Menu

ಏಪ್ರಿಲ್‌ನಿಂದ ಹೈವೇ ಟೋಲ್ ಪ್ಲಾಜಾದಲ್ಲಿ ನಗದು ಪಾವತಿ ಇಲ್ಲ

toll gate

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಬಳಿ ನಗದು ಪಾವತಿಗೆ ಸಮಯ ಹಿಡಿಯುವ ಕಾರಣ ವಾಹನಗಳ ದಟ್ಟಣೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಕ್ರಮ ಕೈಗೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2026 ಏಪ್ರಿಲ್ 1 ರಿಂದ ದೇಶದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ನಿಷೇಧಿಸಲಿದೆ.

ವಾಹನ ಸವಾರರು/ಪ್ರಯಾಣಿಕರು ಹೆದ್ದಾರಿಗಳಲ್ಲಿ ಟೋಲ್‌ಗಳನ್ನು ಪಾವತಿಸಲು FAS Tag ಅಥವಾ ಯುಪಿಐ ವ್ಯವಸ್ಥೆ ಬಳಸಬೇಕಾಗುತ್ತದೆ. ನಗದು ಹಣ ಪಾವತಿ ಸಂಪೂರ್ಣ ನಿಷೇಧವಾಗಲಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸಬೇಕಿದೆ. ಈ ಕ್ರಮವು ದೀರ್ಘ ಸರತಿ ಸಾಲುಗಳನ್ನು ನಿವಾರಿಸುತ್ತದೆ. ಹೆದ್ದಾರಿಗಳಲ್ಲಿ ಪ್ರಯಾಣ ಹೆಚ್ಚು ಸುಗಮವೆನಿಸಲಿದೆ. ಆದಷ್ಟು ಶೀಘ್ರ ಪ್ರಯಾಣಿಕರು ಡಿಜಿಟಲ್ ಪಾವತಿ ವ್ಯವಸ್ಥೆಗೆ ಬದಲಾಗಬೇಕಿದೆ.

ಪ್ರಯಾಣದಲ್ಲಿ ವಾಹನ ಸವಾರರು/ಪ್ರಯಾಣಿಕರು ನಗದು ಪಾವತಿಸಿ ಹಸ್ತಚಾಲಿತ ರಶೀದಿಗಳಿಗಾಗಿ ಕಾಯುವುದು ತಪ್ಪಲಿದೆ. ಇಂಧನ ಉಳಿತಾಯ ಆಗುತ್ತದೆ. ಟೋಲ್ ಬೂತ್‌ಗಳಲ್ಲಿ ವಾಹನಗಳ ಆನ್ ಆಂಡ್ ಆಫ್ ಮಾಡುವ ಅಗತ್ಯ ಇರುವುದಿಲ್ಲ. ಡಿಜಿಟಲ್ ಪಾವತಿ ಹೆಚ್ಚಾದರೆ ಎಲ್ಲಾ ವಹಿವಾಟುಗಳನ್ನು ಸ್ಪಷ್ಟವಾಗಿ ಟ್ರ್ಯಾಕ್ ಮಾಡಬಹುದಾಗಿದೆ.

ಈ “ನೋ-ಸ್ಟಾಪ್” ವ್ಯವಸ್ಥೆಗಾಗಿ ಪೈಲಟ್ ಯೋಜನೆ ಈಗಾಗಲೇ ಭಾರತದಾದ್ಯಂತ 25 ಟೋಲ್ ಪ್ಲಾಜಾಗಳಲ್ಲಿ ಜಾರಿಯಲ್ಲಿದೆ. ಹೆದ್ದಾರಿ ಸವಾರರು ಫಾಸ್ಟ್ಯಾಗ್ ಸಕ್ರಿಯವಾಗಿದೆಯೇ, ಅದರಲ್ಲಿ ಅಗತ್ಯ ಬ್ಯಾಲೆನ್ಸ್ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

Related Posts

Leave a Reply

Your email address will not be published. Required fields are marked *