Menu

ಕೆಮ್ಮು ಸಿರಪ್‌ ಸೇವಿಸಿದ ಎಂಟು ಮಕ್ಕಳ ಸಾವು

ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಒಟ್ಟು ಎಂಟು ಮಕ್ಕಳು ಮೃತಪಟ್ಟಿದ್ದಾರೆ. ಔಷಧವು ವಿಷಯುಕ್ತವಾಗಿರಬಹುದು ಎಂಬ ಅನುಮಾನ ಪೋಷಕರು ಮತ್ತು ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.  ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, ಸಿರಪ್ ಸೇವಿಸಿದ ಒಬ್ಬ ಹಿರಿಯ ವೈದ್ಯರೂ ಪ್ರಜ್ಞಾಹೀನ ಆಗಿರುವುದಾಗಿ ವರದಿಯಾಗಿದೆ. ಮಧ್ಯಪ್ರದೇದ ಛಿಂದ್ವಾರಾ ಜಿಲ್ಲೆಯಲ್ಲಿ ಆರು ಮಕ್ಕಳು ಸಿರಪ್‌ ಸೇವಿಸಿದ ಬಳಿಕ ಅಸು ನೀಗಿದ್ದಾರೆ. ಸೆಪ್ಟೆಂಬರ್ 4ರಿಂದ 26ರ ನಡುವೆ ಎರಡು ರೀತಿಯ ಕೆಮ್ಮಿನ ಸಿರಪ್‌ಗಳನ್ನು

ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್‌. ಅಶೋಕ

ರಾಜ್ಯದ ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಬರ್, ಡಿಸೆಂಬರ್ ತಿಂಗಳಲ್ಲಿ ಕ್ರಾಂತಿ ಅಂದಿದ್ದ ಒಬ್ಬರು ಸಚಿವರು ಮನೆಗೆ ಹೋಗಿದ್ದಾರೆ‌. ಒಪ್ಪಂದ ಆಗಿರುವುದು ನಿಜ. ಈಗ ಜಗಳ ಆರಂಭವಾಗಿದೆ‌ ನವೆಂಬರ್-ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು

ಮಾಲೂರಿನಲ್ಲಿ ಬಾಲಕಿಯ ಜೀವ ತೆಗೆದ ನಕಲಿ ವೈದ್ಯನ ಚಿಕಿತ್ಸೆ

ಕೋಲಾರದ ಮಾಲೂರಿನ ದೊಡ್ಡಿಗ್ಗಲೂರು ಗ್ರಾಮದಲ್ಲಿ ಎಂಟು ವರ್ಷದ ಬಾಲಕಿ ಈ ನಕಲಿ ವೈದ್ಯರ ಚಿಕಿತ್ಸೆಗೆ ಪ್ರಾಣ ಕಳೆದುಕೊಂಡಿದ್ದಾಳೆ. ಜ್ವರ ಎಂದು ಆಸ್ಪತ್ರೆಗೆ ಹೋದ ಮಗುವಿಗೆ ನೀಡಿದ ಇಂಜೆಕ್ಷನ್​ನಿಂದಲೇ ಮಗು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಗೆ ಚಿಕಿತ್ಸೆ

ಪಿಒಕೆಯಲ್ಲಿ ಜನ ದಂಗೆ: 12 ಪ್ರತಿಭಟನಾಕಾರರ ಸಾವು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನ ತಾರತಮ್ಯ ಖಂಡಿಸಿ ದಂಗೆ ಎದ್ದಿದ್ದು, ಅನಿರ್ದಿಷ್ಟಾವಧಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.  ಪ್ರತಿಭಟನೆ ಹತ್ತಿಕ್ಕಲು ಪಾಕ್‌ ಸರ್ಕಾರ ಲಾಠಿ ಚಾರ್ಜ್‌, ಗೋಲಿಬಾರ್‌ ನಡೆಸಿದ್ದು, ಪೊಲೀಸರು ಮತ್ತು ಸೇನೆಯ ಗುಂಡಿನ ದಾಳಿಗೆ ಗುರುವಾರ 12 ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.

ತುಮಕೂರಿನಲ್ಲಿ ಮಗಳ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಮಾನಸಿಕ ಅಸ್ವಸ್ಥ ತಾಯಿ

ತುಮಕೂರಿನ ಮೆಗ್ಗಾನ್ ಆಸ್ಪತ್ರೆ ಕ್ವಾರ್ಟಸ್‌ನಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ತನ್ನ ಹನ್ನೊಂದು ವರ್ಷದ ಮಗಳನ್ನು ಕೊಲೆ ಮಾಡಿದ ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 11 ವರ್ಷದ ಪೂರ್ವಿಕ ಕೊಲೆಯಾಗಿರುವ ಮಗು, 38 ವರ್ಷದ ಶೃತಿ ಮಗಳ ಕೊಲೆಗೈದು ಆತ್ಮಹತ್ಯೆ

ದಸರಾದಲ್ಲಿ ಜೀಪ್‌ ಪರೇಡ್‌: ಸಿಎಂ, ಡಿಸಿಎಂ ಜತೆಗಿದ್ದ ಬಾಲಕ ಯಾರು?

ನಾಡಹಬ್ಬ ದಸರಾ ಸರ್ಕಾರಿ ಕಾರ್ಯಕ್ರಮ, ಈ ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಕುಟುಂಬದವರು ಭಾಗಿಯಾಗಿರುವ ಕಾರಣಕ್ಕೆ ಕಾಂಗ್ರೆಸ್‌ ಹೈ ಕಮಾಂಡ್‌ಗೆ ದೂರು ಸಲ್ಲಿಕೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೈಸೂರಿನಲ್ಲಿ ಸಿಎಂ ಹಾಗೂ ಡಿಸಿಎಂ ತೆರೆದ ಜೀಪ್‌ನಲ್ಲಿ ಗುರುವಾರ

ಜನ ವಿಶ್ವಾಸ್ ಮಸೂದೆ-2055 ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ನೇಮಕ

ಜನ ವಿಶ್ವಾಸ್ (ತಿದ್ದುಪಡಿ) ಮಸೂದೆ-2055 ಪರಿಶೀಲನೆಗಾಗಿ ರಚನೆಯಾಗಿರುವ ಸಂಸದೀಯ ಸ್ಥಾಯಿ ಸಮಿತಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಸೂದೆಯನ್ನು ಆಗಸ್ಟ್ 18-2025 ರಂದು ಸ್ಥಾಯಿ ಸಮಿತಿಗೆ ವಹಿಸಲಾಗಿತ್ತು. ತೇಜಸ್ವಿ ಸೂರ್ಯ ಅಧ್ಯಕ್ಷತೆಯಲ್ಲಿ ಸಮಿತಿಯು

ಬೆಂಗಳೂರಿನಲ್ಲಿ ಪತ್ನಿ ಜೊತೆಗಿನ ಸೆಕ್ಸ್‌ ವೀಡಿಯೊ ಸ್ನೇಹಿತರಿಗೆ ಶೇರ್‌: ವಿಕೃತ ಪತಿ ವಿರುದ್ಧ ಎಫ್‌ಐಆರ್‌

ಪತ್ನಿಗೆ ತಿಳಿಯದಂತೆ ಆಕೆ ಜತೆಗಿನ ಲೈಂಗಿಕ ಕ್ರಿಯೆಯ ವೀಡಿಯೊ ಮಾಡಿ ಸ್ನೇಹಿತರಿಗೆ ಕಳುಹಿಸುತ್ತಿದ್ದ ವಿಕೃತ ವ್ಯಕ್ತಿಯೊಬ್ಬನ ವಿರುದ್ಧ ಆತನ ಪತ್ನಿಯೇ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ಸೈಯದ್ ಇನಾಮುಲ್ ಎಂಬಾತನೊಂದಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂತ್ರಸ್ತೆಯ ಮದುವೆಯಾಗಿದೆ. ಆತ ಮನೆಯ

ಇನ್ಸುರೆನ್ಸ್‌ ಹಣ ಪಡೆಯಲು ಸಂಚು: ಹೊಸಪೇಟೆಯ ವೃದ್ಧನ ಕೊಲೆಗೈದ ಗ್ಯಾಂಗ್‌ ಅರೆಸ್ಟ್‌

ಹೊಸಪೇಟೆ ಹೊರವಲಯದಲ್ಲಿ  ವಂಚಕರ ಗ್ಯಾಂಗೊಂದು 5.20 ಕೋಟಿ ರೂ. ಇನ್ಶೂರೆನ್ಸ್ ಹಣವನ್ನು ಪಡೆದುಕೊಳ್ಳುವ ಸಂಚು ರೂಪಿಸಿ ಅದಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿದ ಘಟನೆ ನಡೆದಿದ್ದು, ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಹೊಸಪೇಟೆ ಕೌಲ್ ಪೇಟೆಯ ನಿವಾಸಿ ಗಂಗಾಧರ ಕೊಲೆಯಾಗಿರುವ

ಗಾಜಾ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: 57 ಪ್ಯಾಲೆಸ್ತೀನಿಯನ್ನರ ಸಾವು

ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧ ಮುಂದುವರಿದಿದ್ದು, ಗಾಜಾ ಮೇಲೆ ಇಸ್ರೇಲ್ ನಿತ್ಯ ವಾಯು ದಾಳಿ ನಡೆಸುತ್ತಲೇ ಇದೆ. ಗುರುವಾರ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಗೆ 57 ಮಂದಿ ಪ್ಯಾಲೆಸ್ತೀನಿಯನ್ನರು ಬಲಿಯಾಗಿದ್ದಾರೆ. ಈ ಎರಡೂ ದೇಶಗಳ ನಡುವಿನ ಯುದ್ಧ ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌