Menu

ಆಪರೇಷನ್ ಸಿಂಧೂರ್: ‘ಭಾರತ ಕ್ಷಮಿಸಲ್ಲ, ಮರೆಯಲ್ಲ’ ಅಂದ್ರು ನಟ ಕಿಚ್ಚ ಸುದೀಪ್‌

ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರಿಗೆ ನ್ಯಾಯವನ್ನು ಒದಗಿಸಿದೆ ಎಂದು ಎಲ್ಲೆಡೆಯಿಂದ ಅಭಿನಂದನೆಗಳು ಸಲ್ಲುತ್ತಿವೆ. ಕನ್ನಡ ಚಿತ್ರ ರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಸಂದರ್ಭದಲ್ಲಿ ಭಾರತೀಯ ಸೇನೆಗೆ ಗೌರವ ಸಲ್ಲಿಸಿ, ‘ಭಾರತ ಕ್ಷಮಿಸಲ್ಲ, ಮರೆಯಲ್ಲ’ ಎಂಬ ಸಾಲನ್ನು ಸಾಮಾ ಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಪಹಲ್ಗಾಮ್ ದಾಳಿಯನ್ನು ತೀವ್ರವಾಗಿ ಖಂಡಿಸಿ ಆ ಕ್ರೂರ ಘಟನೆಯ ಬಗ್ಗೆ ಟ್ವೀಟ್ ಮೂಲಕ ನೋವು ವ್ಯಕ್ತಪಡಿಸಿದ್ದರು. ಈಗ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಪ್ರತಿಕ್ರಿಯಿಸಿ, “ಒಬ್ಬ ಭಾರತೀಯನಾಗಿ, ಈ ಪವಿತ್ರ ಮಣ್ಣಿನ ಮಗನಾಗಿ, ಪಹಲ್ಗಾಮ್‌ನಲ್ಲಿ ನಡೆದ ಘಟನೆಯಿಂದ ನೋವಿನ ನಡುಕವನ್ನು ಅನುಭವಿಸಿದೆ. ಇಂದು ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ,” ಎಂದು ಬರೆದಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕೇವಲ ಧ್ಯೇಯವಲ್ಲ, ಪವಿತ್ರ ಪ್ರತಿಜ್ಞೆ ಎಂದು ಕೊಂಡಾಡಿದ್ದಾರೆ. ಭಾರತದ ಸಿಂಧೂರದ ಗೌರವವನ್ನು ನಮ್ಮ ಸೈನಿಕರು ಧೈರ್ಯ ಮತ್ತು ನಿಖರತೆಯಿಂದ ಪುನಃ ಸ್ಥಾಪಿಸಿದರು. ನಮ್ಮ ಸಶಸ್ತ್ರ ಪಡೆಗಳಿಗೆ, ನನ್ನ ವಂದನೆ,” ಎಂದು ಹೇಳಿದ್ದಾರೆ. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ತೀಕ್ಷ್ಣ ಮತ್ತು ಘನತೆಯ ಮಾಹಿತಿಗಾಗಿ ವಂದನೆ ಸಲ್ಲಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ದಾಳಿಯನ್ನು ಕಿಚ್ಚ ಸುದೀಪ್ ಹೃದಯ ವಿದ್ರಾವಕ ಎಂದು ಕರೆದಿದ್ದಾರೆ. “ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ನಮ್ಮ ರಾಷ್ಟ್ರದ ಚೈತನ್ಯದ ಮೇಲಿನ ದಾಳಿ. ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡಬೇಕಾದ ಸಮಯ,” ಎಂದು ಹೇಳಿದ್ದಾರೆ. ಈ ಹೇಡಿತನದ ಹಿಂದಿರುವವರನ್ನು ತ್ವರಿತವಾಗಿ ಮತ್ತು ದೃಢವಾಗಿ ನ್ಯಾಯದ ಮುಂದೆ ತರಬೇಕು ಎಂದು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *