Menu

ಇನ್ಮುಂದೆ ರೈಲು ಟಿಕೆಟ್‌ ದಿನಾಂಕ ಬದಲಾವಣೆಗೆ ಅವಕಾಶ

ರೈಲು ಪ್ರಯಾಣಿಕರು ರೈಲು ಟಿಕೆಟ್‌ ಬುಕ್‌ ಮಾಡಿದ್ದರೆ ಇನ್ಮುಂದೆ ದಿನಾಂಕ ಬದಲಾವಣೆ ಮಾಡಲು ಸಾಧ್ಯವಾಗಲಿದೆ. ಬುಕ್ ಆದ ಟಿಕೆಟ್‌ನ ದಿನಾಂಕ ಬದಲಾವಣೆಗೆ ಜನವರಿಯಿಂದ ಅವಕಾಶ ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಒಮ್ಮೆ ರೈಲ್ವೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣದ ದಿನಾಂಕ ಬದಲಾವಣೆಗೆ ಅವಕಾಶ ಇರಲಿಲ್ಲ. ಈಗ ಬುಕ್ ಆದ ಟಿಕೆಟ್ ದಿನಾಂಕ ಬದಲಿಸಲು ಅವಕಾಶವಿರಲಿದೆ. ಈ ಹಿಂದೆ ಟಿಕೆಟ್ ಬುಕ್‌ ಆಗಿದ್ದರೆ ದಿನಾಂಕ ಬದಲಾವಣೆಗೆ

ಸಹಕರಿಸಿದರೆ ಫುಲ್ ಮಾರ್ಕ್ಸ್ ಕೊಡ್ತೀನಿ: ಮನೆಗೆ ಕರೆದು ವಿದ್ಯಾರ್ಥಿನಿಗೆ ಕಿರುಕುಳವಿತ್ತ ಹೆಚ್‌ಒಡಿ ಅರೆಸ್ಟ್‌

ಬೆಂಗಳೂರಿನ ತಿಲಕ್‌ ನಗರದಲ್ಲಿ ಮನೆಗೆ ಊಟಕ್ಕೆ ಕರೆದು ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆರೋಪಿಯಾಗಿರುವ ಖಾಸಗಿ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥನನ್ನು ಪೊಲೀಸರು ಬಂಧಿಸಿದ್ದಾರೆ. ಸಂಜೀವ್ ಕುಮಾರ್ ಮಂಡಲ್‌ ಬಂಧಿತ. ಆತ ಖಾಸಗಿ ಕಾಲೇಜಿನ ಹೆಡ್ ಆಫ್ ಡಿಪಾರ್ಟ್‌ಮೆಂಟ್.

ಕೆಆರ್‌ಪೇಟೆ ಬಾಲಕಿಯ ಸಾಮೂಹಿಕ ಅತ್ಯಾಚಾರ: ವೃದ್ಧನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ 68 ವರ್ಷದ ವ್ಯಕ್ತಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲು ಕೋರಿ ಆರೋಪಿ ಚನ್ನಪ್ಪರ್ ಅಲಿಯಾಸ್​ ರಾಜಯ್ಯ (68) ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ

ಕೆಮ್ಮು ಸಿರಪ್‌: ಮಧ್ಯಪ್ರದೇಶದಲ್ಲಿ ಮತ್ತೆ ಆರು ಮಕ್ಕಳ ಸಾವು

ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಆರು ಮಕ್ಕಳು ಮತ್ತೆ ಮೃತಪಟ್ಟಿದ್ದು, ಈ ರಾಜ್ಯದಲ್ಲಿ ಕೆಮ್ಮು ಸಿರಪ್‌ ಸೇವನೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಈ ಮೊದಲು ಛಿಂದ್ವಾರದ 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್

ಬಿಡದಿ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಬಿಗ್‌ ಬಾಸ್‌ ಸ್ಪರ್ಧಿಗಳ ಠಿಕಾಣಿ

ಬಿಗ್‌ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋ ಮಾಲಿನ್ಯ ನಿಯಮ ಪಾಲನೆ ಮಾಡದ ಹಿನ್ನೆಲೆಯಲ್ಲಿ ವಾಯು ನಿಯಂತ್ರಣ ಮಂಡಳಿ ಅಧಿಕಾರಿಗಳು ಬೀಗ ಜಡಿದ ಕಾರಣ ಸ್ಪರ್ಧಿಗಳನ್ನು ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇರಿಸಲಾಗಿದೆ. ಸ್ಪರ್ಧಿಗಳಿಗೆ ಬಿಗ್‌ಬಾಸ್‌ ಮನೆಯ ನಿಯಮಗಳೇ ಇಲ್ಲೂ ಅನ್ವಯವಾಗುತ್ತಿದೆ. ಜಾಲಿವುಡ್‌ ಸ್ಟುಡಿಯೋ

ನಾಳೆಯಿಂದ ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರಾ ಸಂಭ್ರಮ

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಸಿಗುವ ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರೆ ಅಕ್ಟೋಬರ್ 9 ರಿಂದ ಆರಂಭಗೊಳ್ಳುತ್ತಿದೆ. ಅದ್ಧೂರಿಯಾಗಿ ಜಾತ್ರೆ ಆಚರಿಸಲು ಸಿದ್ಧತೆಗಳು ಭರದಿಂದ ಸಾಗಿವೆ. ಅ.9 ರಂದು ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ಕಡಿದ

ಲಿಂಗಾಯತ ಧರ್ಮದ ವಿಚಾರ ಆ ಸಮಾಜಕ್ಕೆ ಬಿಡುತ್ತೇವೆ, ನಾವು ಮಧ್ಯಪ್ರವೇಶ ಮಾಡುವುದಿಲ್ಲ: ಡಿಕೆ ಶಿವಕುಮಾರ್‌

ನಾವು ಯಾರನ್ನೂ ವಿಭಜಿಸುವುದಿಲ್ಲ. ಲಿಂಗಾಯತ ಧರ್ಮದ ವಿಚಾರ ಆ ಸಮಾಜಕ್ಕೆ ಹಾಗೂ ಜನರಿಗೆ ಬಿಡುತ್ತೇವೆ. ಈ ಸಮುದಾಯದ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ನಾವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಮಾತ್ರ ಅವರ ಸಮುದಾಯದ ಗುರುತು ಕೇಳುತ್ತಿದ್ದೇವೆ. ಇದರ ಹೊರತಾಗಿ

ಸಿಜೆಐ ಮೇಲೆ ಷೂ ಎಸೆತ: ಸುಪ್ರೀಂಕೋರ್ಟ್‌ಗೆ ಮಾಡಿದ ಅಪಚಾರ

ಸಹನೆ ಮತ್ತು ವೃತ್ತಿ ಸಂಹಿತೆಯನ್ನು ಕಾಪಾಡಿಕೊಳ್ಳಬೇಕಿರುವ ಜ್ಞಾನಸಂಪನ್ನ ನ್ಯಾಯವಾದಿಯೊಬ್ಬರು (ಲರ್ನೆಡ್ ಕೌನ್ಸಿಲ್) ಎಸಗಿದ ಈ ಕೃತ್ಯವೊಂದು ಎಪ್ಪತೈದು ವರ್ಷಗಳ ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಕಪ್ಪು ಮಚ್ಚೆ. ವಕೀಲರು ಅಪಮಾನ ಎಸಗಿದ್ದು ಸುಪ್ರೀಂಕೋರ್ಟಿಗೆ. ಸಿಜೆಐ ಅವರಿಗಲ್ಲ. ಸುಪ್ರೀಂಕೋರ್ಟ್‌ನಲ್ಲಿ ಹೀಗೊಂದು ದುರದೃಷ್ಟಕರ ಘಟನೆ. ಪ್ರಜಾತಂತ್ರಕ್ಕೆ ಘೋರ

ಬೆಂಗಳೂರಿನ ಸಮೀಕ್ಷೆಯಲ್ಲಿ ಅಸಂಬದ್ಧ ಪ್ರಶ್ನೆಗಳಿಗೆ ಕತ್ತರಿ!

ಬೆಂಗಳೂರು:ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವೇಳೆ ಕೇಳಲಾಗುತ್ತಿದ್ದ ಕೆಲವು ಅಸಂಬದ್ಧ ಪ್ರಶ್ನೆಗಳಿಗೆ ವಿನಾಯಿತಿ ನೀಡಿ ಸರ್ಕಾರ ಮೌಖಿಕ ಅದೇಶ ಹೊರಡಿಸಿದೆ. ಸಮೀಕ್ಷೆಯಲ್ಲಿ ಕೇಳಲಾಗುತ್ತಿದ್ದ ಮನೆಯಲ್ಲಿ ಎಷ್ಟು ಕುರಿ ಮತ್ತು ಕೋಳಿಗಳಿವೆ, ಎಷ್ಟು ಚಿನ್ನ ಇದೆ, ಮನೆ ಸ್ವಂತದ್ದಾ, ನಿಮಗೆ ಜಮೀನು ಎಷ್ಟಿದೆ ಎಂಬ

ಜಾಲಿವುಡ್ ಸ್ಟುಡಿಯೊಗೆ ಬೀಗ: ಮುಚ್ಚಿದ ಬಿಗ್ ಬಾಸ್ ಮನೆ!

ಬೆಂಗಳೂರು ಹೊರವಲಯದ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೊಗೆ ಬೀಗ ಜಡಿಯಲಾಗಿದ್ದು,  ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋ ಎರಡನೇ ವಾರಕ್ಕೆ ಬಾಗಿಲು ಮುಚ್ಚಿದೆ. ಪರವಾನಗಿ ಪಡೆದಿಲ್ಲ. ಅನುಮತಿಗಾಗಿ ಸರ್ಕಾರಕ್ಕೆ ಪತ್ರವೂ ಬರೆದಿಲ್ಲ ಹಾಗೂ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ