ಹಾಲಿವುಡ್ ದಿಗ್ಗಜ ನಟ ಜೆನೆ ಹ್ಯಾಕ್ ಮನ್ ಮತ್ತು ಪತ್ನಿ ಬೆಟ್ಸೆ ಅರಕಾವಾ ಅಲ್ಲದೇ ಮನೆಯ ನಾಯಿ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ.
ಎರಡು ಬಾರಿಯ ಆಸ್ಕರ್ ಪ್ರಶಸ್ತಿ ವಿಜೇತ ನಟ ಜೆನೆ ಹ್ಯಾಕ್ ಮನ್ (95) ಮತ್ತು ಪತ್ನಿ ಬೆಟ್ಸೆ ಅರಕಾವಾ (63) ನ್ಯೂ ಮೆಕ್ಸಿಕೊದ ಸಾಂತಾ ಫೆ ನಗರದ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹಾಲಿವುಡ್ ನಟ ಹಾಗೂ ಪತ್ನಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
1930ರಲ್ಲಿ ಜನಿಸಿದ ಹ್ಯಾಕ್ ಮನ್ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಪೊಪೆ ಚಿತ್ರದಲ್ಲಿ ಜಿಮ್ಮಿ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಗಳಿಸಿದ್ದರು. ಅನ್ ಫರ್ಗಿವನ್ ಚಿತ್ರದಲ್ಲಿ ಲಿಟ್ಲ್ ಬಿಲ್ ಡಾಗೆಟ್ ಪಾತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟನಾಗಿ ಆಸ್ಕರ್ ಪ್ರಶಸ್ತಿ ಗಳಿಸಿದ್ದರು.