Wednesday, November 26, 2025
Menu

ಪಿಯುಸಿ, ಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿ ದಂಧೆ: ಮೂವರ ಬಂಧನ

ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯ ಮೂಲಕ ಪಿಯುಸಿ ಮತ್ತು ಎಸ್​ಎಸ್​ಎಲ್​​ಸಿ ತತ್ಸಮಾನ ಎಂದು ನಕಲಿ ಅಂಕಪಟ್ಟಿ ನೀಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸ್ಟಡಿ ಸೆಂಟರ್​ಗಳನ್ನು ತೆರೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಆರೋಪಿಗಳು ಬೆಂಗಳೂರು, ಬೆಳಗಾವಿ, ಧಾರವಾಡದಲ್ಲಿಂದ್ದುಕೊಂಡು ಈ ದಂಧೆ ನಡೆಸುತ್ತಿದ್ದರು. ಸ್ಟಡಿ ಸೆಂಟರ್‌ಗೆ ಕರೆಸ್ಪಾಂಡಿಂಗ್ ವ್ಯಾಸಂಗ ಮಾಡುವರನ್ನು ದಾಖಲಿಸಿಕೊಳ್ಳುತ್ತಿದ್ದರು. ಕಲವೇ ದಿನಗಳದಲ್ಲಿ ಅವರಿಗೆ ಕರ್ನಾಟಕ ಮಾಧ್ಯಮಿಕ ಮತ್ತು ಉನ್ನತ

ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಪತ್ನಿ

ರಾಜಸ್ಥಾನದ ಝಲಾವರ್ ಜಿಲ್ಲೆಯ ಬಕಾನಿ ಪಟ್ಟಣದಲ್ಲಿ ಪತ್ನಿ ಕೋಪದಲ್ಲಿ ತನ್ನ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿ ಸಿರುವ ಸುದ್ದಿಯೊಂದು ವೈರಲ್‌ ಆಗ್ತಿದೆ. ಆದರೆ ಈ ಘಟನೆಯು ನಂಬಲರ್ಹವೇ ಎಂಬ ಪ್ರಶ್ನೆ ಕೂಡ ಹಲವರನ್ನು ಕಾಡಿದೆ. ಪತ್ನಿಯು ಗಂಡನ ನಾಲಗೆ ಕಚ್ಚಿ ತುಂಡರಿಸಲು

ಸಂಘಟಿತ ಅಪರಾಧ ಕೇಸ್ ದಾಖಲಿಸಲು ಅನುಮತಿ: ಎಚ್ಚರಿಕೆ ವಹಿಸಲು ಹೈಕೋರ್ಟ್ ಸೂಚನೆ

ಸಂಘಟಿತ ಅಪರಾಧ (ಬಿಎನ್ಎಸ್ ಸೆಕ್ಷನ್ 111) ಅಡಿ ಪ್ರಕರಣ ದಾಖಲಿಸಲು ತನಿಖಾಧಿಕಾರಿಗಳಿಗೆ ಅನುಮತಿ ನೀಡುವಾಗ  ವಿಚಾರಣಾ ನ್ಯಾಯಾಲಯಗಳು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸೋಮವಾರ ಹೈಕೋರ್ಟ್ ತಿಳಿಸಿದೆ. ಮತ್ತೊಬ್ಬ ವ್ಯಕ್ತಿಯ ಎಟಿಎಂ ಕದ್ದು ಬಳಕೆ ಮಾಡಿ 1 ಲಕ್ಷ ರೂ. ಹಣ

ಮಸ್ಕಿ ಪುರಸಭೆಯಲ್ಲಿ ಅವ್ಯವಹಾರ: ಮುಖ್ಯಾಧಿಕಾರಿ ಅಮಾನತು

ರಾಯಚೂರಿನ ಮಸ್ಕಿ ಪುರಸಭೆಯಲ್ಲಿ ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರ ಪ್ರಕರಣ ಸಂಬಂಧ ತಪ್ಪಿತಸ್ಥ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕ್ರಮ ಕೈಗೊಂಡು ಕರ್ತವ್ಯಲೋಪ, ಹಣ ದುರ್ಬಳಕೆ ಆರೋಪದಡಿ ಅಮಾನತುಗೊಳಿಸಿದ್ದಾರೆ. ರೆಡ್ಡಿರಾಯನಗೌಡ ಅಮಾನತುಗೊಂಡ ಹಿಂದಿನ ಮಸ್ಕಿ ಪುರಸಭೆ ಮುಖ್ಯ ಅಧಿಕಾರಿ. ಪ್ರಸ್ತುತ

ಮದುವೆಯಾಗಿ 2 ವಾರದಲ್ಲೇ ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆಗೈದ ಪತ್ನಿ

ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಮದುವೆಯಾದ 2 ವಾರದಲ್ಲೇ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿಸಿದ್ದಾಳೆ. ಆರೋಪಿಗಳಾದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಯನ್ನು ಪೋಷಕರು ಒಪ್ಪಲಿಲ್ಲ. ಮಾ.5 ರಂದು ಪ್ರಗತಿಯನ್ನು

ಭೂ ಒತ್ತುವರಿ ಪ್ರಕರಣದಲ್ಲಿ  ಕೇಂದ್ರ ಸಚಿವ ಹೆಚ್‌ಡಿಕೆ ಸದ್ಯ ನಿರಾಳ  

ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತೆರವು ಸಂಬಂಧ ತಹಶೀಲ್ದಾರ್ ನೀಡಿದ ನೋಟಿಸ್​ ವಿರುದ್ಧ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ಅವರಿಗೆ ಹೈಕೋರ್ಟ್​​ ತಾತ್ಕಾಲಿಕ ರಿಲೀಫ್ ನೀಡಿದೆ. ಈ ಬಗ್ಗೆ ದಾಖಲೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಎಎಜಿ ಕಿರಣ್ ರೋಣ್

ನಿವೃತ್ತ ಜಸ್ಟಿಸ್‌ ನಾಗಮೋಹನ್ ದಾಸ್ ವರದಿ ಬಳಿಕ ಸಿಎಂ ಜತೆ ಒಳಮೀಸಲು ಚರ್ಚಿಸಿ ಕ್ರಮ

ಒಳಮೀಸಲಾತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಒಂದು ವಾರದಲ್ಲಿ ನೀಡಲಿರುವ ಮಧ್ಯಂತರ ವರದಿ ಬಳಿಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಹೆಚ್.ಸಿ. ಮಹದೇವಪ್ಪ ಹೇಳಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ

ಆಯುರ್ವೇದ ಉಳಿಸಿ ಬೆಳೆಸಿಕೊಂಡು ಹೋಗಬೇಕು: ಡಿಕೆ ಶಿವಕುಮಾರ್

ಆಯುರ್ವೇದ ಚಿಕಿತ್ಸಾ ಪದ್ಧತಿ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದ್ದು, ಇದು ನಮ್ಮ ಮೂಲ. ಆಯುರ್ವೇದ ನಮ್ಮ ಆಸ್ತಿಯಾಗಿದ್ದು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು. ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿಶ್ವವಿದ್ಯಾಲಯದ ಪುರುಷ ವಿದ್ಯಾರ್ಥಿನಿಲಯದ

ಸೋಲಿನ ದವಡೆಯಿಂದ ಗೆಲುವು ಕಸಿದ ಅಶುತೋಷ್: 209 ರನ್ ಪೇರಿಸಿ ಸೋತ ಲಕ್ನೋ

ವಿಶಾಖಪಟ್ಟಣ: ಬಾಲಂಗೋಚಿ ಬ್ಯಾಟ್ಸ್ ಮನ್ ಗಳು ತೋರಿದ ಅಭೂತಪೂರ್ವ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲಿನ ದವಡೆಯಿಂದ ಗೆಲುವು ಕಸಿದುಕೊಂಡು ಬೀಗಿದರೆ, ಗೆದ್ದೇ ಬಿಟ್ಟೆವು ಎಂದು ಬೀಗುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್ ನಿಂದ ಸೋಲುಂಡಿದೆ. ವಿಶಾಖಪಟ್ಟಣದಲ್ಲಿ ಸೋಮವಾರ ನಡೆದ

ರಾಜ್ಯ ಇತಿಹಾಸದಲ್ಲೇ 18 ಸಾವಿರ ಮೆ.ವ್ಯಾ. ದಾಖಲೆ ಪ್ರಮಾಣದ ವಿದ್ಯುತ್ ಬೇಡಿಕೆ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಕಳೆದ ಎರಡು ತಿಂಗಳಲ್ಲಿ ಗರಿಷ್ಠ ಬೇಡಿಕೆ ಅವಧಿ (ಪೀಕ್ ಅವರ್ ಡಿಮಾಂಡ್) ಯಲ್ಲಿ 18 ಸಾವಿರ ಮೆಗಾವ್ಯಾಟ್ ದಾಟಿದೆ. ಏಪ್ರಿಲ್ ತಿಂಗಳಲ್ಲಿ 18,500 ಮೆಗಾವ್ಯಾಟ್ ತಲುಪುವ ಸಾಧ್ಯತೆ ಇದೆ. ಸೋಮವಾರ ಜಂಟಿ