Menu

ಆಪರೇಷನ್‌ ಸಿಂಧೂರ: ಚೀನಾ ನಿರ್ಮಿತ ಪಾಕ್‌ ಯುದ್ಧ ವಿಮಾನವನ್ನು ಹೊಡೆದುರುಳಿಸಿತೇ ಭಾರತ

ಪಹಲ್ಗಾಂ ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು ಉಗ್ರರ ನೆಲೆಗಳ ಮೇಲೆ ವಾಯುಪಡೆ ಮೂಲಕ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿದ ವೇಳೆ ಚೀನಾ ನಿರ್ಮಿತ ಪಾಕಿಸ್ತಾನದ JF-17 ಯುದ್ಧ ವಿಮಾನವನ್ನು  ಹೊಡೆದು ಹಾಕಿದೆ.

ಜೆಎಫ್‌-17 ಯುದ್ಧ ವಿಮಾನ ಭಾರತದ ದಾಳಿಯನ್ನು ತಡೆಯಲು ಬಂದಾಗ ಭಾರತ ವಾಯುಸೇನೆ ಕ್ಷಿಪಣಿಯನ್ನು ಹಾರಿಸಿ ವಿಂಆನವನ್ನು ಬೀಳಿಸಿದೆ ಎಂದು ವರದಿಯಾಗಿದೆ. ಈ ವಿಚಾರದ ಬಗ್ಗೆ ಇಲ್ಲಿಯವರೆಗೆ ಭಾರತ ಸೇನೆ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಜೆಎಫ್‌ 17 ಚೀನಾ ನಿರ್ಮಿತ ಯುದ್ಧ ವಿಮಾನವಾಗಿದೆ. ಪಾಕಿಸ್ತಾನದ ಬಳಿ 150 ಜೆಎಫ್‌ 17 ವಿಮಾನಗಳಿವೆ. ಈ ಹಿಂದೆ ಅಭಿನಂದನ್‌ ವರ್ಧಮಾನ್‌ ಅಮೆರಿಕದ ಎಫ್‌ 16 ಯುದ್ಧ ವಿಮಾನ ಹೊಡೆದು ಹಾಕಿದ್ದರು.

2019ರ ಫೆ. 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಎಫ್‌ ಯೋಧರಿದ್ದ ಬಸ್ಸಿನ ಮೇಲೆ ಜೈಷ್ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದ. ಈ ದಾಳಿಯಲ್ಲಿ 40  ಯೋಧರು ಹುತಾತ್ಮರಾಗಿದ್ದರು. ಪ್ರತ್ಯುತ್ತರವಾಗಿ ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಜೈಷ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಆಗ ಅಭಿನಂದನ್ ಮಿಗ್-21 ವಿಮಾನದ ಮೂಲಕ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು.  ಅಭಿನಂದನ್ ಅವರ ಮಿಗ್-21 ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತ್ತು. 58 ಗಂಟೆ ಅಭಿನಂದನ್ ಪಾಕಿಸ್ತಾನದ ವಶದಲ್ಲಿದ್ದರು,ನಂತರ ಕೇಂದ್ರ ಸರ್ಕಾರ ಪಾಕ್ ಮೇಲೆ ಒತ್ತಡ ಹೇರಿ ಅಭಿನಂದನ್ ಅವರನ್ನು ಬಿಡಿಸಿಕೊಂಡಿತ್ತು.

Related Posts

Leave a Reply

Your email address will not be published. Required fields are marked *