ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ಕೆಲವು ವರ್ಷದ ಹಿಂದೆ ಮಕ್ಕಳು ಮತ್ತು ಹೆಂಡತಿ ಬಿಟ್ಟು ಹೋಗಿದ್ದಕ್ಕೆ ನೊಂದಿದ್ದ ವ್ಯಕ್ತಿ ಕುಡಿತದ ಚಟಕ್ಕೆ ದಾಸನಾಗಿದ್ದು, ಬ್ರಿಡ್ಜ್ ಮೇಲಿಂದ ಮಾಂಜ್ರಾ ನದಿಗೆ
ಹಾರಿದ್ದಾನೆ.
ವ್ಯಕ್ತಿಯು ಬ್ರಿಡ್ಜ್ ಮೇಲಿಂದ ಮಾಂಜ್ರಾ ನದಿಗೆ ಜಿಗಿಯುತ್ತಿರುವ ವೀಡಿಯೊ ಹರಿದಾಡಿದ್ದು, ಹಲಸಿತೂಗಾಂವ್ ಗ್ರಾಮದ ನಿವಾಸಿ ಪ್ರಭಾಕರ್ ಸೂರ್ಯವಂಶಿ (38) ನದಿಗೆ ಹಾರಿದ ವ್ಯಕ್ತಿ.
ನೀರಿನ ರಭಸಕ್ಕೆ ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಪ್ರಭಾಕರ್ ಸೂರ್ಯವಂಶಿಗಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಕೆಲವು ವರ್ಷಗಳಿಂದ ಹೆಂಡತಿ ಮಕ್ಕಳು ಆತನನ್ನು ಬಿಟ್ಟು ಹೋಗಿದ್ದಕ್ಕೆ ಮನನೊಂದಿದ್ದ ಆತ ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ. ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಸಾರಿಗೆ ಬಸ್‌ಗಳಲ್ಲಿ ಜಿರಳೆ ಕಾಟ
ಹಾಸನ-ಮೈಸೂರು ಸಾರಿಗೆ ಬಸ್‌ಗಳಲ್ಲಿ ಜಿರಳೆ ಕಾಟಕ್ಕೆ ಪ್ರಯಾಣಿಕರು ಬೇಸತ್ತಿದ್ದಾರೆ. ಬಸ್‌ಗಳನ್ನು ಸ್ವಚ್ಛಗೊಳಿಸದ ಕಾರಣ ಜಿರಳೆಗಳ ತಾಣವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಬ್ಬೆದ್ದು ನಾರುತ್ತಿರುವ ಸಾರಿಗೆ ಬಸ್‌ಗಳಲ್ಲಿ ತಿಗಣೆ ಕಾಟದಿಂದ ರೋಸಿದ್ದು, ಇತ್ತೀಚೆಗೆ ಜಿರಳೆಗಳ ಕಾಟವೂ ಶುರುವಾಗಿದ್ದು, ಹಿಂಸೆ ಅನುಭವಿಸುವಂತಾಗಿದೆ ಎಂದು ಪ್ರಯಾಣಿಕರು ಸಾರಿಗೆ ಅಧಿಕಾರಿಗಳ ಮತ್ತು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.