Menu

ಮಳವಳ್ಳಿಯ ಮನೆ ಜಗುಲಿಯಲ್ಲಿ ವ್ಯಕ್ತಿ ಶವವಾಗಿ ಪತ್ತೆ

ಮಂಡ್ಯದ ಮಳವಳ್ಳಿ ತಾಲೂಕಿನ ಅಕ್ಕಮನಕೊಪ್ಪಲು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮನೆ ಜಗುಲಿಯ ಮೇಲೆ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ. ಅಕ್ಕಮನಕೊಪ್ಪಲು ಗ್ರಾಮದ ಮಂಜು (44) ಅನುಮಾನಾಸ್ಪದವಾಗಿ ಮೃತಪಟ್ಟವರು, ಇವರು ಬನ್ನೂರಿನಲ್ಲಿ ವ್ಯಾಪಾರಿಯಾಗಿದ್ದರು. ಮುಖದ ಮೇಲೆ ಗಂಭೀರ ಗಾಯಗಳಾಗಿದ್ದು, ಕತ್ತು ಬಿಗಿದಿರುವಂತೆ ಕಂಡು ಬಂದಿದೆ. ಮೃತದೇಹ ಬಿದ್ದಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಬಟ್ಟೆಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದುಷ್ಕರ್ಮಿಗಳು ಬೇರೆ ಕಡೆ ಕೊಲೆ ಮಾಡಿ, ಶವವನ್ನು ತಂದು ಮನೆಯ

25 ಲಕ್ಷ ಆಸ್ತಿ ಡಿಜಿಟಲೀಕರಣ, 9 ಲಕ್ಷ ಇ ಖಾತೆ ಹಂಚಿಕೆ, 12 ಸಾವಿರ ನಕ್ಷೆ ಹಂಚಿಕೆ: ಡಿಕೆ ಶಿವಕುಮಾರ್‌

ಬೆಂಗಳೂರು ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ ಮಾಡಲಾಗಿದೆ. 9 ಲಕ್ಷ ಇ ಖಾತೆಗಳನ್ನು ಜನರಿಗೆ ಹಂಚಿಕೆ ಮಾಡಲಾಗಿದೆ. ಉಚಿತವಾಗಿ ಸ್ಪೆಷಲ್‌ ಇ ಖಾತಾ ಅಭಿಯಾನ ಪ್ರಾರಂಭ ಮಾಡಲು ಎಲ್ಲಾ ಪಾಲಿಕೆಗಳಿಗೆ ಸೂಚನೆ ನೀಡಲಾಗಿದೆ ಎಂದು  ಡಿಕೆ ಶಿವಕುಮಾರ್‌  ಹೇಳಿದ್ದಾರೆ.

ಸತ್ಯ ಎದುರಿಸಲಾಗದ ಹೇಡಿತನ, ಸಂಸತ್‌ಗೆ ಅಗೌರವ ತೋರಿದ ಪ್ರಧಾನಿ ಮೋದಿ: ಸಿಎಂ ಸಿದ್ದರಾಮಯ್ಯ

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡದೆ ತಪ್ಪಿಸಿಕೊಂಡಿರುವುದು ಸಂಸತ್‌ಗೆ ತೋರಿಸಿರುವ ಅಗೌರವ ಮಾತ್ರವಲ್ಲ ಸತ್ಯವನ್ನು ಎದುರಿಸಲಾಗದ ಹೇಡಿತನವೂ ಆಗಿದೆ‌. ಭಾರತದ ಸಂಸತ್ತಿನ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯವರ ಉತ್ತರ ಇಲ್ಲದೆ

ಮೆಟ್ರೊಗೆ ರಾಜ್ಯಸರ್ಕಾರ 5,066 ಸಾವಿರ ಕೋಟಿ ರೂ. ಕೊಟ್ಟಿದೆ, ದರ ನಿಗದಿಯಲ್ಲಿ ಸಾಧ್ಯವಿರುವ ಪ್ರಯತ್ನ ಮಾಡಲಾಗುವುದು: ಡಿಸಿಎಂ

ಬೇರೆ ಮೆಟ್ರೋಗಳಿಗೆ ಹೋಲಿಸಿದರೆ ನಮ್ಮ ಮೆಟ್ರೋ ದರ ಪಟ್ಟಿ ಹೆಚ್ಚಿದೆ ಎಂದು ಹೇಳುತ್ತಾರೆ. ಉದಾಹರಣೆಗೆ ದೆಹಲಿಯಲ್ಲಿ ಭದ್ರತಾ ವಿಭಾಗದ ಜವಾಬ್ದಾರಿ ಕೇಂದ್ರ ಸರ್ಕಾರದ ಅಡಿಯಲ್ಲಿದೆ. ಸಿಎಸ್‌ಎಫ್‌ ಅಲ್ಲಿನ ಜವಾಬ್ದಾರಿ ತೆಗೆದುಕೊಂಡಿದೆ. ಇಲ್ಲಿ ನಾವೇ ಭದ್ರತೆಯ ಜವಾಬ್ದಾರಿ ಹೊತ್ತಿದ್ದೇವೆ. ಜೊತೆಗೆ ನಾವು ಇಲ್ಲಿ

ರೈಲು ನಿಲ್ದಾಣದಲ್ಲಿ ಕಳೆದುಹೋದ ಚಿನ್ನಾಭರಣ, ನಗದು ಇದ್ದ ಬ್ಯಾಗ್‌: ಪ್ರಯಾಣಿಕನಿಗೆ ತಲುಪಿಸಿದ ಬೆಂಗಳೂರು ಆರ್‌ಪಿಎಫ್‌

ಬೆಂಗಳೂರಿನ ಯಲಹಂಕ ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು 19 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಇರುವ ಟ್ರಾಲಿ ಬ್ಯಾಗ್‌ ಕಳೆದುಕೊಂಡಿದ್ದರು, ಅದನ್ನು ಪತ್ತೆ ಹಚ್ಚಿ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ವಾಪಸ್‌ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿಬ್ಬಂದಿಯ ತ್ವರಿತ

ಕೇಂದ್ರವು ಕರ್ನಾಟಕಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದ ತೇಜಸ್ವಿ ಸೂರ್ಯ: ಡಿಕೆ ಸುರೇಶ್ ಕಿಡಿ

ಸಂಸದ ತೇಜಸ್ವಿ ಸೂರ್ಯ ಅವರು ಹಿಡಿದಿರುವುದು ಕಳೆದ 12 ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿರುವ ಖಾಲಿ ಟ್ರಂಕ್  ಅನ್ನು  ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್  ಕಿಡಿ ಕಾರಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್  ಪ್ರತಿಕ್ರಿಯೆ ನೀಡಿದರು.

ಮೆಟ್ರೊ ಟಿಕೆಟ್‌ ದರ ಏರಿಕೆ ಕೇಂದ್ರವೇ ಮಾಡೋದಾದ್ರೆ ಒಪ್ಪಲ್ಲವೆಂದು ಸಿಎಂ ಪತ್ರ ಬರೆಯಲಿ: ಆರ್‌ ಅಶೋಕ

ಮೆಟ್ರೊ ಟಿಕೆಟ್‌ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರದಿಂದ ದರ ಏರಿಕೆ ಆಗುವುದಿದ್ದರೆ, ಮುಂದಿನ 2 ವರ್ಷ ದರ ಏರಿಕೆಯನ್ನು ಒಪ್ಪಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಿ ಎಂದು ಪ್ರತಿಪಕ್ಷ ನಾಯಕ

ಕೆನಡಾದಲ್ಲಿ ಗುಂಡಿನ ದಾಳಿಗೆ ಬೆಂಗಳೂರಿನ ಯುವಕ ಬಲಿ

ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬೆಂಗಳೂರಿನ ನೆಲಮಂಗಲ ಚಂದನ್ ಕುಮಾರ್(37) ಎಂಬವರು ಪ್ರಾಣ ಕಳೆದುಕೊಂಡಿದ್ದಾರೆ. ಚಂದನ್ ಕುಮಾರ್ ಬೆಂಗಳೂರಿನ ನೆಲಮಂಗಲ ತ್ಯಾಮಗೊಂಡ್ಲುವಿನ ನಿವಾಸಿ. ಆರು ವರ್ಷಗಳಿಂದ ಚಂದನ್ ಕುಮಾರ್ ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಕಾರಿನಲ್ಲಿ ತೆರಳುತ್ತಿದ್ದಾಗ ಚಂದನ್

ಮಳವಳ್ಳಿಯಲ್ಲಿ ವಿವಾಹಿತನ ಜೊತೆ ವಿದ್ಯಾರ್ಥಿನಿಯ ಪ್ರೀತಿ: ಮಗಳು, ತಾಯಿ ಆತ್ಮಹತ್ಯೆ

ಮಂಡ್ಯದ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ತಾಯಿ-ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಕುಂತಲಾದೇವಿ (46), ಪ್ರಿಯಾಂಕ (19) ಆತ್ಮಹತ್ಯೆ ಮಾಡಿಕೊಂಡಿರುವ ತಾಯಿ ಮತ್ತು ಮಗಳು. ಮಗಳು ಪ್ರಿಯಾಂಕಳ ಮಗಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಕೆ ಕೋಡಿಹಳ್ಳಿ ಗ್ರಾಮದ

ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮನ್ನು ಪ್ರಚೋದನೆ ಮಾಡಬೇಡಿ: ಯತೀಂದ್ರಗೆ ಇಕ್ಬಾಲ್ ಹುಸೇನ್ ವಾರ್ನ್‌

ನಾಯಕತ್ವ ಬದಲಾವಣೆ ವಿಚಾರವಾಗಿ ತಂದೆಯ ಪರವಾಗಿ ಪದೇ ಪದೇ ಬ್ಯಾಟಿಂಗ್ ಬೇಡ. ನಮ್ಮನ್ನು ಪ್ರಚೋದನೆ ಮಾಡಬೇಡಿ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಿಸ್ತಿನ ಪಕ್ಷ.