Featured
ಕೊಪ್ಪಳದಲ್ಲಿ ಹುಲಿಗೆಮ್ಮ ದೇಗುಲ ಪಾದಯಾತ್ರೆ: ಬಸ್ ಹರಿದು ಮೂವರು ಭಕ್ತರ ಸಾವು
ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಮೇಲೆ ಖಾಸಗಿ ಸ್ಲೀಪರ್ ಕೋಚ್ ಬಸ್ ಹರಿದು ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಕೂಕನಪಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ದುರಂತ ಸಂಭವಿಸಿದೆ. ಅನ್ನಪೂರ್ಣ (40), ಪ್ರಕಾಶ್ (25), ಶರಣಪ್ಪ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಗದಗ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದವರಾಗಿದ್ದು, ಹುಲಿಗೆಮ್ಮ ದೇವಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದರು. ಘಟನೆಯಲ್ಲಿ ನಾಲ್ವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೊಪ್ಪಳ ಜಿಲ್ಲಾ
ಬೆಂಗಳೂರಲ್ಲಿ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯ
ಬೆಂಗಳೂರಿನ ವೀರಣ್ಣಪಾಳ್ಯ ಲೇಬರ್ ಶೆಡ್ ನಲ್ಲಿ ಸ್ನೇಹಿತ ನಡುವೆ ಶುರುವಾಗಿದ್ದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಾರ್ಖಂಡ್ ಮೂಲದ ರಾಜು ಕೊಲೆಯಾದವ, ಸ್ನೇಹಿತ ರಾಘು ಕೊಲೆಗಾರ. ಒಂದೇ ಶೆಡ್ ನಲ್ಲಿ ನಾಲ್ವರು ಸ್ನೇಹಿತರು ವಾಸ್ತವ್ಯವಿದ್ದರು. ಎರಡು ದಿನದ ಹಿಂದೆ ರಾಜು ಮತ್ತು
ಬಂಗಾರಪೇಟೆ: ಎಕ್ಸ್‌ಪ್ರೆಸ್ ಹೈವೇನಲ್ಲಿ ಅಪಘಾತಕ್ಕೆ ಮೂವರು ಬಲಿ
ಕೋಲಾರದ ಬಂಗಾರಪೇಟೆ ತಾಲೂಕಿನ ಕಲ್ಕೆರೆ ಬಳಿ ಸೋಮವಾರ ರಾತ್ರಿ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಶಿವರಾಜ್ , ಅಶೋಕ, ವಿಕ್ರಂಪಾಲ್ ಮೃತಪಟ್ಟವರು. ಅಡುಗೆ ಕ್ಯಾಟರಿಂಗ್ ಗೆ ತೆರಳುತ್ತಿದ್ದ ಟೆಂಪೋ ಹಾಗೂ ಈಚರ್ ವಾಹನ ಡಿಕ್ಕಿಯಾಗಿ
ಬಿಹಾರ ಮುಂಬರುವ ಚುನಾವಣೆಗೆ ಮಾದರಿ
ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಚುನಾವಣೆ ಆಯೋಗ ಬಹಳ ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ. ಈ ಚುನಾವಣೆ ಮುಂದೆ ಬರುವ ಎಲ್ಲ ಚುನಾವಣೆಗಳಿಗೆ ಮಾದರಿಯಾಗಲಿದೆ. ಚುನಾವಣೆಗೆ ಮುನ್ನ ಆಯೋಗ ತ್ವರಿತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಂಡಿತು. ಇದಕ್ಕೆ
ಹಿರಿಯೂರಿನಲ್ಲಿ ಶೀಲ ಶಂಕಿಸಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಣಜನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಗೆ ಪೆಟ್ರೋಲ್ ಸುರಿದು ಬೆಂಕ ಹಚ್ಚಿ ಕೊಂದಿದ್ದಾನೆ. ಸುನೀತಾ (25) ಕೊಲೆಯಾದ ಮಹಿಳೆ, ಆಕೆಯ ಪತಿ ಲಿಂಗರಾಜ್ ಕೊಲೆಗಾರ. ನಾಲ್ಕು ವರ್ಷಗಳ ಹಿಂದೆ ಲಿಂಗರಾಜ್ ಹಾಗೂ ಸುನೀತಾ
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ನಿಲುವೇನಿಲ್ಲ: ಸಿಎಂ ಸ್ಪಷ್ಟನೆ
ಕೊಪ್ಪಳ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ನಿಲುವು ಏನೂ ಇಲ್ಲ. ಈ ವಿಚಾರದಲ್ಲಿ ಮುನ್ನೆಲೆಯೂ ಇಲ್ಲ, ಹಿನ್ನೆಲೆಯೂ ಇಲ್ಲ. ಕೆಲ ವಿರಕ್ತಮಠದ ಸ್ವಾಮೀಜಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಗಿಣಗೇರಾ ಏರ್‌ಸ್ಟ್ರಿಪ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ
ಬಿಹಾರದಲ್ಲಿ ನವೆಂಬರ್ 6, 11 ಮತದಾನ; 14ರಂದು ಫಲಿತಾಂಶ
ಬಹು ನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯೋಗ ಸೋಮವಾರ ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿದ್ದು, ಚುನಾವಣಾ ನೀತಿ ಸಂಹಿತೆ
ತುಂಡುಡುಗೆಯಲ್ಲಿ ದೇಗುಲ ಪ್ರವೇಶ ನಿರಾಕರಣೆ: ಅರ್ಚಕರು-ಪೊಲೀಸರೊಂದಿಗೆ ಯುವತಿ ಜಗಳ
ಹರಿದ್ವಾರದ ದಕ್ಷಿಣ ಕಾಳಿ ದೇಗುಲಕ್ಕೆ ಅರೆಬರೆ ಬಟ್ಟೆ ಧರಿಸಿ ಬಂದಿದ್ದ ಯುವತಿ ಪ್ರವೇಶ ನಿರಾಕರಿಸಿದ್ದಕ್ಕೆ ಸಿಟ್ಟಾಗಿ ಅರ್ಚಕರು ಮತ್ತು ಪೊಲೀಸರೊಂದಿಗೆ ಗಲಾಟೆ ಮಾಡಿರುವ ವೀಡಿಯೊ ವೈರಲ್ ಆಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಯುವತಿ ಮೊಣಕಾಲಿಗಿಂತ ಮೇಲೆ ನಿಲ್ಲುವ ಶಾರ್ಟ್ಸ್ ಮತ್ತು ಟೀ
ಸುಪ್ರೀಂ ಸಿಜೆಐ ಮೇಲೆ ಷೂ ಎಸೆದ ವಕೀಲನ ಬಂಧನ
ಸುಪ್ರೀಂಕೋರ್ಟ್‌ನಲ್ಲಿ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮೇಲೆ ಶೂ ಎಸೆದಿದ್ದು, ಆರೋಪಿಯನ್ನು ರಾಕೇಶ್ ಕಿಶೋರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ತಕ್ಷಣವೇ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸುವ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ
ಮ್ಯಾಟ್ರಿಮೊನಿಯಲ್ಲಿ ಸಿಕ್ಕ ಯುವ ಪ್ರಿಯಕರ: ನಿವೃತ್ತ ಶಾಲಾ ಶಿಕ್ಷಕಿಗೆ 2.3 ಕೋಟಿ ರೂ. ವಂಚನೆ
ಬೆಂಗಳೂರಿನ ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ ಸ್ನೇಹಿತನಾದ ಯುವಕನ ಮಾತು ನಂಬಿ 2.3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. 4 ವರ್ಷಗಳಲ್ಲಿ ಈ ಪ್ರಮಾಣದ ಹಣ ಕಳೆದುಕೊಂಡಿರುವ ಶಿಕ್ಷಕಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರು ಮೂಲದ 59 ವರ್ಷದ ಮಹಿಳೆ ಹಲವು




