Featured
ಕೆಂಪುಕೋಟೆಯಲ್ಲಿ ಮೃತಪಟ್ಟವರ 8 ಶವಗಳ ಗುರುತು ಪತ್ತೆ
ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ರಾತ್ರಿ ಕಾರು ಸ್ಫೋಟಗೊಂಡ ಪ್ರಕರಣದಲ್ಲಿ ಮೃತಪಟ್ಟವರ 8 ಶವದ ಗುರುತು ಪತ್ತೆ ಹಚ್ಚಲಾಗಿದೆ. ಮೆಟ್ರೋ ನಿಲ್ದಾಣದ ಸಮೀಪ ಸೋಮವಾರ ಸಂಜೆ ನಡೆದ ಭಾರಿ ಕಾರು ಸ್ಫೋಟದಲ್ಲಿ ಮೃತಪಟ್ಟವರ ದೇಹಗಳು ಛಿದ್ರವಿದ್ರಗೊಂಡಿದ್ದರಿಂದ ಗುರುತು ಪತ್ತೆಹಚ್ಚುವುದು ಕಷ್ಟವಾಗಿತ್ತು. ಸ್ಫೋಟದಲ್ಲಿ ಈವರೆಗೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಪೈಕಿ ಎಂಟು ಜನರನ್ನು ಗುರುತಿಸಲಾಗಿದೆ. ಉಳಿದವರ ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿವೆ. ಮೃತದೇಹಗಳ ಬಗ್ಗೆ ವಿಚಾರಿಸಲು ಸಂಬಂಧಿಕರು
ತಿಥಿ ಚಿತ್ರದ ಗಡ್ಡಪ್ಪ ಖ್ಯಾತಿಯ ನಟ ವಿಧಿವಶ
`ತಿಥಿ’ ಖ್ಯಾತಿಯ ನಟ ಗಡ್ಡಪ್ಪ ಎಂದೇ ಖ್ಯಾತರಾದ ಚನ್ನೇಗೌಡ ಅನಾರೋಗ್ಯದಿಂದ ನಿಧನರಾಗಿದ್ದು, ಅವರಿಗೆ 89 ವರ್ಷ ವಯಸ್ಸಾಗಿತ್ತು. ಮಂಡ್ಯ ಜಿಲ್ಲೆಯ ನೊದೆ ಕೊಪ್ಪಲು ಗ್ರಾಮದ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸ್ವಗ್ರಾಮ ನೊದೆಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪ ಅಂತ್ಯಕ್ರಿಯೆ ನಡೆದಿದೆ. ಅಸ್ತಮಾ
ಧರ್ಮಸ್ಥಳ ಪ್ರಕರಣದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತಿಟ್ಟಿದ್ದಾರೆ ಎನ್ನಲಾದ ಪ್ರಕರಣದ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದ್ದ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮುಂದುವರೆಯಲಿದ್ದು, ಪಿತೂರಿ ನಡೆಸಿದ ಆರೋಪ ಎದುರಿಸುತ್ತಿದ್ದ
ಬಿಹಾರ ಚುನಾವಣೆ ಫಲಿತಾಂಶ ಬಳಿಕ ಮತಗಳ್ಳತನ ಆರೋಪ ಮಾಡುತ್ತಾರೆ: ಆರ್ ಅಶೋಕ
ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದ್ದರಿಂದ ಫಲಿತಾಂಶ ಬಂದ ಬಳಿಕ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡುವುದು ಖಂಡಿತ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದ ಚುನಾವಣೆ ಪ್ರತಿಷ್ಠಿತ ಚುನಾವಣೆಯಾಗಿದೆ.
ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದೆ : ಸಿಎಂ ಸಿದ್ದರಾಮಯ್ಯ
ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠವನ್ನು ಸ್ಥಾಪಿಸಿದ್ದು ನಾನು. ನಾನು ಮೊದಲಿಂದಲೂ ಸನಾತನವಾದಿ RSS ಗೆ ವಿರುದ್ಧ, ಜಾತಿ ವ್ಯವಸ್ಥೆ ಮತ್ತು ಮೌಢ್ಯದ ವಿರುದ್ಧ ಇದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು
ಶ್ರೀ ಸತ್ಯ ಸಾಯಿ ಬಾಬಾ 100ನೇ ಜಯಂತಿ ಸ್ಮರಣಾರ್ಥ 160 ಕಿ.ಮೀ. ವಿಶಿಷ್ಟ ಸೈಕ್ಲಿಂಗ್ ಯಾತ್ರೆ
ಬೆಂಗಳೂರು: ಶ್ರೀ ಸತ್ಯ ಸಾಯಿ ಇನ್ಸ್‌ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ (ಎಸ್ಎಸ್ಐಎಚ್ಎಲ್) ಸುಸ್ಥಿರತೆ (ಎಸ್), ಜಾಗೃತಿ (ಎ) ಮತ್ತು ಒಳಗೊಳ್ಳುವಿಕೆ (ಐ) ಅನ್ನು ಉತ್ತೇಜಿಸುವ ಉಪಕ್ರಮಗಳ ಭಾಗವಾಗಿ ಮತ್ತು ಅದರ ಸಂಸ್ಥಾಪಕ ಕುಲಪತಿ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ
ನಕಲಿ ಅರೆಸ್ಟ್ ವಾರಂಟ್: ಮಹಿಳೆಯಿಂದ 99 ಲಕ್ಷ ರೂ. ದೋಚಿದ ಸೈಬರ್ ಖದೀಮರು
ಪುಣೆಯಲ್ಲಿ ನಕಲಿ ಅರೆಸ್ಟ್ ವಾರಂಟ್ ನೀಡಿದ ಸೈಬರ್ ವಂಚಕರು ಮಹಿಳೆಯ ಬ್ಯಾಂಕ್ ಖಾತೆಯಿಂದ 99 ಲಕ್ಷ ರೂ. ದೋಚಿದ್ದಾರೆ. ಖದೀಮರು ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಿ 62 ವರ್ಷದ ಮಹಿಳೆಯನ್ನು ಹೆದರಿಸಿ ಆನ್ಲೈನ್ನಲ್ಲೇ ಹಣ ವಂಚಿಸಿದ್ದಾರೆ. ಮಹಿಳೆಯು ಪುಣೆಯ ಕೊತ್ರುಡ್ ನಿವಾಸಿಯಾಗಿದ್ದು, ನಿವೃತ್ತ
ಟನಲ್ ರಸ್ತೆ ಡಿಪಿಆರ್ ಚಿನ್ನದ ಕಾಗದದ ಮೇಲೆ ಬರೆಯಲಾಗುತ್ತೋ: ಡಿಕೆ ಶಿವಕುಮಾರ್‌ಗೆ ಕುಟುಕಿದ ಆರ್ ಅಶೋಕ
ಡಿಸಿಎಂ ಡಿಕೆಶಿವಕುಮಾರ್ ಸಾರ್ ಯಾಕಿಷ್ಟು ದುಬಾರಿ ಡಿಪಿಆರ್, 2.2 ಕಿ.ಮೀ. ಟನಲ್ ರಸ್ತೆಗೆ ₹1,385 ಕೋಟಿ ಡಿಪಿಆರ್ ಸಿದ್ದಪಡಿಸಲಾಗಿದೆ. ತಾವು ಮಾಡಿಸುವ ಡಿಪಿಆರ್ ಗಳು ಚಿನ್ನದ ಕಾಗದದ ಮೇಲೆ ಬರೆಯಲಾಗುತ್ತೋ ಅಥವಾ ಚಿನ್ನದ ಶಾಹಿಯಿಂದ ಮುದ್ರಣ ಆಗುತ್ತೋ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ಸೊಸೆಗೆ ಲೈಂಗಿಕ ಕಿರುಕುಳ; ತಂದೆಯ ಹತ್ಯೆಗೈದ ಮಗ
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ಮಗನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಶಿವಲಿಂಗಪ್ಪ (60) ಕೊಲೆಯಾದವ. ಮಗ ಶಂಕ್ರಪ್ಪ ಕೊಲೆ ಆರೋಪಿ. ಶಿವಲಿಂಗಪ್ಪ ತನ್ನ ಪತ್ನಿಗೆ ನಿತ್ಯವೂ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ.
ಬೆಂಗಳೂರಿನಲ್ಲಿ ಮಾತು ಬಾರದ, ಕಾಲು ಸ್ವಾಧೀನವಿಲ್ಲದ ಯುವತಿ ಮೇಲೆ ರೇಪ್
ಬೆಂಗಳೂರಿನ ಆಡುಗೋಡಿಯ ಎಂ.ಆರ್.ನಗರದಲ್ಲಿ ಮಾತು ಬಾರದ ಕಾಲು ಸ್ವಾಧೀನವಿಲ್ಲದ ಯುವತಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿರುವ ಪೈಶಾಚಿಕ ಕೃತ್ಯ ನಡೆದಿದೆ. ಮಾತು ಬಾರದ ಕಾಲು ಸ್ವಾಧೀನವಿಲ್ಲದ ಯುವತಿ ಬೆಳವಣಿಗೆ ಇಲ್ಲದೆ ಮಗುವಿನಂತೆ ಇದ್ದರೂ ಕಾಮುಕ ಮನೆಗೆ ನುಗ್ಗಿ ಅತ್ಯಾಚಾರ ನಡೆಸಿರುವುದಕ್ಕೆ ಸಾರ್ವಜನಿಕರು




