Menu

ಅಫ್ಘಾನಿಸ್ತಾನ ಆಸ್ಪತ್ರೆಗೆ ಪಾಕ್‌ ಬಾಂಬ್‌ ದಾಳಿ: 400 ಮಂದಿ ಸಾವು

ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನ ಬಾಂಬ್‌ ದಾಳಿ ಮಾಡಿದ್ದು, 400ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.  ಸೋಮವಾರ ರಾತ್ರಿ 2,000 ಹಾಸಿಗೆ ಸೌಲಭ್ಯವಿರುವ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. 400 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 250 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾತ್ ಹೇಳಿದ್ದಾರೆ.

ಆದರೆ ಈ ಆರೋಪಗಳನ್ನು ಪಾಕಿಸ್ತಾನ ನಿರಾಕರಿಸಿ, ಇದು ಆಧಾರರಹಿತ ಆರೋಪ ಎಂದಿದೆ. ಕಾಬೂಲ್‌ನಲ್ಲಿ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿದೆ. ಅಫಘಾನಿಸ್ತಾನ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ದಾಳಿಯನ್ನು ಖಂಡಿಸಿ, ಪಾಕ್‌ ಆಸ್ಪತ್ರೆಗಳು ಮತ್ತು ನಾಗರಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಯಾನಕ ಕೃತ್ಯಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ಪಾಕ್‌ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ , ಕಾಬೂಲ್ ಮತ್ತು ಪೂರ್ವ ಪ್ರಾಂತ್ಯದ ನಂಗರ್‌ಹಾರ್‌ನಲ್ಲಿರುವ ಮಿಲಿಟರಿ ನೆಲೆಗಳ ಗುರಿಯಾಗಿಸಿಕೊಂಡು ಸೇನೆಯು ನಿಖರ ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ತಿಳಿಸಿದ್ದಾರೆ. ಕಾಬೂಲ್‌ನ ಎರಡು ಸ್ಥಳಗಳಲ್ಲಿ ತಾಂತ್ರಿಕ ಬೆಂಬಲ ಮೂಲಸೌಕರ್ಯ ಮತ್ತು ಮದ್ದುಗುಂಡು ಸಂಗ್ರಹಣಾ ಸೌಲಭ್ಯಗಳು ನಾಶವಾಗಿವೆ ಎಂದಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಫ್ಘಾನಿಸ್ತಾನದ ಜೊತೆ ಮುಕ್ತ ಯುದ್ಧ ನಡೆಸುತ್ತಿರುವುದಾಗಿ ಘೋಷಿಸಿದ್ದಾರೆ.

Related Posts

Leave a Reply

Your email address will not be published. Required fields are marked *