Menu

ದೇಗುಲದ ಕಳಸಾರೋಹಣದಲ್ಲಿ ಕ್ರೇನ್ ಬಕೆಟ್‌ ಮುರಿದು ಒಬ್ಬನ ಸಾವು

ದೇವಾಲಯದ ಕಳಸಾರೋಹಣ ನಡೆಯುವಾಗ ದಿಢೀರ್ ಕ್ರೇನ್ ಬಕೆಟ್ ಕಟ್ ಆಗಿ ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಸಂಭವಿಸಿದೆ.

ಕ್ರೇನ್ ಬಕೆಟ್ ಮೇಲಿನಿಂದ ಬಿದ್ದು ಸ್ಥಳದಲ್ಲೇ ಮಂಜು ಪಾಟೀಲ(42) ಮೃತಪಟ್ಟವರು. ಘಟನೆಯಲ್ಲಿ ಮಂಜು ಬಡಿಗೇರ್  ಗಂಭೀರ ಗಾಯಗೊಂಡಿದ್ದು, ಅವರನ್ನು ಹಾನಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶೇಷಗಿರಿ ಗ್ರಾಮದಲ್ಲಿ ನಡೆಯುತ್ತಿದ್ದ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ. ಕಳಸ ಹಿಡಿದು ಕ್ರೇನ್ ಮೂಲಕ ದೇವಸ್ಥಾನದ ಗೋಪುರದ ಹತ್ತಿರ ಹೋಗುತ್ತಿದ್ದಂತೆ ಬಕೆಟ್ ಕಳಚಿ ಬಿದ್ದು ಘಟನೆ ನಡೆದಿದೆ. ಘಟನೆಯ ವಿಡಿಯೋವನ್ನು  ನೆರೆದಿದ್ದ ಜನರು  ಮೊಬೈಲ್​​ಗಳಲ್ಲಿ ಸೆರೆಹಿಡಿದ್ದಾರೆ.

ಅಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *