Menu

ಶ್ರೀಮಂತರ ಮನೆಗಳಲ್ಲಿ ಕೆಲಸಕ್ಕೆ ಸೇರಿ ದರೋಡೆ ಮಾಡುವ ನೇಪಾಳ ಗ್ಯಾಂಗ್‌

ಶ್ರೀಮಂತರ ಮನೆಗಳಲ್ಲಿ ಕೆಲಸಕ್ಕೆ ಸೇರಿ ಆ ಮನೆಯನ್ನು ದರೋಡೆ ಮಾಡುವ ನೇಪಾಳದ ಗ್ಯಾಂಗ್‌ ಸಕ್ರಿಯವಾಗಿರುವುದನ್ನು ಬೆಂಗಳೂರು ಪೊಲೀಸರು ಪತ್ತೆಹಚ್ಚಿದ್ದಾರೆ. ಮಾರತ್ತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದ್ದ 18 ಕೋಟಿ ರೂ. ದರೋಡೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಈ ದರೋಡೆ ಪ್ರಕರಣದಲ್ಲಿ ನೇಪಾಳ ಮೂಲದ ಗ್ಯಾಂಗ್‌ ಇರುವುದು ಗೊತ್ತಾಗಿದೆ. ನೇಪಾಳದ ಗ್ಯಾಂಗ್ ಸದಸ್ಯರು ಶ್ರೀಮಂತ ಉದ್ಯಮಿಗಳ ಮನೆಗಳನ್ನು ಟಾರ್ಗೆಟ್‌

ಅತ್ತೆಯ ಕಿರುಕುಳ ಆರೋಪ: ಮೂರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ ಯತ್ನ

ಮೂರು ಮಕ್ಕಳನ್ನು ನೇಣು ಬಿಗಿದು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಬಾದಾಮಿ ತಾಲೂಕಿನ ಹಿರೇಮುಚಳಗುಡ್ಡ ಗ್ರಾಮದಲ್ಲಿ ನಡೆದಿದೆ. ಅತ್ತೆ ರೇಣವ್ವ ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ನೊಂದು ರೂಪಾ ಹನಮಂತ ಗೌಡರ (27) ಈ ಕೃತ್ಯಕ್ಕೆ ಮುಂದಾಗಿದ್ದರು ಎಂದು ಹೇಳಲಾಗಿದೆ.

ಮದುವೆ ಮಂಟಪಕ್ಕೆ ಬರುತ್ತಿದ್ದ ವರನಿಗೆ ಚಾಕು ಇರಿತ: ವಧುವೇ ಸೂತ್ರಧಾರಿ

ಕೊಳ್ಳೇಗಾಲದಲ್ಲಿ ಕಲ್ಯಾಣ ಮಂಟಪಕ್ಕೆ ಕಾರಿನಲ್ಲಿ ಬರುತ್ತಿದ್ದ ವರನ ಅಡ್ಡಗಟ್ಟಿ ಚಾಕು ಇರಿದು ಗುಂಪು ಪರಾರಿಯಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಈ ಕೃತ್ಯದ ರೂವಾರಿ ಆತನನ್ನು ಮದುವೆಯಾಗಬೇಕಿದ್ದ ವಧು ಎಂಬ ಸತ್ಯವನ್ನು ಬಯಲಿಗೆಳೆದಿದ್ದಾರೆ. ಡಿ.30ರಂದು ಕುಣಗಳ್ಳಿ ಗ್ರಾಮದ ರವೀಶ್ ಮತ್ತು ನಯನ

ಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ: ಸಮಗ್ರ ರಕ್ಷಣಾ ವ್ಯವಸ್ಥೆಗೆ ಡಿಕೆ ಶಿವಕುಮಾರ್ ಆದೇಶ

-ಹೇಮಂತ್ ಗೌಡ, ಕನಕಪುರ ಮಲೈ ಮಹದೇಶ್ವರ ಬೆಟ್ಟ—ಭಕ್ತಿಭಾವ, ತ್ಯಾಗ ಮತ್ತು ನಂಬಿಕೆಯ ಸಂಕೇತ. ಪ್ರತಿವರ್ಷ ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು  ಪಾದಯಾತ್ರೆಯ ಮೂಲಕ ಈ ಪವಿತ್ರ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಾರೆ. ಆದರೆ ಈ ಭಕ್ತಿಪೂರ್ಣ ಪಯಣದ ನಡುವೆ ಆಗಾಗ  ಸಂಭವಿಸುವ

Union Budget 2026-27: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಏನೂ ಇಲ್ಲ, ಯಾವ ಹೈಸ್ಪೀಡ್ ರೈಲೂ ಬರಲ್ಲ: ಡಿಕೆ ಶಿವಕುಮಾರ್‌ ಕಿಡಿ

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಅನುಕೂಲ ಇಲ್ಲ, ರಾಜ್ಯಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ. ಯಾವ ಹೈಸ್ಪೀಡ್ ರೈಲೂ ಬರಲ್ಲ. 50:50 ಅನುಪಾತದಲ್ಲಿ ಮಾಡಲು ಆಗಲ್ಲ, 90:10 ಕೊಡಲಿ. ಆಗ ನಾವು 10% ಕೊಡುತ್ತೇವೆ. ಬೇರೆ ರಾಜ್ಯ ಗಳಿಗೆ ಅವರೇ ಮಾಡಿಕೊಟ್ಟಿದ್ದಾರೆ

Union Budget 2026-27: ರಾಜ್ಯಕ್ಕೆ ಎರಡು ಹೈ-ಸ್ಪೀಡ್ ರೈಲು ಕಾರಿಡಾರ್‌, ಕರಾವಳಿ ಕೃಷಿಕರಿಗೆ ಬೆಂಬಲ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಎರಡು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಎರಡು ಪ್ರಮುಖ ಯೋಜನೆಗಳಿವೆ. ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದ್ರಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್. ಇದರ ವೇಗ ಗಂಟೆಗೆ 300-350 ಕಿ.ಮೀ, ಪ್ರಯಾಣ ಅವಧಿ 2 ಗಂಟೆಗಳಿಗಿಂತ

Union Budget 2026-27: ಕ್ಯಾನ್ಸರ್‌ ಮತ್ತು ಅಪರೂಪದ ಕಾಯಿಲೆಗಳ ಔಷಧಿ ಕಸ್ಟಮ್ಸ್ ಸುಂಕ ರದ್ದು

ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಅಗತ್ಯವಿರುವ ಔಷಧಿಗಳ ಮೇಲಿನ ಮೂಲ ಸುಂಕವನ್ನು ಈ ಬಾರಿಯ ಬಜೆಟ್‌ನಲ್ಲಿ  ಸಂಪೂರ್ಣವಾಗಿ ರದ್ದುಗೊಳಿಸಿರುವುದರಿಂದ ರೋಗಿಗಳಿಗೆ ಅವುಗಳ ಮೇಲಿನ ವೆಚ್ಚದಲ್ಲಿ ತುಸು ಹೊರೆ ಕಮ್ಮಿ ಆಗಲಿದೆ. 17 ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕ ವಿನಾಯಿತಿ ಮತ್ತು

Union Budget 2026-27: ಆದಾಯ ತೆರಿಗೆ ಅರ್ಜಿ ಸಲ್ಲಿಕೆ ಸರಳೀಕರಣ, ನೇರ ತೆರಿಗೆ ಪದ್ಧತಿ ಏಪ್ರಿಲ್‌ 1ರಿಂದ ಜಾರಿ

1961ರಿಂದ ದೇಶದಲ್ಲಿ ಅನ್ವಯಿಸಲಾಗುತ್ತಿದ್ದ ತೆರಿಗೆ ಪದ್ಧತಿ ಕೈ ಬಿಡಲಾಗಿದ್ದು, 2026 ಏಪ್ರಿಲ್‌ 1ರಿಂದ ನೂತನ ತೆರಿಗೆ ಪದ್ಧತಿ ಜಾರಿಗೆ ಬರಲಿದೆ ಎಂದು ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಹೊಸ ಆದಾಯ ತೆರಿಗೆ ಕಾಯ್ದೆ ಬಗ್ಗೆ ಮಾತನಾಡಿದ ಅವರು, ಸರಳೀಕೃತ ಆದಾಯ

Union Budget 2026-27: ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ. ಹಣಕಾಸು ಆಯೋಗದ ಅನುದಾನ ಘೋಷಣೆ

ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂ.ಗಳನ್ನು 2027ನೇ ವಿತ್ತೀಯ ವರ್ಷಕ್ಕೆ ಹಣಕಾಸು ಆಯೋಗದ ಅನುದಾನವಾಗಿ ಒದಗಿಸಲಾಗಿದ್ದು, ಹಣಕಾಸು ಕೊರತೆಯನ್ನು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 4.5 ಕ್ಕಿಂತ ಕಡಿಮೆ ಮಾಡುವ 2022 ನೇ  ಹಣಕಾಸು ವರ್ಷದಲ್ಲಿ ಪ್ರಕಟಿಸಿದ ಬದ್ಧತೆಯನ್ನು ಈಡೇರಿಸಲಾಗಿದೆ ಎಂದು

Union Budget 2026-27: ಕರ್ನಾಟಕ ಸೇರಿ ಪ್ರವಾಸೋದ್ಯಮ ಅಭಿವೃದ್ಧಿ, ರೇಷ್ಮೆ ಸೆಣಬು ಉದ್ಯಮ, ಕೈಮಗ್ಗಗಳಿಗೆ ಬೆಂಬಲ

ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಕರ್ನಾಟಕ, ಕೇರಳ ಮತ್ತು ಒಡಿಶಾಗಳ ಪ್ರಮುಖ ತಾಣಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು  ಪ್ರಕಟಿಸಿದ್ದಾರೆ. ದೇಶಾದ್ಯಂತ 15 ಪುರಾತತ್ವ ಸ್ಥಳಗಳಿಗೆ ಕಾಯಕಲ್ಪ ನೀಡುವುದಾಗಿ ಘೋಷಿಸಿದ್ದಾರೆ. ರೇಷ್ಮೆ, ಉಣ್ಣೆ ಮತ್ತು ಸೆಣಬಿಗೆ ಸಂಬಂಧಿಸಿದ