Featured
ಫೆ.15ರಂದು ಭಾರತ-ಪಾಕ್ ಕ್ರಿಕೆಟ್ ಪಂದ್ಯ ಯಾರೂ ವೀಕ್ಷಿಸಬೇಡಿ; ಪ್ರಮೋದ್ ಮುತಾಲಿಕ್
ಟಿ-20 ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನವನ್ನು ಫೆ. 15 ರಂದು ಎದುರಿಸುತ್ತಿದೆ. ಪೆಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಗೆ 26 ಜನ ಪ್ರಾಣ ತೆತ್ತಿದ್ದಾರೆ. ಅವರ ಮನೆಯವರ ಕಣ್ಣೀರು ಇನ್ನೂ ಆರಿಲ್ಲ. ಹೀಗಿರುವಾಗ ಅವರ ವಿರುದ್ದ ಪಂದ್ಯ ಆಡುವುದು ಸರಿಯಲ್ಲ. ಇದು ಮೋಸದ ಆಟವಾಗಿದೆ. ದೇಶಾಭಿಮಾನ ಬಿಟ್ಟು ಹೆಣಗಳ ಮೇಲೆ ಕ್ರಿಕೆಟ್ ಆಡುವುದು ಸರಿಯಲ್ಲ. ಭಾರತೀಯರು ಫೆಬ್ರುವರಿ 15 ರಂದು ನಡೆಯುವ ಪಂದ್ಯವನ್ನು ಯಾರೂ ವೀಕ್ಷಿಸಬಾರದು ಎಂದು ಶ್ರೀರಾಮ್ ಸೇನೆ ರಾಷ್ಟ್ರೀಯ
ಪೂಜೆ, ಚಿಕಿತ್ಸೆ ಹೆಸರಲ್ಲಿ ವಿಷ ಲಡ್ಡು ತಿನ್ನಿಸಿ ಆರು ಮಂದಿಯ ಕೊಲೆಗೈದ ಫಕೀರ್ ಬಾಬಾ ಅರೆಸ್ಟ್
ಇತ್ತೀಚೆಗೆ ದೆಹಲಿಯ ಪೀರಾಗಢಿಯಲ್ಲಿ ಪಾರ್ಕ್ ಮಾಡಿದ್ದ ಕಾರಿನೊಳಗೆ ಮೂರು ಶವಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಫಕೀರ್ ಬಾಬಾ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲೂ ಇದೇ ರೀತಿ ಕನಿಷ್ಠ ಐದು ಕೊಲೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಬ್ಯಾಂಕಾಕ್‌ನಿಂದ ಕ್ಯಾಂಡಿಗಳಲ್ಲಿ ಬೆಂಗಳೂರಿಗೆ ಬಂತು ಡ್ರಗ್ಸ್
ಬೆಂಗಳೂರು ದೇವನಹಳ್ಳಿಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳುಬ್ಯಾಂಕಾಕ್‌ನಿಂದ ಬಂದ ಪ್ರಯಾಣಿಕರಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದ್ದು, ಕ್ಯಾಂಡಿ ಪ್ಯಾಕೆಟ್‌ಗಳಲಿ ಅಡಗಿಸಿಟ್ಟಿದ್ದ ಒಟ್ಟು 3.43 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬ್ಯಾಂಕಾಕ್‌ನಿಂದ ಬಂದ
ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್, ಆರಗ ಜ್ಞಾನೇಂದ್ರ ಆಪ್ತ ಸಹಾಯಕನ ಬಂಧನ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದಡಿ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಹೊಸನಗರ ಭಾಗದ ಆಪ್ತ ಸಹಾಯಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ಹೊಸನಗರ ಜೆ.ಎಂ.ಎಫ್.ಸಿ ನ್ಯಾಯಾಲಯ
ಕಾಂಗ್ರೆಸ್ ಸರ್ಕಾರದಿಂದ ಹಿಂದುಳಿದ ವರ್ಗಗಳಿಗೆ ದ್ರೋಹ: ವಿಜಯೇಂದ್ರ
ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಿಂದ ಕೇವಲ ಭ್ರಷ್ಟಾಚಾರಕ್ಕೆ ಸೀಮಿತವಾಗಿದ್ದು, ‘ಅಹಿಂದ’ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಈಗ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ದ್ರೋಹ ಬಗೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಗುರುವಾರ ನಡೆದ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ
ಬೆಂಗಳೂರು, ಮೈಸೂರು, ದಾವಣಗೆರೆ ಜಿಲ್ಲೆಗಳ ಹಲವು ಕಡೆ ಭ್ರಷ್ಟ ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳಿಗೆ ಲೋಕಾಯುಕ್ತ ಏಕಕಾಲಕ್ಕೆ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಪಿಡಬ್ಲ್ಯುಡಿ ಮುಖ್ಯ ಇಂಜಿನಿಯರ್ ಪುರುಷೋತ್ತಮ ದಾಸ್ ಎಂಬವರಿಗೆ ಸೇರಿದ ಮೈಸೂರಿನ ಐದು ಸ್ಥಳ, ಬೆಂಗಳೂರಿನ ಆರು ಕಡೆ ದಾಳಿ
ಹಣಕಾಸು ಕಲಹ: ತಂದೆ, ತಾಯಿಯ ಕೊಲೆಗೈದ ಟೆಕ್ಕಿ ರೋಹನ್ ಭಟ್
ಹಣಕಾಸು ವಿಚಾರದಲ್ಲಿ ನಡೆದ ಜಗಳ ತೀವ್ರಗೊಂಡು ಯುವಕನೊಬ್ಬ ತಂದೆ, ತಾಯಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನೌಕಾಪಡೆಯ ಆರ್ಮಿ ಕ್ಯಾಪ್ಟನ್ ಆಗಿದ್ದ ತಂದೆ ನವೀನ್ ಚಂದ್ರ ಭಟ್, ದಂತ ವೈದ್ಯೆಯಾಗಿದ್ದ
ಕಾರ್ಮಿಕ ಸಂಘಟನೆಗಳಿಂದ ಇಂದು ಭಾರತ್ ಬಂದ್
ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು ಇಂದು (ಗುರುವಾರ) ಭಾರತ್ ಬಂದ್‌ಗೆ ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳ ರದ್ದು ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲೂ ಪ್ರತಿಭಟನೆಗೆ ಕರೆ ನೀಡಲಾಗಿದೆ. ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ,
ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಚಂದ್ರಬಾಬು ನಾಯ್ಡು ಕ್ಯಾತೆ
ಆಂಧ್ರದ ಲಕ್ಷಾಂತರ ಕುಟುಂಬಗಳಿಂದು ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ನೆಲೆಯನ್ನು ಕಂಡುಕೊಂಡಿದೆ. ಅಲ್ಲದೆ ತೆಲುಗಿನ ಸಾವಿರಾರು ಮಂದಿ ಉದ್ಯಮಿಗಳು ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಮತ್ತು ವಿವಿಧ ಕೈಗಾರಿಕೆಗಳ ವಲಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಲಮಟ್ಟಿ ಎತ್ತರಕ್ಕೆ ಅಡ್ಡಿ ಹೇಳುವ
ಥಣಿಸಂದ್ರದಲ್ಲಿ ಬೈಕ್‌ಗೆ ಶಾಲಾ ಬಸ್ ಡಿಕ್ಕಿ: ಪುಟ್ಟ ಮಕ್ಕಳಿಬ್ಬರ ಸಾವು
ಶಾಲಾ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಕ್ಕಳ ಮೇಲೆಯೇ ಬಸ್ ಚಲಿಸಿದ್ದರಿಂದ ಪುಟ್ಟ ಮಕ್ಕಳಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಬೆಂಗಳೂರಿನ ಥಣಿಸಂದ್ರದ ಪೊಲೀಸ್ ಕ್ವಾರ್ಟಸ್ ಬಳಿ ನಡೆದಿದೆ. ಯಾದಗಿರಿಯ ನಾಗನಗೌಡಸಿಎಆರ್ನಲ್ಲಿ ಕಾನ್ಸ್ಟೇಬಲ್ ಆಗಿದ್ದು, ಹಾಲು ತರಲೆಂದು ಮಕ್ಕಳನ್ನು ಕರೆದುಕೊಂಡು




