Menu

ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದ 4.09 ಲಕ್ಷ ಕೋಟಿ ಹಣದಲ್ಲಿ 2.06 ಲಕ್ಷ ಕೋಟಿಯಷ್ಟೇ ವೆಚ್ಚ: ಆರ್‌ ಅಶೋಕ ಕಿಡಿ

2025-26 ನೇ ಆರ್ಥಿಕ ಸಾಲಿನ 8.5 ತಿಂಗಳು ಕಳೆದು ಕೇವಲ 3.5 ತಿಂಗಳು ಬಾಕಿ ಇದೆ. ಆದರೆ ಸಿಎಂ @siddaramaiah ಅವರು ಬಜೆಟ್ ನಲ್ಲಿ ಸರ್ಕಾರದ 47 ಇಲಾಖೆಗಳಿಗೆ ಹಂಚಿಕೆ ಮಾಡಿದ್ದ ₹4.09 ಲಕ್ಷ ಕೋಟಿ ಹಣದಲ್ಲಿ ಈವರೆಗೂ ಕೇವಲ 2.06 ಲಕ್ಷ ಕೋಟಿ ಅನುದಾನ ವೆಚ್ಚವಾಗಿದ್ದು, @INCKarnataka ಸರ್ಕಾರದ ಕಾರ್ಯವೈಖರಿಗೆ ಈ ಅಂಕಿ-ಅಂಶ ಕನ್ನಡಿ ಹಿಡಿದಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ವಿಶೇಷವಾಗಿ ಸಚಿವ @PriyankKharge ಮತ್ತು ಸಚಿವ @SantoshSLadINC ಅವರ ಇಲಾಖೆಗಳ ಸಾಧನೆ ತೀರಾ ಕಳಪೆಯಾಗಿದ್ದು ಐಟಿ – ಬಿಟಿ ಇಲಾಖೆಯಲ್ಲಿ ಕೇವಲ ಶೇ.20%, ಕಾರ್ಮಿಕ ಇಲಾಖೆಯಲ್ಲಿ ಕೇವಲ ಶೇ.29% ಮತ್ತು ಆರ್ ಡಿಪಿಆರ್ ಇಲಾಖೆಯಲ್ಲಿ ಕೇವಲ ಶೇ.30% ಅನುದಾನ ವೆಚ್ಚವಾಗಿದೆ. ಅನವಶ್ಯಕ ಹೇಳಿಕೆಗಳು, ಕ್ಷುಲ್ಲಕ ರಾಜಕೀಯ, ಕುಚೋದ್ಯದಲ್ಲೇ ಕಾಲಹರಣ ಮಾಡುವ ಈ ಇಬ್ಬರೂ ಸಚಿವರು, ಇನ್ನಾದರೂ ತಮ್ಮ ಇಲಾಖೆಗಳ ಕರ್ತವ್ಯ ನಿರ್ವಹಣೆ ಬಗ್ಗೆ ಗಮನ ಹರಿಸಲಿ ಎಂದು ಆಗ್ರಹಿಸುತ್ತೇನೆಂದು ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *