Menu

ಬೆಂಗಳೂರಲ್ಲಿ ಬ್ರಾಂಡೆಡ್‌ ಕಂಪೆನಿಗಳ ಹೆಸರಲ್ಲಿ ನಕಲಿ ಷೂ ಮಾರಾಟ ದಂಧೆ

ಪಂಜಾಬ್ ನ ಲೂಧಿಯಾನದಿಂದ ನಾನಾ ಬ್ರಾಂಡೆಡ್‌ ಕಂಪೆನಿಗಳ ಹೆಸರಿನಲ್ಲಿ ಬೆಂಗಳೂರಿಗೆ ನಕಲಿ ಷೂಗಳು ಸರಬರಾಜಾಗುತ್ತಿದ್ದು, ಗ್ರಾಹಕರಿಗೆ ವಂಚಿಸಲಾಗುತ್ತಿದೆ.  50% 60% ರಿಯಾಯಿತಿ ಎಂದು ಆಫರ್ ಮುಂದಿಟ್ಟು ಐದು ಸಾವಿರದ ಷೂ ಐನೂರಕ್ಕೆ ಸೇಲ್ ಅಂತ ಗ್ರಾಹಕರನ್ನು ನಂಬಿಸಿ ನಕಲಿ ಚಪ್ಪಲಿ, ಷೂ ಮಾರಾಟ ಮಾಡ್ತಿದ್ದ ಅಂಗಡಿ, ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ಬ್ರಾಂಡೆಡ್ ಷೂ, ಚಪ್ಪಲ್ಲಿ ವಶಕ್ಕೆ ಪಡೆಯಲಾಗಿದೆ.

ಗೌರಿಬಿದನೂರಿನಲ್ಲಿ ತಂದೆಯ ಸಾವಿನಿಂದ ನೊಂದ ಮಗಳೂ‌ ಆತ್ಮಹತ್ಯೆ

ಚಿಕ್ಕಬಳ್ಳಾಪುರದ ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯ ಯುವತಿ ಸ್ವರ್ಣ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಹಾಸ್ಟೆಲ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮನೆಗೆ ಬಂದಿದ್ದ ಸ್ವರ್ಣರನ್ನು ತಾಯಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ

ಹಣಕಾಸು ವ್ಯವಹಾರ: ವ್ಯಕ್ತಿಯ ಕಿಡ್ನ್ಯಾಪ್ ಮಾಡಿ ದೌರ್ಜನ್ಯ

ಬೆಂಗಳೂರಿನ ಕೋರಮಂಗಲದಲ್ಲಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಮನಸ್ತಾಪ ತೀವ್ರಗೊಂಡು ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ಮರ್ಮಾಂಗಕ್ಕೆ ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದಿದೆ. ಗ್ಯಾಂಗ್‌ನಲ್ಲಿದ್ದವರು ಇಂಜೆಕ್ಷನ್ ಚುಚ್ಚಿ ವ್ಯಕ್ತಿಗೆ ಚಿತ್ರಹಿಂಸೆ ನೀಡಿದ್ದು, ಆತ ಕಾರಿನಲ್ಲಿ ಜೋರಾಗಿ ಕೂಗಿದ ಹಿನ್ನಲೆ ಬಚಾವಾಗಿದ್ದಾನೆ.  ಸಗಾಯ್

ಜೆಪಿ ಪಾರ್ಕ್‌ನಲ್ಲಿ ನಡಿಗೆ, ಸಾರ್ವಜನಿಕ ಅಹವಾಲು ಆಲಿಸಿದ ಡಿಕೆ ಶಿವಕುಮಾರ್‌, ನನಗೆ ಆಹ್ವಾನವಿಲ್ಲವೆಂದು ಮುನಿರತ್ನ ಕಿರಿಕ್‌

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸ್ಪಂದಿಸುವ ಉದ್ದೇಶದಿಂದ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್  “ಬೆಂಗಳೂರು ನಡಿಗೆ” ಕಾರ್ಯಕ್ರಮದಡಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಗೊಳಪಡುವ ಮತ್ತಿಕೆರೆಯ ಜಯಪ್ರಕಾಶ್ ನಾರಾಯಣ್ ಉದ್ಯಾನವನದಲ್ಲಿ ನಾಗರಿಕರ ಜೊತೆ ನಡಿಗೆಯಲ್ಲಿ ಪಾಲ್ಗೊಂಡರು.

ಋತುಚಕ್ರ ರಜೆ ನೀತಿ: ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮ

ಋತುಚಕ್ರ ರಜೆಯನ್ನು ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರ್ಕಾರ ಕಾನೂನು ಮಾಡಿದರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಹೇಳಿದರು. ಋತುಚಕ್ರ

ಜಿಬಿಎ ಸಭೆಗೆ ಗೈರಾದ ಬಿಜೆಪಿಯವರು ಬೆಂಗಳೂರು ಅಭಿವೃದ್ಧಿಯ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದ್ದರೂ, ಸಭೆಗೆ ಗೈರಾಗುವ ಮೂಲಕ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳೆಂದು ನಿರೂಪಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜಿಬಿಎ ಸಭೆಗೆ ಬಿಜೆಪಿಯವರು ಗೈರಾಗಿದ್ದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿಗರಿಗೆ

ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರಾ ಸಂಭ್ರಮ: ಇಂದಿನಿಂದ 3 ದಿನದ ವೇಳಾಪಟ್ಟಿ

ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದೇವಿಯ ದರ್ಶನ ಸಿಗುವ ಇತಿಹಾಸ ಪ್ರಸಿದ್ಧ ಹಾಸನಾಂಬ ಜಾತ್ರೆ ಅಕ್ಟೋಬರ್ 9 ರಿಂದ ಆರಂಭಗೊಂಡಿದ್ದು, ಅ.23ರಂದು ದೇವಾಲಯದ ಬಾಗಿಲು ಮುಚ್ಚಲಿದೆ. ಈಗಾಗಲೇ  ಮೂರು ದಿನಗಳ ಸಂಭ್ರಮದ ಜಾತ್ರೆಯಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ,  ಮುಂದಿನ ಮೂರು ದಿನಗಳ  ಅಕ್ಟೋಬರ್‌

ದಾವಣಗೆರೆ: 150 ಕೋಟಿ ಕನ್ನ ಹಾಕಿದ ಸೈಬರ್ ವಂಚಕ ಅರೆಸ್ಟ್

ಸಿಸಿಟಿವಿ ಕೆಲಸ ಮಾಡಿಕೊಂಡು ದೇಶದ ನಾನಾ ಬ್ಯಾಂಕ್ ಖಾತೆಗಳಿಂದ 150 ಕೋಟಿ ರೂ. ದೋಚಿದ್ದ ಸೈಬರ್ ವಂಚಕನನ್ನು ದಾವಣೆಗೆರೆ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ಟೌನ್ ಶಾಂತಿನಗರ ನಿವಾಸಿ ಸೈಯದ್ ಅರ್ಫಾತ್ (28) ಎಂಬಾತನನ್ನು

ನಿಷೇಧಿತ ಪಿಎಫ್ ಐ ಸಕ್ರಿಯಗೊಳಿಸಲು ಪ್ರಚೋದನೆ ನೀಡುತ್ತಿದ್ದ ಧರ್ಮಗುರು ಅರೆಸ್ಟ್

ನಿಷೇಧಿತ ಪಿಎಫ್‌ಐ ಸಂಘಟನೆ ಸಕ್ರಿಯಗೊಳಿಸಲು ಪ್ರಚೋದನೆ ನೀಡುತ್ತಿದ ಮುಸ್ಲಿಂ ಧರ್ಮಗುರುವನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಡಬ ನಿವಾಸಿ ಸೈಯ್ಯದ್ ಇಬ್ರಾಹಿಂ ತಂಙಳ್ ಬಂಧಿತ ಆರೋಪಿ. ಭೂಗತರಾಗಿರುವ ಪಿಎಫ್‌ಐ ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ ತಂಙಳ್ ಸಲ್ಮಾನ್ ಸಲಾಂ

ಮಂಗಳೂರಿನಲ್ಲಿ ಮಲಯಾಳಂ ನಟ ಜಯಕೃಷ್ಣನ್ ಅರೆಸ್ಟ್!

ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಮಲಯಾಳಂ ಖ್ಯಾತ ನಟ ಜಯಕೃಷ್ಣನ್ ಸೇರಿದಂತೆ ಮೂವರನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸೆ.9ರಂದು ಮಂಗಳೂರಿಗೆ ಭೇಟಿ ನೀಡಿದ್ದ ಜಯಕೃಷ್ಣನ್, ಸಂತೋಷ್ ಅಬ್ರಾಹಂ, ವಿಮಲ್ ಅವರನ್ನು ಊರ್ವ ಪೊಲೀಸರು ಬಂಧಿಸಿದ್ದಾರೆ. ಜಯಕೃಷ್ಣನ್ ಹಾಗೂ ಸ್ನೇಹಿತರು ಮಂಗಳೂರಿಗೆ