ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಆಯೋಜಿಸಿ 26 ಪ್ರವಾಸಿಗರ ಬಲಿಗೆ ಕಾರಣನಾಗಿರುವ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎನ್ನಲಾದ ಲಷ್ಕರ್-ಎ-ತೈಬಾದ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಪಾಕಿಸ್ತಾನವು ಭದ್ರತೆಯನ್ನು ನಾಲ್ಕು ಪಟ್ಟು ಹೆಚ್ಚು ಮಾಡಿದೆ ಎಂದು ಮೂಲಗಳು ಹೇಳಿವೆ.
ಪಾಕಿಸ್ತಾನ ಸಶಸ್ತ್ರ ಪಡೆಗಳ ಸಿಬ್ಬಂದಿಯ 24*7 ನಿಯೋಜನೆ, ಲಾಹೋರ್‌ನಲ್ಲಿರುವ ಸಯೀದ್‌ನ ನಿವಾಸದ ಸುತ್ತಲೂ ಡ್ರೋನ್ ಸೇರಿದಂತೆ ವ್ಯಾಪಕ ಕಣ್ಗಾವಲು ವಹಿಸಲಾಗಿದೆ. ಜನನಿಬಿಡ ವಸತಿ ಪ್ರದೇಶವಾದ ಮೊಹಲ್ಲಾ ಜೋಹರ್ ಪಟ್ಟಣದಲ್ಲಿರುವ ಹಫೀಜ್ ಸಯೀದ್‌ನ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಪಾಕಿಸ್ತಾನ ಸೇನೆ, ಐಎಸ್‌ಐ ಮತ್ತು ಲಷ್ಕರ್ ಕಾರ್ಯಕರ್ತರು ಜಂಟಿಯಾಗಿ ರಕ್ಷಣೆಯನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಎಂದು ವರದಿಯಾಗಿದೆ.
ಮನೆಯ ಕಾಂಪೌಂಡ್‌ನಿಂದ ಸುತ್ತಲೂ ಮೇಲ್ವಿಚಾರಣೆ ಮಾಡಲು ಡ್ರೋನ್ ಹಾರಾಟ ನಿಯೋಜಿಸಲಾಗಿದೆ ಮತ್ತು 4 ಕಿಲೋಮೀಟರ್ ವ್ಯಾಪ್ತಿಯೊಳಗಿನ ರಸ್ತೆಗಳಲ್ಲಿ ಹೆಚ್ಚಿನ ರೆಸಲ್ಯೂಶನ್ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮನೆಯ ಬಳಿ ಯಾವುದೇ ನಾಗರಿಕರ ಸಂಚಾರಕ್ಕೆ ಅವಕಾಶವಿಲ್ಲ ಮತ್ತು ಈ ಪ್ರದೇಶದಲ್ಲಿ ಇತರ ಡ್ರೋನ್‌ಗಳನ್ನು ನಿಷೇಧಿಸಲಾಗಿದೆ ಎಂದು ಎಂದು ಮೂಲಗಳು ತಿಳಿಸಿವೆ.
ಹಫೀಜ್ ಸಯೀದ್‌ನನ್ನು ವಿಶ್ವಸಂಸ್ಥೆ ಮತ್ತು ಅಮೆರಿಕವು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿದೆ. ಈತನ ತಲೆಗೆ ಮತ್ತು 10 ಮಿಲಿಯನ್ ಯುಎಸ್ ಡಾಲರ್ ಬಹುಮಾನವನ್ನು ಘೋಷಿಸಿದೆ. ಹೀಗಿದ್ದರೂ ಈ ಸಯೀದ್ ಪಾಕಿಸ್ತಾನದಲ್ಲಿ ಬಹಿರಂಗವಾಗಿ ರಾಜಾರೋಷವಾಗಿ ವಾಸಿಸುತ್ತಿದ್ದಾನೆ. ಅವನ ನಿವಾಸವು ಲಾಹೋರ್‌ನ ಹೃದಯಭಾಗದಲ್ಲಿ ನಾಗರಿಕರ ಮನೆಗಳಿಂದ ಸುತ್ತುವರೆದಿದೆ.