Menu

ಉಗ್ರ ನಸೀರ್‌ಗೆ ಜೈಲಿನಲ್ಲಿ ನೆರವು: ಮೂವರ ವಿರುದ್ಧ ಎನ್‌ಐಎ ಹೆಚ್ಚುವರಿ ಚಾರ್ಜ್ ಶೀಟ್

ಉಗ್ರ ನಸೀರ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೆರವು ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಎನ್‌ಐಎ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದೆ. ಸಿಎಆರ್ ಕಾನ್ಸ್ಟೇಬಲ್‌ ಚಾಂದ್ ಪಾಷಾ, ಅನಿಸಾ ಫಾತಿಮಾ, ಜೈಲಿನಲ್ಲಿ ಮನೋವೈದ್ಯನಾಗಿದ್ದ ಡಾ ನಾಗರಾಜ್ ವಿರುದ್ಧ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಪರಾರಿಯಾಗಿದ್ದ ಜುನೈದ್ ಸೇರಿ ಒಂಬತ್ತು ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು, ಇದೀಗ ಮೂವರು ಆರೋಪಿಗಳ ವಿರುದ್ಧ ಎನ್‌ಐಎ ಹೆಚ್ಚುವರಿಯಾಗಿ ಚಾರ್ಜ್ ಶೀಟ್ ಸಲ್ಲಿಸಿದೆ. ಜುನೈದ್ ಅಹಮದ್ ತಾಯಿ ಅನಿಸ್ ಫಾತಿಮಾ, ಉಗ್ರ ನಸೀರ್ ಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದ್ದಳು, ಮಗನ‌ ಸೂಚನೆಯಂತೆ ಹ್ಯಾಂಡ್ ಗ್ರೈನೇಡ್, ವಾಕಿಟಾಕಿ ನಿರ್ವಹಣೆ, ಆರೋಪಿಗಳ ನಡುವೆ ಸಂಪರ್ಕಕ್ಕೆ ವ್ಯವಸ್ಥೆ ಮಾಡಿದ್ದು, ಆರೋಪಿ ಸಲ್ಮಾನ್ ಖಾನ್ ಪರಾರಿಯಾಗಲು ನೆರವು ನೀಡಿದ್ದಳು.

ಸಿಎಆರ್ ಎಎಸ್ಐ ಆಗಿದ್ದ ಚಾಂದ್ ಪಾಷಾ ಉಗ್ರ ನಸೀರ್‌ನ ಮಾಹಿತಿ ರವಾನಿಸುತ್ತಿದ್ದ, ಬೆಂಗಾವಲು ಪಡೆ ವಿವರಗಳನ್ನು ಸಲ್ಮಾನ್ ಖಾನ್‌ಗೆ ತಿಳಿಸುತ್ತಿದ್ದ. ಇವರೆಲ್ಲ ಹಣದ ಆಸೆಗಾಗಿ ಶಂಕಿತ ಉಗ್ರರ ಮಾಹಿತಿ ಸೋರಿಕೆ ಮಾಡಿದ್ದರು. ಡಾ ನಾಗರಾಜ್. ಕಾನೂನು ಬಾಹಿರವಾಗಿ ಜೈಲಿನಲ್ಲಿ ಕೈದಿಗಳಿಂದ ಹಣ ಪಡೆದು ಮೊಬೈಲ್ ಮಾರಾಟ ಮಾಡುತ್ತಿದ್ದ. ಉಗ್ರ ನಾಸೀರ್‌ಗೂ ಮೊಬೈಲ್ ಮಾರಾಟ ಮಾಡಿದ್ದ. ಆ ಮೊಬೈಲ್ ಮೂಲಕ ನಸೀರ್ ಭಯೋತ್ಪಾದನಾ ಕೃತ್ಯ ರೂಪಿಸುತ್ತಿದ್ದ.

2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೇಡ್‌ಗಳು ಪತ್ತೆಯಾಗಿದ್ದವು. ಉಗ್ರ ನಸೀರ್‌ ಜುನೈದ್ ಮೂಲಕ ತರಿಸಿದ್ದ. ಎನ್‌ಐಎ ಪ್ರಕರಣದ ವಿಚಾರಣೆ ನಡೆಸಿತ್ತು. ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಆತ ಅಲ್ಲಿದ್ದುಕೊಂಡೇ ಹಲವು ಯುವಜನರನ್ನು ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಜೈಲಿನಲ್ಲಿದ್ದುಕೊಂಡೇ ಬೆಂಗಳೂರು 2008ರ ಸರಣಿ ಬಾಂಬ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿ ಹಲವು ಪ್ರಕರಣಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಬೆಂಳೂರಿನಲ್ಲಿ ದೊಡ್ಡಮಟ್ಟದ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಎಂಬುದು ಕೂಡ ಬಯಲಾಗಿತ್ತು.

Related Posts

Leave a Reply

Your email address will not be published. Required fields are marked *