Menu

ಪ್ರೆಸ್​ ಕ್ಲಬ್​ ಕೌನ್ಸಿಲ್​ನ ಮಹಿಳಾ ರಾಜ್ಯಾಧ್ಯಕ್ಷೆ ಸ್ಥಾನದ ಆಮಿಷ: 20 ಲಕ್ಷ ರೂ. ವಂಚನೆ

ಕರ್ನಾಟಕ ಪ್ರೆಸ್​ ಕ್ಲಬ್​ ಕೌನ್ಸಿಲ್​ನ ಮಹಿಳಾ ರಾಜ್ಯಾಧ್ಯಕ್ಷೆ ಸ್ಥಾನ ಮತ್ತು ವಿಶ್ವ ಕನ್ನಡ ಹಬ್ಬದ ನಿರ್ದೇಶಕಿ ಸ್ಥಾನ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ.. ವಂಚಿಸಿದ್ದ ಆರೋಪಿಯನ್ನು ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿಜಯನಗರದ ಅಮರಜ್ಯೋತಿನಗರದ ನಿವಾಸಿಯಾಗಿರುವ ಕಣ್ಣು ಪತ್ರಿಕೆ ಸಂಪಾದಕ ಹಾಗೂ ಕರ್ನಾಟಕ ಪ್ರೆಸ್‌ ಕ್ಲಬ್‌ ಕೌನ್ಸಿಲ್‌ ಅಧ್ಯಕ್ಷ ಶಿವಕುಮಾರ್ ನಾಗರನವಿಲೆ ಬಂಧಿತ ಆರೋಪಿ.  ಹೊಂಗಸಂದ್ರ ಮುಖ್ಯ ರಸ್ತೆಯಲ್ಲಿನ ನ್ಯೂ ಮೈಕೋ ಲೇಔಟ್‌ ನಿವಾಸಿ ಬಿ.

ಎಲ್ಲ ಧರ್ಮದವರು ಭೂ ವರಾಹಸ್ವಾಮಿಗೆ ಪ್ರಾರ್ಥನೆ ಸಲ್ಲಿಸುವುದು ಖುಷಿ ವಿಚಾರ: ಡಿಕೆ ಶಿವಕುಮಾರ್‌

ಮಂಡ್ಯ ಜಿಲ್ಲೆಯ ಅದ್ಭುತ, ಐತಿಹಾಸಿಕ ದೇವಾಲಯವಾಗಿ ಭೂ ವರಾಹ ಸ್ವಾಮಿ ಸನ್ನಿಧಿ ಪ್ರಸಿದ್ಧವಾಗಿದೆ.. ಎಲ್ಲಾ ಧರ್ಮದ ಜನ ಈ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಅದನ್ನು ನೋಡಿ ಖುಷಿ ಎನಿಸಿತು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ಭೂವರಾಹಸ್ವಾಮಿ ದೇವಾಲಯದ ಬಳಿ

ಸಿದ್ದರಾಮಯ್ಯ ಮಾತು  ತಪ್ಪಿದ ಮಗ ಆಗ್ತಾರಾ: ಶ್ರೀ ರಾಮುಲು

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ ಅವರು ಬ್ರೇಕ್ ಫಾಸ್ಟ್‌, ಲಂಚ್, ಡಿನ್ನರ್ ಮೀಟಿಂಗ್ ಮಾಡಿಕೊಂಡು ಓಡಾಡುತ್ತಿದ್ದಾರೆ. ಜೊತೆಗೆ ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಅಂತ ಹೇಳ್ತಾಯಿದ್ದಾರೆ. ಇದೆಲ್ಲ ರಾಜ್ಯದ ಜನರಿಗೆ ಬೇಕಾಗಿಲ್ಲ. ಅಭಿವೃದ್ಧಿ ಒಂದೇ ಬೇಕಾಗಿದೆ. ಸಿಎಂ ಸಿದ್ದರಾಮಯ್ಯ “ತಮ್ಮ ಸ್ಥಾನ

ರಷ್ಯಾದ ನೌಕಾಪಡೆಯ `ವಿರಾಟ್’ ಮೇಲೆ ದಾಳಿ!

ಇಸ್ತಾನ್‌ಬುಲ್: ರಷ್ಯಾದ ನೌಕಾಪಡೆಯ ನೆರಳಿನಂತೆ ಕಾರ್ಯ ನಿರ್ವಹಿಸುವ ಹಡಗಿನ ಮೇಲೆ ಅಪರಿಚಿತರು ಮಾನವ ರಹಿತ ದೋಣಿ ಬಳಸಿ ಸ್ಫೋಟಗೊಳಿಸಿದ ಘಟನೆ ಟರ್ಕಿಯ ಕಪ್ಪು ಸಮುದ್ರದ ಕರಾವಳಿಯಲ್ಲಿ ನಡೆದಿದೆ. ಶುಕ್ರವಾರ ಮುಂಜಾನೆ ತಡರಾತ್ರಿ ಟರ್ಕಿಯ ಕಪ್ಪು ಸಮುದ್ರ ಕರಾವಳಿಯಲ್ಲಿ ರಷ್ಯಾದ ಹಡಗು ವಿರಾಟ್

ಕೋಲಾರದಲ್ಲಿ ಭೀಕರ ಅಪಘಾತ: ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ 5 ಮಂದಿ ಸಾವು

ಬಂಗಾರಪೇಟೆ:  ಯಮ್ಮಿಗನೂರು ಮಂಡಲದ ಕೋಟೆಕಲ್ ತಿರುವಿನ ಬಳಿ ಫಾರ್ಚೂನರ್ ಎಸ್‌ಯುವಿ ಮತ್ತು ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ಹುಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೊಸಹಳ್ಳಿ

20 ದಿನಗಳ ಕಾಲ ಅಧಿವೇಶನ ನಡೆಸಲು ಆರ್‌.ಅಶೋಕ ಆಗ್ರಹ

ಬೆಂಗಳೂರು: ಈ ಬಾರಿಯ ಅಧಿವೇಶನವನ್ನು 8 ದಿನಗಳ ಬದಲು 20 ದಿನಗಳ ಕಾಲ ನಡೆಸಬೇಕು ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಅಧಿವೇಶನ ಸಂಬಂಧ ನಡೆದ ಬಿಜೆಪಿ-ಜೆಡಿಎಸ್‌ ಸಮನ್ವಯ

ಅಧಿಕಾರಕ್ಕಾಗಿ ಜಾತಿ, ಧರ್ಮದ ಹೆಸರು ಬಳಕೆ ಸರಿಯಲ್ಲ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೆ, ಅಧಿಕಾರ ಹೋದಾಗ ನಾನು ಮಠಾಧೀಶರು, ಸಮುದಾಯದ ನೆರವು ಕೇಳಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸ್ವಾಮೀಜಿಗಳ ಬೆಂಬಲ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಎರಡು

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಕೊಂದ ಪತ್ನಿ!

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತಿಯನ್ನೇ ಪತ್ನಿ ಕೊಲೆ ಮಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಪತ್ನಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ನೆಲಮಂಗಲದ ಗಂಗೊಂಡನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಭಾನುವಾರ ವ್ಯಕ್ತಿಯೊಬ್ಬರ ಸುಟ್ಟ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ

ಪ್ರೀತಿಸಿ ಮದುವೆ ಆಗಿದ್ದ ಅನ್ಯ ಕೋಮಿನ ಪತ್ನಿಯನ್ನೇ ಕೊಂದ ಪತಿ!

ಚಿಕ್ಕಬಳ್ಳಾಪುರ: ಸಮಾಜದ ವಿರೋಧದ ನಡುವೆಯೂ ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ ಚಾಲಕ ಆಕೆಯ ಶೀಲವನ್ನು ಶಂಕಿಸಿ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಗೆರಿಗೆರೆಡ್ಡಿಪಾಳ್ಯ ಅಲಿಯಾಸ್ ಪಾತೂರಿನ ನಿವಾಸಿ  ಡ್ರೈವರ್ ಆಗಿದ್ದ ಬಾಲು

ವಾಹನ ಡಿಕ್ಕಿ ಹೊಡೆದು ಅರಣ್ಯದಲ್ಲಿ ರಸ್ತೆ ದಾಟುತ್ತಿದ್ದ ಚಿರತೆ ಸಾವು

ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಚಿರತೆ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕೋಣಕೆರೆ ಗ್ರಾಮದ ಬಳಿ ಶನಿವಾರ ಸಂಭವಿಸಿದೆ. ಅರಣ್ಯ ಪ್ರದೇಶದಲ್ಲಿ ನಿಧಾನವಾಗಿ ವಾಹನ ಚಲಾಯಿಸಿಕೊಂಡು ಹೋಗಬೇಕು ಎಂಬಸೂಚನೆ ಇದ್ದರೂ ಅತೀ ವೇಗವಾಗಿ ಚಲಾಯಿಸಿದ್ದ ವಾಹನ