ಪಾಕಿಸ್ತಾನ ವಿರುದ್ಧ ಯುದ್ಧ ಮಾಡಬೇಕಾಗಿಲ್ಲ. ಆದರೆ ಉಗ್ರರ ದಾಳಿಗೆ ಪ್ರತೀಕಾರವಾಗಿ ಕಠಿಣ ಕ್ರಮ ಕೈಗೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಇಡೀ ದೇಶ ಖಂಡಿಸುತ್ತದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಯುದ್ಧ ಒಳ್ಳೆಯದಲ್ಲ ಎಂದರು.
ನಾವು ಶಾಂತಿಪ್ರಿಯರು, ಯುದ್ಧದಿಂದ ಆಗುವ ಪರಿಣಾಮಗಳು ದೀರ್ಘಕಾಲ ಕಾಡುತ್ತೇವೆ. ಯುದ್ಧದಿಂದ ನಷ್ಟವೇ ಹೊರತು ಲಾಭವಿಲ್ಲ. ದೇಶ ಸಂಕಷ್ಟ ಸ್ಥಿತಿಯಲ್ಲಿ ಇರುವಾಗ ಯುದ್ಧ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಭದ್ರತೆ ಕಡೆ ಗಮನ ಹರಿಸದೇ ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡಿ ತಪ್ಪು ಮಾಡಿದ್ದೇವೆ ಎಂದು ಈಗಾಗಲೇ ಒಪ್ಪಿಕೊಂಡಿದೆ. ದೇಶದ ಜನರ ಭದ್ರತೆಗಿಂತ ಬೇರೆ ಯಾವ ವಿಷಯ ಮುಖ್ಯವಾಯಿತು ಎಂದು ಅವರು ಪ್ರಶ್ನಿಸಿದರು.
ಮೋದಿ ಭಾರತೀಯರು, ದೇಶಭಕ್ತಿ ಅಂತೆಲ್ಲಾ ಭಾಷಣ ಮಾಡುತ್ತಾರೆ. ಆದರೆ ದೇಶದ ಜನರು ರಕ್ಷಣೆ ಮುಖ್ಯ ಅಲ್ಲವೇ? ಕೇವಲ ಭಾರತೀಯರು, ದೇಶಪ್ರೇಮ ಎಲ್ಲಾ ಭಾಷಣಕ್ಕೆ ಮಾತ್ರ ಸೀಮಿತನಾ? ಪುಲ್ವಾಮಾದಲ್ಲಿ ಏನಾಯಿತು ಎಂಬುದು ಜನರಿಗೆ ಗೊತ್ತಿಲ್ಲವೇ? ಈಗ ಮತ್ತೆ ಅದು ಮರುಕಳಿಸಲು ಕಾರಣವೇನು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಪಾಕಿಸ್ತಾನ ಪ್ರಜೆಗಳನ್ನು ವಾಪಸ್ ಕಳುಹಿಸಲು ಸೂಚನೆ ಬಂದಿದೆ. ಈ ಸೂಚನೆಯನ್ನು ನಾವು ಪಾಲಿಸುತ್ತೇವೆ. ರಾಜ್ಯದಲ್ಲಿ ಇರುವ ಪಾಕ್ ಪ್ರಜೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದು ಇನ್ನಷ್ಟೇ ವರದಿ ಬರಬೇಕಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.