Monday, September 22, 2025
Menu

ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್‌ ಸೇನಾಧಿಕಾರಿಗಳು ಭಾಗಿ

ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಭಾಗಿಯಾಗಿದ್ದ ಫೋಟೋ ವೈರಲ್ ಆಗಿದ್ದು, ಪಾಕ್ ಸೇನೆ ಆತ ಒಬ್ಬ ಮುಗ್ಧ ಧರ್ಮ ಪ್ರಚಾರಕ ಎಂದು ಸಮರ್ಥಿಸಿಕೊಂಡಿದೆ. ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೈಬಾ ಸಂಘಟನೆಯ ಉಗ್ರ ಸತ್ತಿದ್ದ. ಆತನ ಅಂತ್ಯಕ್ರಿಯೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಭಯೋತ್ಪಾದಕ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಜರ್ ಹಾಗೂ ಪಾಕಿಸ್ತಾನ ಅಧಿಕಾರಿಗಳು ಭಾಗಿಯಾಗಿದ್ದ ಫೋಟೋ ವೈರಲ್

ಅಕ್ರಮ ಸಂಬಂಧದಿಂದ ಮಗು: ಬೆಂಗಳೂರಿನ ಆಟೊದಲ್ಲಿ ಮಲಗಿಸಿ ಜೋಡಿ ಪರಾರಿ

ಕಾನೂನು ಬಾಹಿರವಾದ ಸಂಬಂಧದಿಂದ ಜನಿಸಿದ 15 ದಿನಗಳ ಹೆಣ್ಣು ಮಗುವನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆಯ ಪೊಲೀಸರು ಪತ್ತೆ ಹಚ್ಚಿ, ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಬೆಳಿಗ್ಗೆ ಎಂಟಿಟಿಸಿ ಕ್ಯಾಟ್ರಸ್ ಹತ್ತಿರ  ರಸ್ತೆ ಬದಿಯಲ್ಲಿ

ಸೈಬರ್ ದಾಳಿಗಳ ಬಗ್ಗೆ ನಾಗರಿಕರು ಎಚ್ಚರ ವಹಿಸಿ: ಪೊಲೀಸ್ ಕಮಿಷನರ್ ಬಿ. ದಯಾನಂದ್

ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೈಬರ್ ದಾಳಿಗಳ ಸಾಧ್ಯತೆ ಬಗ್ಗೆ ನಾಗರಿಕರು ಎಚ್ಚರ ವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದ್ದಾರೆ. ಸೈಬರ್ ಅಪರಾಧಿಗಳು ನಕಲಿ ಲಿಂಕ್‌ಗಳು, ಇ-ಮೇಲ್‌ಗಳು, ಮತ್ತು ದುರುದ್ದೇಶಪೂರಿತ ಫೈಲ್‌ಗಳ ಮೂಲಕ ಡೇಟಾ ಕದಿಯಲು

ಚಿತ್ರದುರ್ಗದಲ್ಲಿ ಕಾರು ಲಾರಿ ಡಿಕ್ಕಿ: ಮೂವರ ಸಾವು

ಚಿತ್ರದುರ್ಗದ ಹೊಳಲ್ಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವಾ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ ಒಬ್ಬ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ. ಸುನಿತಾ (34), ಶ್ಯಾಮ್ (29) ಮತ್ತು ಶಿವು (35) ಮೃತಪಟ್ಟವರು. ನಸುಕಿನ ಜಾವ 3:00 ಗಂಟೆ ವೇಳೆಗೆ ಕಣಿವೆ

ಕಾಮಿಡಿ ಕಿಲಾಡಿಗಳು ಸೀಸನ್ 3’ರ ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ

ಕಾಮಿಡಿ ಕಿಲಾಡಿಗಳು ಸೀಸನ್ 3’ರ ವಿನ್ನರ್ ರಾಕೇಶ್ ಪೂಜಾರಿ ಹೃದಯಾಘಾತದಿಂದ ಇಂದು (ಮೇ 12) ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ನಿನ್ನೆ ಬೆಳಗ್ಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ರ ಶೂಟಿಂಗ್ ಮುಗಿಸಿ ಸಂಜೆ ಗೆಳೆಯರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಏನಿದು, ಪಾಕ್‌ಗೆ ಚೀನಾ ಸಮನ್ಸ್‌

ತಾನು ವಿಧಿಸಿರುವ ಷರತ್ತು ಉಲ್ಲಂಘಿಸಿದ್ದಕ್ಕೆ ಚೀನಾವು ಪಾಕಿಸ್ತಾನಕ್ಕೆ ಸಮನ್ಸ್‌ ನೀಡಿದೆ ಎಂದು ಸುದ್ದಿಯಾಗಿದೆ, ತಾನು ಪೂರೈಸಿರುವ ಪಿಎಸ್‌15 ಕ್ಷಿಪಣಿ, ಜೆ17 ಫೈಟರ್‌ ಜೆಟ್‌ಗಳನ್ನು ಯುದ್ಧಕ್ಕೆ ಬಳಸಬಾರದು ಎನ್ನುವ ಷರತ್ತನ್ನು ಹಾಕಿದ್ದರೂ ಚೀನಾ ಅದನ್ನು ಉಲ್ಲಂಘಿಸಿದೆ ಎಂಬುದೇ ಚೀನಾದ ಸಿಟ್ಟಿಗೆ ಕಾರಣ ಎಂದು

ಕಂದಾಯ ಭೂಮಿಯಲ್ಲಿ ವಾಸವಿರುವ  ಹಟ್ಟಿ,‌ ತಾಂಡಾಗಳ 1 ಲಕ್ಷ ಜನರಿಗೆ‌ ಪಟ್ಟಾ ಖಾತೆ

“ಕಾಂಗ್ರೆಸ್ ‌ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ.20 ರಂದು ವಿಜಯನಗರದಲ್ಲಿ ನಡೆಯುವ ಸಮಾವೇಶದಲ್ಲಿ ತಾಂಡಾ,‌‌ ಹಟ್ಟಿ ಸೇರಿದಂತೆ ಕಂದಾಯ ಭೂಮಿಯಲ್ಲಿ ವಾಸವಿರುವ 1 ಲಕ್ಷ ಜನರಿಗೆ ಪಟ್ಟಾ ಖಾತೆ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಘೋಷಿಸಿದ್ದಾರೆ. ರಾಮನಗರದಲ್ಲಿ ನಡೆದ ಜಿಲ್ಲಾ

ರಾಮನಗರ ಜಿಲ್ಲೆಯ ಅಭಿವೃದ್ಧಿಗೆ 500 ಕೋಟಿಗೂ ಹೆಚ್ಚು ಅನುದಾನ: ಡಿ.ಕೆ.ಶಿವಕುಮಾರ್

“ರಾಮನಗರ ಪಟ್ಟಣ ಪ್ರದೇಶದ ಅಭಿವೃದ್ಧಿಗೆ ರೂ.150 ಕೋಟಿ, ನೀರಾವರಿ ಇಲಾಖೆಯಿಂದ ರೂ. 400 ಕೋಟಿ ಅನುದಾನ ನೀಡಲಾಗಿದೆ. ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ತರಲಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಹೊಸರೂಪ ನೀಡಲಾಗುವುದು,” ಎಂದು ಡಿಸಿಎಂ ಡಿ.ಕೆ. ಶಿವ ಕುಮಾರ್

ದೆಹಲಿ-ಬೆಂಗಳೂರು ರೈಲಿಗೆ ಬಾಂಬ್‌ ಬೆದರಿಕೆ ಕರೆ: ಆರೋಪಿ ಸೆರೆ

ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆಕೆ ಎಕ್ಸ್​ಪ್ರೆಸ್ ರೈಲಿಗೆ ವ್ಯಕ್ತಿಯೊಬ್ಬ ಹುಸಿ ಬಾಂಬ್​ ಬೆದರಿಕೆ ಕರೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ. ಮಧ್ಯರಾತ್ರಿ ಒಂದು ಗಂಟೆಗೆ ಹುಸಿ ಬಾಂಬ್ ಕರೆ ಬಂದ ಕೂಡಲೇ ವಾಡಿ ಜಂಕ್ಷನ್ ಬಳಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿ ಹುಸಿಬಾಂಬ್

CA EXAMS 2025: ಮೇ 16 ರಿಂದ ಮೇ 24 ರವರೆಗೆ

ಭಾರತ-ಪಾಕಿಸ್ತಾನ ಉದ್ವಿಗ್ನತೆ ಕಾರಣಕ್ಕೆ ಮುಂದೂಡಿಕೆಯಾಗಿದ್ದ CA ಪರೀಕ್ಷೆಗಳನ್ನು ಮೇ 16 ರಿಂದ ಮೇ 24 ರವರೆಗೆ ನಡೆಸಲಾಗುವುದು ಎಂದು ICAI ಹೇಳಿದೆ. ಈ ಪರೀಕ್ಷೆಗಳು ಮೇ 9 ರಿಂದ ಮೇ 14, 2025 ರ ನಡುವೆ ನಡೆಯಬೇಕಿತ್ತು, ಮುಂದೂಡಿಕೆಯಾಗಿದ್ದರಿಂದ ಹೊಸ ವೇಳಾಪಟ್ಟಿ