ಮಂಗಳೂರಿನ ಹಿಂದೂ ಜಾಗರಣ ವೇದಿಕೆ ಮುಖಂಡನ ಮೊಬೈಲ್ ನಲ್ಲಿ ನಗ್ನ ಅಶ್ಲೀಲ ವೀಡಿಯೊಗಳು ಪತ್ತೆಯಾಗಿದ್ದು, ಮೂಡಬಿದಿರೆ ಪೊಲೀಸರು ಎಫ್ ಎಸ್ ಎಲ್ಗೆ ಕಳುಹಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ದ.ಕ ಜಿಲ್ಲಾ ಸಹಸಂಯೋಜಕ ಸಮೀತ್ ರಾಜ್ ಧರೆಗುಡ್ಡ ಎಂಬಾತ ವೀಡಿಯೊ ಕಾಲ್ ಗಳ ಸ್ಕ್ರೀನ್ ರೆಕಾರ್ಡ್ ಮಾಡುತ್ತಿದ್ದ. ಆತನ ಮೊಬೈಲ್ ನಲ್ಲಿ ೫೦ ಕ್ಕೂ ಅಧಿಕ ನಗ್ನ ವೀಡಿಯೊಗಳು ಪತ್ತೆಯಾಗಿವೆ. ಖಾಸಗಿ ಬಸ್ಗೆ ಕಲ್ಲು ತೂರಿ ಹಾನಿಗೊಳಿಸಿದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ತನಿಖೆ ನಡೆಸುವಾಗ ಈ ವೀಡಿಯೊಗಳು ಈ ಹಿಂದೆ ಪತ್ತೆಯಾಗಿವೆ.
ಸಮೀತ್ ನ ಇನ್ನೊಂದು ಮೊಬೈಲ್ ಕೂಡ ಪೊಲೀಸರು ವಶಕ್ಕೆ ಪಡೆದು ಆ ಮೊಬೈಲ್ ನ್ನೂ ಎಕ್ಸ್ಟಾಕ್ಟ್ ಮಾಡಲು ಅನುಮತಿ ಕೋರಿದ್ದಾರೆ. ಅದರಲ್ಲೂ ಅನೇಕ ವೀಡಿಯೊ ಕಾಲ್ ಸ್ಕ್ರೀನ್ ರೆಕಾರ್ಡ್ ಇರುವ ಮಾಹಿತಿಯಿದ್ದು, ಪೊಲೀಸರು ಸಮೀತ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ.
ಸಮೀತ್ ಮೊಬೈಲ್ ನಲ್ಲಿ ರಾಜಕಾರಣಿಯೋರ್ವರ ವೀಡಿಯೊ ಪತ್ತೆಯಾಗಿದೆ ಎನ್ನಲಾಗುತ್ತಿದ್ದು, ಅದರ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಮಿತ್ ನಿಂದ ಅನ್ಯಾಯಕ್ಕೊಳಗಾದ ಯುವತಿಯರು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.