Featured
ಇನ್ನಷ್ಟು ರಕ್ಷಣಾ ಕ್ಷಿಪಣಿ ಎಸ್ 400ಗಾಗಿ ರಷ್ಯಾಗೆ ಭಾರತ ಬೇಡಿಕೆ
ಭಾರತದ ವಾಯುಪಡೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಉಡಾಯಿಸುತ್ತಿದ್ದ ಕ್ಷಿಪಣಿಗಳನ್ನು ತಡೆದು ನಾಶಗೊಳಿಸಿ ಭಾರತ ವನ್ನು ರಕ್ಷಿಸಿದ್ದ S-400 ವಾಯು ರಕ್ಷಣಾ ಕ್ಷಿಪಣಿಯ ಹೆಚ್ಚುವರಿ ಘಟಕಗಳನ್ನು ನೀಡುವಂತೆ ಭಾರತವು ರಷ್ಯಾಗೆ ಮನವಿ ಮಾಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಉಡಾಯಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆದು ತಟಸ್ಥಗೊಳಿಸುವಲ್ಲಿ ಎಸ್ 400 ನಿರ್ಣಾಯಕ ಪಾತ್ರ ವಹಿಸಿತ್ತು. ಅಧಿಕಾರಿಗಳ ಪ್ರಕಾರ ಪಶ್ಚಿಮ ಗಡಿಯುದ್ದಕ್ಕೂ ವೈಮಾನಿಕ ಬೆದರಿಕೆಗಳನ್ನು ಎದುರಿಸುವಲ್ಲಿ ಈ ವ್ಯವಸ್ಥೆಗಳು ಹೆಚ್ಚಿನ ನಿಖರತೆ
ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ 6 ಸಾವು
ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿದಂತೆ 6 ಮಂದಿ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ರಾರಾವಿ ಗ್ರಾಮದ ನಿವಾಸಿಗಳಾದ ಬೀರಪ್ಪ
ಪಹಲ್ಗಾಮ್ ದಾಳಿ ಉಗ್ರರ ತಲೆಗೆ 20 ಲಕ್ಷ ರೂ. ಬಹುಮಾನ ಘೋಷಣೆ
ಶ್ರೀನಗರ:ಕಾಶ್ಮೀರದ ಪಹಲ್ಗಾಮ್ನಲ್ಲಿ ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರ ಬಗ್ಗೆ ಸುಳಿವು ಅಥವಾ ಹಿಡಿದು ಕೊಟ್ಟವರಿಗೆ 20 ಲಕ್ಷ ರೂ ನಗದು ಬಹುಮಾನ ಘೋಷಿಸಲಾಗಿದೆ. ಪ್ರವಾಸಿಗರ ಹತ್ಯೆ ಮಾಡಿದ ಉಗ್ರರ ಪತ್ತೆ ಕಾರ್ಯ ನಡೆಯುತ್ತಿದೆ. ಶಂಕಿತ ಮೂವರು ಉಗ್ರರು
ಪಾಕಿಸ್ತಾನಕ್ಕೆ ನೀರು ಬಿಡಲ್ಲ: ಕೇಂದ್ರ ವಿದೇಶಾಂಗ ಸಚಿವಾಲಯ ಸ್ಪಷ್ಟನೆ
ದೆಹಲಿ: ಉಗ್ರರಿಗೆ ಬೆಂಬಲ ಹಾಗೂ ಪ್ರಚೋದನೆ ನೀಡುವುದನ್ನು ನಿಲ್ಲಿಸುವವರೆಗೂ ಭಾರತ ಸಿಂಧೂ ನದಿ ನೀರು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಮಾತನಾಡಿ, ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ
ಮನೆಗೆ ನುಗ್ಗಿ ಹೊಡೆಯುತ್ತೇವೆ: ಪ್ರಧಾನಿ ಮೋದಿ ಎಚ್ಚರಿಕೆ
ಅಮೃತಸರ: ಉಗ್ರರಿಗೆ ಆಶ್ರಯ ನೀಡಿದರೆ ಮನೆಗೆ ನುಗ್ಗಿ ಹೊಡೆಯುತ್ತೇವೆ. ತಪ್ಪಿಸಿಕೊಳ್ಳಲು ಕೂಡ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ದಾಳಿ ಪ್ರತಿದಾಳಿ ನಂತರ ಕದನ
ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ: ಆರ್.ಅಶೋಕ
ಬೆಂಗಳೂರು: ಭಾರತೀಯ ಸೇನೆ 100 ಕ್ಕೂ ಅಧಿಕ ಭಯೋತ್ಪಾದಕರನ್ನು ನಾಶ ಮಾಡಿದೆ. ಕದನ ವಿರಾಮ ಘೋಷಣೆಯಾದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು.
ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟ: ಬೆಂಗಳೂರಿಗೆ 3ನೇ ಸ್ಥಾನ!
ನವದೆಹಲಿ: ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಶೇ.93.66 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ದೇಶದಲ್ಲೇ ಅತೀ ಹೆಚ್ಚು ಫಲಿತಾಂಶ ಪಡೆದ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ಮಂಗಳವಾರ ಸಿಬಿಎಸ್ ಇ 10ನೇ
ಈಜಿಪುರ ಫ್ಲೈ ಓವರ್ ಈಸಿ ಮಾಡಿ: ಟ್ರಂಪ್ ಮಧ್ಯಸ್ಥಿಕೆ ಕೋರಿದ ಟ್ವೀಟ್ ವೈರಲ್
ವಿಳಂಬಗೊಳ್ಳುತ್ತಿರುವ ಈಜಿಪುರ ಫ್ಲೈಓವರ್ ಕಾಮಗಾರಿಯಿಂದ ನಾಗರಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ನೀವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೊತೆ ಮಾತನಾಡಿ ಈಜಿಪುರ ಮೇಲ್ಸೇತುವೆ ಕೆಲಸವನ್ನು ಬೇಗ ಈಸಿ ಆಗಿ ಮುಗಿಸಲು ಸಹಾಯ ಮಾಡಬಹುದೇ, ಅದಕ್ಕೆ “ಮಗಾ ಟ್ರಂಪ್ ಮೇಲ್ಸೇತುವೆ” ಎಂದು ಹೆಸರಿಡುವುದಾಗಿ ಮಾಡಿರುವ
9 ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ
ಚೆನ್ನೈ: ಹಲವು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ತಮಿಳುನಾಡಿನ ಪೊಲಾಚ್ಚಿ ಪ್ರಕರಣದ ಎಲ್ಲಾ 9 ಆರೋಪಿಗಳಿಗೆ ಮದ್ರಾಸ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಮೂರ್ತಿ ಆರ್.ನಂದಿನಿ ದೇವಿ ನೇತೃತ್ವದ ಪೀಠ, ಮಹಿಳೆಯರನ್ನು ಬ್ಲಾಕ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದೂ ಅಲ್ಲದೇ
ರಜೆಯಲ್ಲಿ ಬಂದಿದ್ದ ಯೋಧ ಕೊಡಗಿನಲ್ಲಿ ಅಪಘಾತಕ್ಕೆ ಬಲಿ
ರಜೆಯಲ್ಲಿ ತವರು ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಚೆನ್ನಂಗೊಲ್ಲಿ ಪೊನ್ನಪ್ಪಸಂತೆಗೆ ಬಂದಿದ್ದ ಯೋಧ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪೊನ್ನಪ್ಪಸಂತೆಯ ಬಿದ್ದಮಾಡ ಬಿಪಿನ್ ಭೀಮಯ್ಯ (36) ಮೃತ ಯೋಧ. ರಜೆಯಲ್ಲಿ ಮನೆಗೆ ಬಂದಿದ್ದ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿ ಸ್ಥಳದಲ್ಲೇ ಅಸು ನೀಗಿದ್ದಾರೆ. ಮದುವೆ