Menu

ಧೂಮಪಾನ ಮಾತ್ರವಲ್ಲ ಗುಟ್ಕಾ, ಪಾನ್‌ ಬೀಡಾ ಜಗಿದು ಉಗಿಯುವುದೂ ಬ್ಯಾನ್‌

ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆ ನಿಷೇಧಿಸುವ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಾಣಿಜ್ಯ ಉತ್ಪಾದನೆ, ಸರಬರಾಜು, ವಿತರಣೆ ವಿನಿಮಯ) ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ಅನುಮೋದನೆ ನೀಡಿದ್ದು, ಇದರನ್ವಯ ರಾಜ್ಯಪತ್ರ ಪ್ರಕಟಿಸಲಾಗಿದೆ.

ಈ ತಿದ್ದುಪಡಿ ಕಾಯ್ದೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವಷ್ಟೇ ಅಲ್ಲದೆ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ಸೇವಿಸಿ ಉಗಿಯುವುದನ್ನೂ ನಿಷೇಧಿಸಲಾಗಿದೆ. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆಗೆ ₹200 ಇದ್ದ ದಂಡದ ಮೊತ್ತವನ್ನು ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ. 21 ವರ್ಷದೊಳಗಿನವರಿಗೆ ತಂಬಾಕು ಪದಾರ್ಥ ಮಾರಾಟ ನಿಷೇಧಿಸಲಾಗಿದೆ.

ಉಪಹಾರ ಗೃಹ, ಪಬ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಬ್ಯಾನ್‌ ಮಾಡಲಾಗಿದೆ. ನಿಯಮ ಮೀರಿ ಹುಕ್ಕಾ ಬಾರ್‌ ತೆರೆದರೆ ಕನಿಷ್ಠ ₹50 ಸಾವಿರದಿಂದ ₹1 ಲಕ್ಷವರೆಗೆ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

Related Posts

Leave a Reply

Your email address will not be published. Required fields are marked *