Menu

ಭಾರತದಲ್ಲಿ 44% ಶಸ್ತ್ರಚಿಕಿತ್ಸೆಗಳು ನಕಲಿ, ಅನಗತ್ಯ ಹಾಗೂ ಹಣಕ್ಕಾಗಿಯೇ ನಡೆಯುವುದು: ಮಾಧ್ಯಮ ಸಂಶೋಧನಾ ವರದಿ

ಭಾರತದ ವೈದ್ಯಕೀಯ ಕ್ಷೇತ್ರವು ತೀವ್ರ ಗತಿಯಲ್ಲಿ ಕುಸಿಯುತ್ತಿದೆ ಎಂಬುದನ್ನು ಸಂಸತ್ತಿನ ಸಮಿತಿಯೇ ಒಪ್ಪಿಕೊಂಡಿದ್ದು, ಬಹುತೇಕ ಈ ಕ್ಷೇತ್ರ ಹಣ ಮಾಡುವ ದಂಧೆಯಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗದು. Zee News ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ, ಭಾರತದಲ್ಲಿ ನಡೆಯುವ ಒಟ್ಟು ಶಸ್ತ್ರಚಿಕಿತ್ಸೆಗಳಲ್ಲಿ ಸುಮಾರು 44% ಶಸ್ತ್ರಚಿಕಿತ್ಸೆಗಳು ನಕಲಿ, ಅನಗತ್ಯ ಅಥವಾ ಸುಳ್ಳು ಆಗಿವೆ. ನಡೆಯುವ ಅರ್ಧದಷ್ಟು ಶಸ್ತ್ರಚಿಕಿತ್ಸೆಗಳು ರೋಗಿಗಳಿಂದ ಅಥವಾ ಸರ್ಕಾರಿ ವಿಮೆಯಿಂದ ಹಣ ಕಸಿಯಲು ಮಾತ್ರ ನಡೆಯುತ್ತಿವೆ.

ಪ್ರೀತ್ಸೋಣ ಬಾ ಅಂತ ಪೊಲೀಸ್ ಇನ್ ಸ್ಪೆಕ್ಟರ್ ಗೆ ಕಾಟ ಕೊಡುತ್ತಿದ್ದ ಮಹಿಳೆ ಅರೆಸ್ಟ್

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಪೊಲೀಸ್ ಇನ್ಸ್ಪೆಕ್ಟರ್‌ಗೆ ಪ್ರೀತಿಸು  ಎಂದು ಕಾಟ ಕೊಡುತ್ತಿದ್ದು,  ಅದು ಅತಿಯಾಗಿ ಈಗ ಪೊಲೀಸ್‌ ಅತಿಥಿಯಾಗಿದ್ದಾಳೆ.  ಪ್ರೀತಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕುತ್ತಿರುವುದಾಗಿ  ಆಕೆ ವಿರುದ್ಧ ಇನ್ಸ್ಪೆಕ್ಟರ್‌ ದೂರು ದಾಖಲಿಸಿದ್ದರು. ಬೆಂಗಳೂರು ರಾಮಮೂರ್ತಿನಗರ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಎಂಬವರ ಹಿಂದೆ

ಸೂಕ್ತ ತರಬೇತಿ ಪಡೆದ ತಜ್ಞ ಶಿಕ್ಷಕರ ಕೊರತೆ, ಅಸಮರ್ಪಕ ಬೋಧನಾ ವಿಧಾನಗಳಿಂದ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಗುಣಮಟ್ಟ ಕುಸಿತ

ಕಲ್ಯಾಣ ಕರ್ನಾಟಕ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಕುರಿತಾಗಿ ತಜ್ಞರ ಸಮಿತಿಯು ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಶಿಕ್ಷಣ ತಜ್ಞರ ಸಮಿತಿಯು ಮುಖ್ಯಮಂತ್ರಿ ಅವರಿಗೆ ಬೆಳಗಾವಿಯ ಸುವರ್ಣಸೌಧದಲ್ಲಿ  ಸಲ್ಲಿಸಿದ ವರದಿ ಸ್ವೀಕರಿಸಿ ಮಾತನಾಡಿದರು.

ಕೇಂದ್ರವೇ ಭರಿಸಬೇಕಿರುವ ನರೇಗಾ ವೆಚ್ಚ ಇನ್ಮುಂದೆ ರಾಜ್ಯ ಸರ್ಕಾರಕ್ಕೂ ಹೊರೆ, ಉದ್ಯೋಗ ಖಾತರಿಗೆ ಪ್ರಧಾನಿ ಕೊಕ್‌

ಕೇಂದ್ರ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸುವ ನರೇಗಾ ಯೋಜನೆಯ ಸ್ವರೂಪವನ್ನೇ ಬದಲಾಯಿಸಿರುವ ಎನ್ ಡಿ ಎ ಸರ್ಕಾರ, ಯೋಜನೆಯ ಶೇಕಡಾ 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾಗಳ ತಲೆಗೆ ಕಟ್ಟಲಾಗುತ್ತಿದೆ. ನರೇಗಾವು ಉದ್ಯೋಗ ಖಾತರಿ ನೀಡುವ ನೈಜ ಯೋಜನೆಯಾಗಿತ್ತು,  ನರೇಂದ್ರ ಮೋದಿ ಸರ್ಕಾರದ

ಬೈಕ್‌ ಚಲಾಯಿಸುವಾಗ ಹೃದಯಾಘಾತ: ನೆರವಿಗೆ ಜನ ಬಾರದೇ ಸವಾರ ನಡುರಸ್ತೆಯಲ್ಲೇ ಸಾವು!

ಬೆಂಗಳೂರು: ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಸವಾರ ಹೃದಯಾಘಾತವಾಗಿ ನರಳುತ್ತಿದ್ದರೂ ಯಾರೂ ನೆರವಿಗೆ ಬಾರದ ಕಾರಣ ನಡುರಸ್ತೆಯಲ್ಲೇ ಪ್ರಾಣ ಬಿಟ್ಟ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬನಶಂಕರಿ ಮೂರನೇ ಹಂತ ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ವೆಂಕಟರಾಮಣನ್‌ (34) ಮೃತಪಟ್ಟಿದ್ದಾರೆ. ಬನಶಂಕರಿಯಲ್ಲಿ

28.40 ಕೋಟಿಗೆ ಪ್ರಶಾಂತ್ ವೀರ್, ಕಾರ್ತಿಕ್ ಶರ್ಮ ಖರೀದಿ: ಇತಿಹಾಸ ಬರೆದ ಸಿಎಸ್ ಕೆ!

ಅನ್ ಕ್ಯಾಪ್ಡ್ (ಭಾರತ ತಂಡದಲ್ಲಿ ಸ್ಥಾನ ಪಡೆಯದ) ಯುವ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮ ಅವರಿಗೆ ತಲಾ 14.20 ಕೋಟಿ ರೂ. ವಿನಿಯೋಗಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸ ಬರೆದಿದೆ. ದುಬೈನಲ್ಲಿ ಮಂಗಳವಾರ ನಡೆದ ಐಪಿಎಲ್ ಮಿನಿ

ರೈತರ ಮನೆಬಾಗಿಲಿಗೆ ಸರ್ಕಾರ, ಪೋಡಿ ದುರಸ್ಥಿ: ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ: ಸರ್ಕಾರವೇ ಸ್ವಯಂ ಪ್ರೇರಿತವಾಗಿ ರೈತರ ಮನೆ ಬಾಗಿಲಿಗೆ ಹೋಗಿ ಅಭಿಯಾನ ಮಾದರಿಯಲ್ಲಿ ದರ್ಖಾಸ್ತು ಪೋಡಿ ಮಾಡಿಕೊಡುತ್ತಿದ್ದು, ಕನಿಷ್ಟ ದಾಖಲೆ ಇದ್ದರೂ ಪೋಡಿ ಮಾಡಿಕೊಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿಧಾನ ಪರಿಷತ್ನಲ್ಲಿ ಮಂಗಳವಾರ ಸದಸ್ಯರಾದ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ

ಅಂಡರ್ 19 ಏಷ್ಯಾಕಪ್: ಅಭಿಗ್ಯಾನ್ ದ್ವಿಶತಕ, ಭಾರತಕ್ಕೆ 315 ಗೆಲುವು

ಮಧ್ಯಮ ಕ್ರಮಾಂಕದಲ್ಲಿ ಅಭಿಗ್ಯಾನ್ ಕುಂದ್ ಸಿಡಿಸಿದ ದ್ವಿಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 315 ರನ್ ಗಳ ಭಾರೀ ಅಂತರದಿಂದ ಬಗ್ಗುಬಡಿದಿದೆ. ದುಬೈನಲ್ಲಿ ಮಂಗಳವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು

7 ಕೋಟಿಗೆ ಆರ್ ಸಿಬಿ ಪಾಲಾದ ವೆಂಕಟೇಶ್ ಅಯ್ಯರ್

ಸ್ಫೋಟಕ ಬ್ಯಾಟ್ಸ್ ಮನ್ ವೆಂಕಟೇಶ್ ಅಯ್ಯರ್ 7 ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ. ಅಬುಧಾಬಿಯಲ್ಲಿ ಮಂಗಳವಾರ ನಡೆದ ಮಿನಿ ಹರಾಜಿನಲ್ಲಿ 2 ಕೋಟಿ ರೂ. ಮೂಲಧನ ಹೊಂದಿದ್ದ ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿ ರೂ. ನೀಡಿ

ಜಾಲಹಳ್ಳಿ ಅಂಡರ್ ಪಾಸ್: ವಿರೋಧ ಪಕ್ಷ ನಾಯಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದ ಡಿಸಿಎಂ

ಜಾಲಹಳ್ಳಿ ಅಂಡರ್ ಪಾಸ್ ಕಾಮಗಾರಿ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಮುನಿರಾಜು ಅವರ ಪ್ರಶ್ನೆಗೆ ಶಿವಕುಮಾರ್ ಅವರು