ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತಾಲಿಬಾನ್ ನಿರ್ಬಂಧ ಸಮಿತಿಗೆ 2025ನೇ ವರ್ಷಕ್ಕೆ ಪಾಕಿಸ್ತಾನವನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದೆ. ಭಯೋತ್ಪಾದನಾ ನಿಗ್ರಹ ಸಮಿತಿಯ ಉಪಾಧ್ಯಕ್ಷ ಹುದ್ದೆಯನ್ನು ರಷ್ಯಾಗೆ ನೀಡಲಾಗಿದೆ.
ಅಪ್ಘಾನಿಸ್ತಾನದ ಭದ್ರತೆ, ಶಾಂತಿ ಮತ್ತು ಸ್ಥಿರತೆಗೆ ಹಾನಿ ಮಾಡುವ ತಾಲಿಬಾನಿಗಳ ಆಸ್ತಿ ಜಪ್ತಿ ಮಾಡುವುದು, ವ್ಯಕ್ತಿಗಳು, ಗುಂಪುಗಳು ಅಥವಾ ತಾಲಿಬಾನ್‌ಗೆ ಸಂಬಂಧಿಸಿದ ಘಟಕಗಳ ಮೇಲೆ ಪ್ರಯಾಣ ಹಾಗೂ ಶಸ್ತ್ರಾಸ್ತ್ರ ನಿರ್ಬಂಧ ಹೇರುವುದು 1988ರಲ್ಲಿ ಸ್ಥಾಪನೆಯಾದ ಈ ಸಮಿತಿಯ ಕೆಲಸ.
15 ರಾಷ್ಟ್ರಗಳು ಈ ಸಮಿತಿಯಲ್ಲಿ ಇರಲಿದ್ದು, ಅಧ್ಯಕ್ಷತೆಯನ್ನು ಪಾಕಿಸ್ತಾನ ವಹಿಸಲಿದೆ. ಉಗ್ರರಿಗೆ ತನ್ನ ನೆಲದಲ್ಲಿ ಆಶ್ರಯ ನೀಡುತ್ತಿರುವ ದೇಶಕ್ಕೆ ಈ ಜವಾಬ್ದಾರಿ ನೀಡಿರುವುದು ಕಳವಳಕಾರಿ. ಪಾಕಿಸ್ತಾನವು 2025-26ರ ಅವಧಿಗೆ 15 ರಾಷ್ಟ್ರಗಳ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿದೆ. ಭಾರತವು 2021-22ರ ಅವಧಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರವಾದ ನಿಗ್ರಹ ಸಮಿತಿಯ ಅಧ್ಯಕ್ಷನಾಗಿತ್ತು.
ಭಾರತವನ್ನು ಒಡೆದು ಚೂರು ಮಾಡುವುದಾಗಿ ಬೆದರಿಕೆ ಹಾಕಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ಅಬ್ದುಲ್ ಅಜಿಜ್ ಪಾಕ್‌ನ ಬಹಾವಲ್ಪುರದಲ್ಲಿ ಅನಾಮಿಕ ವ್ಯಕ್ತಿಗಳ ಗುಂಡಿಗೆ ಬಲಿಯಾಗಿದ್ದಾನೆ. .ಜೈಷ್ ಸಂಘಟನೆಯ ಹಿರಿಯ ಸದಸ್ಯ ಅಬ್ದುಲ್ ಅಜೀಜ್, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಯುವಕರನ್ನು ಜೈಷ್ ಸಂಘಟನೆಗೆ ನೇಮಿಸಿಕೊಳ್ಳುತ್ತಿದ್ದ. ಅವರಿಗೆ ಉಗ್ರಕೃತ್ಯದ ತರಬೇತಿ ನೀಡಿ ಭಾರತದ ವಿರುದ್ಧ ಬಿಡುತ್ತಿದ್ದ.