ಇತರ ಎಲ್ಲಾ ದೇಶಗಳಿಗಿಂತ ಅಮೆರಿಕ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿದೆ. ಇಡೀ ಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ನ್ಯೂಕ್ಲಿಯರ್‌ ಶಸ್ತ್ರಾಸ್ತ್ರಗಳನ್ನು ನಾವು ಹೊಂದಿದ್ದೇವೆ. ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್‌ ಇಬ್ಬರೊಂದಿಗೂ ಈ ವಿಷಯ ಚರ್ಚಿಸಿದ್ದೇನೆ. ಪರಿಸ್ಥಿತಿ ಅನುಗುಣವಾಗಿ ನಾವು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಟ್ರಂಪ್‌ ಹೇಳಿದ್ದಾರೆ. ಈಗ ಅಮೆರಿಕದ ಹೊಸ ಅಣ್ವಸ್ತ್ರ ಪರೀಕ್ಷೆಯ ಯೋಜನೆ ಮತ್ತೆ ದೇಶಗಳು ಪರಮಾಣು ಪರೀಕ್ಷೆ ನಡೆಸುವುದಕ್ಕೆ ದಾರಿ ಸುಗಮಗೊಳಿಸಿ 3ನೇ ಜಾಗತಿಕ ಮಹಾಯುದ್ದಕ್ಕೂ ಕಾರಣವಾಗಬಹುದಾಗಿದೆ.

Related Posts

Leave a Reply

Your email address will not be published. Required fields are marked *