Featured
ಜಾತಿ ಗಣತಿ: ಈ ದಾಖಲೆಗಳನ್ನು ತಪ್ಪದೇ ಸಿದ್ಧವಾಗಿಟ್ಟುಕೊಳ್ಳಿ
ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ (ಜಾತಿ ಗಣತಿ) ಸಮೀಕ್ಷೆಯನ್ನು ರಾಜ್ಯದಲ್ಲಿ ನಡೆಸಲಿದ್ದು, ಆಯೋಗದ ಸಿಬ್ಬಂದಿಗಳು ಪ್ರತಿ ಮನೆಗೆ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸುತ್ತಾರೆ ನಂತರ ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ವೇಳೆ ಅವರಿಗೆ ಅಗತ್ಯ ದಾಖಲೆಗಳ ಜೊತೆಗೆ ಸೂಕ್ತ ಮಾಹಿತಿ ಒದಗಿಸಿ ಸಹಕರಿಸುವ ಮೂಲಕ ಈ ಸಮೀಕ್ಷೆಯನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಸೂಚನೆ ನೀಡಲಾಗಿದೆ.
KSRTC ದಸರಾ ವಿಶೇಷ ಟೂರ್ ಪ್ಯಾಕೇಜ್: ಯಾವಾಗಿಂದ ಆರಂಭ? ದರ ಎಷ್ಟು?
ನಾಡಹಬ್ಬ ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಟೂರ್ ಪ್ಯಾಕೇಜ್ (Tour Package) ಪ್ರಾರಂಭಿಸಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 7 ರವರೆಗೆ ಈ ಪ್ಯಾಕೇಜ್ನ ಸೇವೆಯ ಬಸ್‌ಗಳು ಕಾರ್ಯಾ ನಿರ್ವಹಿಸಲಿವೆ.
ಜಾತಿಗಣತಿ ಮುಂದೂಡಲು ಆಗ್ರಹ: ಮಲ್ಲಿಕಾರ್ಜುನ ಖರ್ಗೆಗೆ ಮನವಿ ಸಲ್ಲಿಕೆ
ಇಂದಿನಿಂದ ಕರ್ನಾಟಕದಾದ್ಯಂತ ಆರಂಭವಾಗಿರುವ ಜಾತಿ ಜನಗಣತಿ (ಸಾಮಾಜಿಕ, ಆರ್ಥಿಕ, ಶೈಕ್ಷಣಿಕ) ಸಮೀಕ್ಷೆಯನ್ನು ಮುಂದೂಡುವಂತೆ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಆಗ್ರಹಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಭೇಟಿಯಾಗಿ 15
ಬಗರಮ್ ವಾಯು ನೆಲೆಯ ಒಂದಿಂಚೂ ಕೊಡಲ್ಲ: ಟ್ರಂಪ್‌ಗೆ ಆಫ್ಘನ್ ಸವಾಲು
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸಮೀಪವಿರುವ ಬಗರಮ್ ವಾಯು ನೆಲೆಯನ್ನು ಅಮೆರಿಕ ವಶಕ್ಕೆ ಮತ್ತೆ ಒಪ್ಪಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಆಗ್ರಹಿಸುತ್ತಿದ್ದು, ತಾಲಿಬಾನ್ ಅದನ್ನು ತಿರಸ್ಕರಿಸಿದೆ. ವಾಯುನೆಲೆಯನ್ನು ಅಮೆರಿಕಕ್ಕೆ ಒಪ್ಪಿಸುವುದು ಇರಲಿ, ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಅಲ್ಲಿನ ತಾಲಿಬಾನ್ ಸರ್ಕಾರ ಸ್ಪಷ್ಟಪಡಿಸಿದೆ.
ಪಾಕ್ ವಾಯುಪಡೆ ದಾಳಿಗೆ 30 ಪಾಕಿಸ್ತಾನಿ ಪ್ರಜೆಗಳು ಬಲಿ
ಪಾಕಿಸ್ತಾನ ವಾಯುಪಡೆಯು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನದ ಜೆ-17 ಯುದ್ಧ ವಿಮಾನಗಳು ಎಂಟು
ಗೋಧ್ರಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ: 25 ಮಂದಿಯ ಬಂಧನ
ಗುಜರಾತ್‌ನ ಗೋಧ್ರಾದಲ್ಲಿ ಮೂರು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 25 ಮಂದಿಯನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕದಂತೆ ಎಚ್ಚರಿಸಿದ್ದಕ್ಕೆ ಗುಂಪೊಂದು ಈ ಪ್ರತಿಭಟನೆ ನಡೆಸಿದೆ ಎಂದು ಹೇಳಲಾಗಿದೆ. ಬಳಿಕ
ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಮನೆಯಲ್ಲಿದ್ದ ಒಂದೂವರೆ ಕೋಟಿ ನಗದು, 50 ಗ್ರಾಂ ಚಿನ್ನ ದರೋಡೆ
ಬೆಂಗಳೂರಿನ ಯಲಹಂಕದ ಮನೆಯೊಂದಕ್ಕೆ ಸರ್ಕಾರಿ ಅಧಿಕಾರಿಗಳೆಂದು ಹೇಳಿಕೊಂಡು ಬಂದ ವಂಚಕರು ಮನೆಯವರನ್ನು ನಂಬಿಸಿ ಮನೆಯಲ್ಲಿದ್ದ ಒಂದೂವರೆ ಕೋಟಿ ರೂ. ಹಾಗೂ 50 ಗ್ರಾಂನ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಯಲಹಂಕ ನಿವಾಸಿ ಗಿರಿರಾಜು ಎಂಬವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ನಕಲಿ ನಂಬರ್
ನನ್ನ ಬದುಕಿನ ದರ್ಶನ ಎಂದಿಗೂ ಜೀವಪರ, ಪ್ರಜಾಪ್ರಭುತ್ವ ಕೇವಲ ವ್ಯವಸ್ಥೆಯಲ್ಲ, ಅದು ಮೌಲ್ಯ: ಬಾನು ಮುಷ್ತಾಕ್
ಮೈಸೂರು ದಸರಾ ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ ಎಂದು 2025ರ ಬುಕರ್ ವಿಜೇತ ಸಾಹಿತಿ ಬಾನು ಮುಷ್ತಾಕ್ ಹೇಳಿದರು. ನನ್ನ ಬದುಕು ಕಲಿಸಿದ ಮುಖ್ಯ ಪಾಠವೆಂದರೆ ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವ ದಾರಿ ಮಾತ್ರ ನಿಜವಾದ ದಾರಿ.
ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ: ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ: ಸಿಎಂ ಸಿದ್ದರಾಮಯ್ಯ
ಗೋಡಾ ಹೈ-ಮೈದಾನ್ ಹೈ: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಎಸೆದರು. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ನಾಡಹಬ್ಬ ಐತಿಹಾಸಿಕ ದಸರಾ ಉದ್ಘಾಟನೆ ಬಳಿಕ
ತಿರುಪತಿ ಹುಂಡಿಯಿಂದ ಜಗನ್ ಮೋಹನ್ ರೆಡ್ಡಿ ಮನೆಗೆ ಹೋಗಿತ್ತಾ 100 ಕೋಟಿ ರೂ.?
ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಹುಂಡಿಯಲ್ಲಿ ಭಕ್ತರು ಹಾಕಿದ್ದ ಹಣದಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಹಣ ಅಕ್ರಮವಾಗಿ ಜಗನ್‌ಮೋಹನ್ ನಿವಾಸಕ್ಕೆ ಕದ್ದೊಯ್ಯಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ. ತಿರುಮಲ ತಿರುಪತಿ




