ಹಾಸನ ನಗರಸಭೆಯ ಅಧ್ಯಕ್ಷರ ಬದಲಾವಣೆಗೆ ಮುಂದಾಗಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದ ಜೆಡಿಎಸ್ ಮುಖಭಂಗ ಅನುಭವಿಸಿದೆ. ಜೆಡಿಎಸ್ ಹೈಕಮಾಂಡ್ ಗೆ ಸೆಡ್ಡು ಹೊಡೆದು ಹಾಲಿ ಅಧ್ಯಕ್ಷ ಎಂ.ಚಂದ್ರೇಗೌಡ ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಈ ಮೂಲಕ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಕೂಡ ಮುಖಭಂಗವಾಗಿದೆ.
ಅವಿಶ್ವಾಸ ನಿರ್ಣಯ ಮಂಡನೆಗಾಗಿ ಜೆಡಿಎಸ್ ಗೆ 26 ಸದಸ್ಯರ ಅವಶ್ಯಕತೆ ಇತ್ತು, ಆದರೆ ಅವಿಶ್ವಾಸದ ಪರ 21 ಸದಸ್ಯರು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಸದಸ್ಯೆ ವಿಜಯಮ್ಮ ಅವರನ್ನು ಜೆಡಿಎಸ್ ನವರು ಹೈಜಾಕ್ ಮಾಡಿದರೂ ಲಾಭವಾಗಲಿಲ್ಲ. ಐದು ಸದಸ್ಯರ ಕೊರತೆಯಿಂದ ಅವಿಶ್ವಾಸ ಮಂಡನೆಯಲ್ಲಿ ಜೆಡಿಎಸ್ ಸೋತರೆ ಪ್ರೀತಂ ಮತ್ತು ಸಂಸದ ಶ್ರೇಯಸ್ ಜೋಡಿ ಮೇಲುಗೈ ಸಾಧಿಸಿದೆ.
ಅವಿಶ್ವಾಸದ ವಿರುಧ್ಧ ಸಂಸದ ಶ್ರೇಯಸ್ ಪಟೇಲ್ ಸೇರಿ 16 ಮತ ಚಲಾವಣೆಗೊಂಡಿವೆ. ನಗರಸಭೆಯಲ್ಲಿ ಜೆಡಿಎಸ್ ಅನ್ನು ಮಣಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಕೈ ಜೋಡಿಸಿ ನಡೆಸಿದ ಪ್ರಯತ್ನ ಫಲ ನೀಡಿದೆ.