Monday, September 22, 2025
Menu

ಸಿಬಿಎಸ್ ಸಿ 12ನೇ ತರಗತಿ ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ

ನವದೆಹಲಿ:  2025ನೇ ಸಾಲಿನ ಸಿಬಿಎಸ್ ಸಿ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.88.39ರಷ್ಟು ಫಲಿತಾಂಶ ಹೊರಬಂದಿದೆ. ಮಂಗಳವಾರ ಬೆಳಿಗ್ಗೆ ಫಲಿತಾಂಶ ಪ್ರಕಟವಾಗಿದ್ದು, ಶೇ.5ರಷ್ಟು ಅಂಕದಿಂದ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜಯವಾಡ ಶೇ.99.60 ಫಲಿತಾಂಶದೊಂದಿಗೆ ಇಡೀ ದೇಶದಲ್ಲೇ ಅಗ್ರಸ್ಥಾನ ಪಡೆದಿದೆ. ಸಿಬಿಎಸ್ ಇಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಾದರೆ ಕನಿಷ್ಠ ಶೇ.33ರಷ್ಟು  ಫಲಿತಾಂಶ ಪಡೆಯಬೇಕಾಗಿದೆ. ಕೇವಲ 1 ಮತ್ತು 2 ಅಂಕದಿಂದ ಫೇಲಾದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡುವ ಮೂಲಕ ಪಾಸ್ ಮಾಡಲಾಗುವುದು

ಆಪರೇಷನ್ ಸಿಂಧೂರ ಯಶಸ್ವಿಗೊಳಿಸಿದ ಸೇನೆಗೆ ಮಂತ್ರಾಲಯದಿಂದ 25 ಲಕ್ಷ ದೇಣಿಗೆ

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರʼ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಯಶಸ್ಸು ಸಾಧಿಸಿದೆ. ಈ ಹಿನ್ನೆಲೆ ಯಲ್ಲಿ ಭಾರತ ರಕ್ಷಣಾ ಸಚಿವಾಲಯಕ್ಕೆ ಪ್ರಸಾದ ರೂಪದಲ್ಲಿ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು

ಆದಂಪುರ ವಾಯುಸೇನಾ ನೆಲೆಗೆ ಪ್ರಧಾನಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಂಜಾಬ್‌ನ ಆದಂಪುರ ವಾಯುಸೇನಾ ನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಸಂವಾದ ನಡೆಸಿದರು. ಆದಂಪುರ ವಾಯುನೆಲೆಯು ಭಾರತೀಯ ವಾಯುಸೇನೆಯ ಪ್ರಮುಖ ಕೇಂದ್ರವಾಗಿದ್ದು, ಉತ್ತರ ಭಾರತದ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಭೇಟಿಯ ಮೂಲಕ ಪ್ರಧಾನಿ ಮೋದಿ

ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಉಗ್ರರು ಹತ

ಜಮ್ಮು ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಮಂಗಳವಾರ ಉಗ್ರರು ಹಾಗೂ ಸೇನಾಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಮೂವರು ಉಗ್ರರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಾಲ್ವರು ಭಯೋತ್ಪಾದಕರು ಹಾಗೂ ಭಾರತದ ಭದ್ರತಾ ಪಡೆ ನಡುವಿನ ಹೋರಾಟದಲ್ಲಿ ಲಷ್ಕರ್-ಎ-ತಯ್ಬಾ ಸಂಘಟನೆಯ ಒಬ್ಬ ಉಗ್ರ ಹತನಾಗಿದ್ದಾನೆ.

ಪಿಎಂಒ ಅಧಿಕಾರಿ ಸೋಗಿನಲ್ಲಿ INS ವಿಕ್ರಾಂತ್ ಮಾಹಿತಿ ಕೇಳಿದ್ದ ವ್ಯಕ್ತಿಯ ಬಂಧನ

ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ನೌಕಾಪಡೆಯ ಐಎನ್‌ಎಸ್‌ ವಿಕ್ರಾಂತ್ ಹಡಗಿನ ಬಗ್ಗೆ ಮಾಹಿತಿ ಕೇಳಿದ್ದ ಕೇರಳದ ವ್ಯಕ್ತಿಯನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ. ಕೇರಳದ ಕೋಝಿಕೋಡ್ ಎಲ್ತೂರ್ ನಿವಾಸಿ ಮುಜೀಬ್ ರೆಹಮಾಮ್ ಬಂಧಿತ ಆರೋಪಿ. ತಾನು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ

ಪಾರ್ಲಿಮೆಂಟ್ ಸಭೆ ಕರೆಯುವಂತೆ ಪ್ರಧಾನಿಗೆ ಪತ್ರ, ರೆಸ್ಪಾನ್ಸ್ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಭಾರತ -ಪಾಕಿಸ್ತಾನ ಮಧ್ಯೆ ಯುದ್ಧ ಬಿಕ್ಕಟ್ಟು ಪರಿಸ್ಥಿತಿಯಲ್ಲಿ  ನಮ್ಮ ಪಕ್ಷ ಮತ್ತು ಘಟಬಂಧನ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಈ ವಿಚಾರದ ಬಗ್ಗೆ ಚರ್ಚೆಗೆ ಬೇಗನೇ ಪಾರ್ಲಿಮೆಂಟ್ ಸಭೆ ಕರೆಯಿರಿ ಮಾತಾಡೋಣ ಅಂತ ಪ್ರಧಾನಿಗೆ ಪತ್ರ ಬರೆದಿದ್ದೇವೆ.ಆದರೆ ಪ್ರಧಾನಿ ಅವರಿಂದ

ಅಮೃತಸರದಲ್ಲಿ ನಕಲಿ ಮದ್ಯ ಸೇವಿಸಿ 14 ಕಾರ್ಮಿಕರ ಸಾವು

ಪಂಜಾಬ್‌ನ ಅಮೃತಸರ ಜಿಲ್ಲೆಯ ಗ್ರಾಮಗಳಲ್ಲಿ ಇಟ್ಟಿಗೆ ಗೂಡುಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು ನಕಲಿ ಮದ್ಯ ಸೇವಿಸಿದ ಪರಿಣಾಮವಾಗಿ 14 ಮಂದಿ ಮೃತಪಟ್ಟಿದ್ದಾರೆ. ಭಂಗಲಿ, ಪಾತಾಳಪುರಿ, ಮರಾರಿ ಕಲಾನ್, ಥೆರೆವಾಲ್ ಮತ್ತು ತಲ್ಯಾಂಡಿ ಘುಮಾನ್ ಗ್ರಾಮಗಳಲ್ಲಿ ಈ ಸಾವು ಸಂಭವಿಸಿವೆ. ಅಗ್ಗದ ದರದಲ್ಲಿ

ಆಫ್ರಿಕಾದಲ್ಲಿ ಭಯೋತ್ಪಾದಕರ ದಾಳಿಗೆ ನೂರಕ್ಕೂ ಹೆಚ್ಚು ಜನ ಸಾವು

ಆಫ್ರಿಕಾದ ಸಹೇಲ್‌ನ ಜಿಹಾದಿ ಹಿಂಸಾಚಾರ ಪೀಡಿತ ಪ್ರದೇಶ ಬುರ್ಕಿನಾ ಫಾಸೊದಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 100ಕ್ಕೂ ಹೆಚ್ಚು ಜನರು, ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜಿಬೋ ನಗರ ಮತ್ತು ಸಮೀಪದ ಮಿಲಿಟರಿ ನೆಲೆಗಳ ಮೇಲೆ ಈ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ಅಲ್-ಖೈದಾ

ಬಳ್ಳಾರಿಯಲ್ಲಿ ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

ಬಳ್ಳಾರಿಯಲ್ಲಿ ತಡರಾತ್ರಿ  ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಶಾಲ್ ನಗರ, ರೂಪನಗುಡಿ ರಸ್ತೆ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಇತರ ತಗ್ಗು ಪ್ರದೇಶಗಳಲ್ಲಿಯೂ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಿಡಕಲ್, ನಿಪ್ಪಾಣಿ, ಬೀದರ್, ಬೆಂಗಳೂರು,

ನಂಜನಗೂಡು: ಚಿರತೆ ದಾಳಿಯಿಂದ ನಾಲ್ಕು ಹಸುಗಳಿಗೆ ಗಂಭೀರ ಗಾಯ

ನಂಜನಗೂಡು ತಾಲೂಕಿನ ದಾಸನೂರು ಗ್ರಾಮದಲ್ಲಿ ನಾಲ್ಕು ಹಸುಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಹಸುಗಳು ಗಂಭೀರ ಗಾಯಗೊಂಡಿವೆ. ಗ್ರಾಮದ ರೈತ ಬಸವಣ್ಣ ಜಮೀನಿನಲ್ಲಿ ಹಸುಗಳನ್ನು ಮೇಯಿಸುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದೆ. ಚಿರತೆಯಿಂದ ತಪ್ಪಿಸಿಕೊಳ್ಳಲು ಹಸುಗಳು ದಿಕ್ಕಾಪಾಲಾಗಿ ಓಡಿವೆ. ಓಡುವಾಗ ಹಸುಗಳು