ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವ ಪ್ರಕರಣದಲ್ಲಿ ಎಸ್ ಐಟಿ ತೀವ್ರ ಕುತೂಹಲ ಮೂಡಿಸಿದ್ದ 13ನೇ ಸ್ಥಳದಲ್ಲಿ 18 ಆಳ ಅಗೆದು ಶೋಧ ಕಾರ್ಯ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಗುರುತಿಸಲಾಗಿದ್ದ 13ನೇ ಸ್ಥಳದ ಶೋಧ ಕಾರ್ಯ ಮಂಗಳವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ 7 ಗಂಟೆಯವರೆಗೂ ನಡೆದಿದೆ.
13ನೇ ಸ್ಥಳದಲ್ಲಿ ಎಸ್ ಐಟಿ 18 ಅಡಿ ಆಳ, 8 ಅಡಿ ಉದ್ದ ಹಾಗೂ 22 ಅಡಿ ಅಗಲ ಮಣ್ಣು ಅಗೆದಿದ್ದು, ಯಾವುದೇ ಕುರುಹು ಪತ್ತೆಯಾಗಿಲ್ಲ. ಇದುವರೆಗೂ 6 ಹಾಗೂ 11ಎ ಸ್ಥಳದಲ್ಲಿ ಮಾತ್ರ ಕಳೇಬರದ ಆವಶೇಷಗಳು ಪತ್ತೆಯಾಗಿದೆ.
ದೂರುದಾರ ನೀಡಿದ ಮಾಹಿತಿ ಹಾಗೂ ಜಿಪಿಆರ್ ಆಧರಿಸಿ ಎಸ್ ಐಟಿ ಮಂಗಳವಾರ ಶೋಧ ನಡೆಸಿತ್ತು. ಮಧ್ಯಾಹ್ನದ ನಂತರ ಜೆಸಿಬಿ ಮೂಲಕ ಮಣ್ಣು ಅಗೆಯುವ ಕಾರ್ಯ ಆರಂಭಿಸಲಾಯಿತು. ಅದರೆ ಭಾರೀ ಕುತೂಹಲ ಮೂಡಿಸಿದ್ದ ಜಾಗದಲ್ಲಿ ಯಾವುದೇ ಕುರುಹು ದೊರೆಯದೇ ಇರುವುದು ಕುತೂಹಲ ಮೂಡಿಸಿದೆ.
ಇದುವರೆಗೂ ನಡೆಸಿದ ಶೋಧ ಕಾರ್ಯದಲ್ಲಿ ಅತೀ ಹೆಚ್ಚು ಆಳ ಗುಂಡಿ ತೋಡಿ ಶೋಧ ನಡೆಸಿರುವುದು 13ನೇ ಸ್ಥಳದಲ್ಲಿ ಮಾತ್ರ. ಉಳಿದ ಜಾಗಗಳಲ್ಲಿ ಕೇವಲ 8ರಿಂದ 10 ಅಡಿ ಮಾತ್ರ ಗುಂಡಿ ತೋಡಿ ಶೋಧ ನಡೆಸಲಾಗಿತ್ತು.