Menu

ಹಣ ನೀಡಿಲ್ಲವೆಂದು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ಇಲ್ಲ

ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಆರು ದಿನದಿಂದ  ಣ ನೀಡಿಲ್ಲ ಎಂಬ ಕಾರಣಕ್ಕೆ ರೋಗಿಗೆ ಶತ್ರ ಚಿಕಿತ್ಸೆ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮೂಳೆ ಮುರಿತದಿಂದ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಚಿಕ್ಕ ಮುನಿಯಪ್ಪ ಹಣ ನೀಡಿಲ್ಲ ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡದೆ ರೋಗಿಯನ್ನು ಆಸ್ಪತ್ರೆಯಲ್ಲಿ ಉಳಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ಚಿಕ್ಕ ಮುನಿಯಪ್ಪ ಅವರ ಎಡಗೈ ಮೂಳೆ ಮುರಿತವಾಗಿದೆ. ಸೆಪ್ಟೆಂಬರ್ 17 ರಂದು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಹಾಸನದಲ್ಲಿ ಚಿನ್ನದ ಸರಕ್ಕಾಗಿ ಮಾವನ ಮಗಳ ಕೊಲೆ: ಕೊಲೆಗಾರ ಆತ್ಮಹತ್ಯೆ

ಹಾಸನದ ಅರಸೀಕೆರೆ ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ಚಿನ್ನದ ಮಾಂಗಲ್ಯ ಸರಕ್ಕಾಗಿ ಮಾವನ ಮಗಳನ್ನು ಕೊಂದು ಹೃದಯಾಘಾತ ಎಂದಬು ಬಿಂಬಿಸಿದ್ದ ಆರೋಪಿಯು ಸತ್ಯ ಬಯಲಾಗುತ್ತಿದ್ದಂತೆಯೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಕುಂತಲಾ (48) ಕೊಲೆಯಾದ ಮಹಿಳೆ. ಶಿವಮೂರ್ತಿ (55) ಕೊಲೆ ಆರೋಪಿ. ಈ ಕೊಲೆ

ಆಫ್ಘನ್‌ನಿಂದ ವಿಮಾನದಲ್ಲಿ ಬಾಲಕ ದೆಹಲಿ ತಲುಪಿದ್ದು ಹೇಗೆ, ಬದುಕುಳಿದಿದ್ದೇ ಪವಾಡ

ಹದಿಮೂರು ವರ್ಷದ ಬಾಲಕನೊಬ್ಬ ಪವಾಡವೆಂಬಂತೆ ಆಫ್ಘನ್‌ನ ಕಾಬೂಲ್‌ನಿಂದ ವಿಮಾನದಲ್ಲಿ ದೆಹಲಿಗೆ ತಲುಪಿದ್ದಾನೆ. ಪವಾಡ ಏಕೆಂದರೆ ಈತ ವಿಮಾನದ ವಿಮಾನದ ಚಕ್ರ ಇರುವ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿ ಕುಳಿತುಕೊಂಡು ದೆಹಲಿ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾನೆ. ಭಾನುವಾರ ಕಾಬೂಲಿನಿಂದ ದೆಹಲಿ ಇಂದಿರಾಗಾಂಧಿ

ಪ್ರಧಾನಿ ನಿವಾಸದ ರಸ್ತೆಯಲ್ಲಿರುವ ಗುಂಡಿಗಳನ್ನು ಕೂಡ ಮಾಧ್ಯಮದವರು ನೋಡಿ: ಡಿಕೆ ಶಿವಕುಮಾರ್‌

ನಾನು ದೆಹಲಿ ಒಂದು ಸುತ್ತು ಬಂದೆ. ಅಲ್ಲಿ ಎಷ್ಟು ರಸ್ತೆಗುಂಡಿಗಳಿವೆ ಹಾಗೂ ಪ್ರಧಾನಮಂತ್ರಿಗಳ ನಿವಾಸದ ರಸ್ತೆಯಲ್ಲಿಯೇ ಎಷ್ಟು ರಸ್ತೆಗುಂಡಿಗಳಿವೆ ಎಂಬುದನ್ನು ಮಾಧ್ಯಮದವರು ಪರಿಶೀಲಿಸಬೇಕು. ಕರ್ನಾಟಕದ ಬಗ್ಗೆ ಮಾತ್ರ ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ

ಸಿಎಂ ಸಿದ್ದರಾಮಯ್ಯ ಡಿಕ್ಟೇಟ್ ಮಾಡಿ ಬರೆಸುವ ಜಾತಿ ಸಮೀಕ್ಷೆ ಅಧಿಕೃತವಲ್ಲ: ಆರ್.ಅಶೋಕ

ಸಿಎಂ ಸಿದ್ದರಾಮಯ್ಯ ಡಿಕ್ಟೇಟ್ ಮಾಡಿ ಬರೆಸುವ ಜಾತಿ ಸಮೀಕ್ಷೆ ಅಧಿಕೃತವಲ್ಲ , ಇದು ಜಾತಿಗಳನ್ನು ಒಡೆಯುವ ಸಮೀಕ್ಷೆ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜಾತಿ ಸಮೀಕ್ಷೆಯಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡಲಾಗಿದೆ. ಮತಾಂತರ ಮಾಡಲು ಸಿಎಂ ಸಿದ್ದರಾಮಯ್ಯ

ಪ್ರಬಲ ಕೋಮುಗಳಿಗೆ ಕುತ್ತು ತರಲಿದೆಯಾ ಜಾತಿ ಸಮೀಕ್ಷೆ

ರಾಜ್ಯದಲ್ಲಿ ಜಾತಿ ಸಮೀಕ್ಷೆ ಆರಂಭಗೊಂಡಿದೆ. ಇದನ್ನು ಸಾಮಾಜಿಕ ಮತ್ತು ಶೈಕ್ಷಣಿಗೆ ಸಮೀಕ್ಷೆ ಎಂದು ಕರೆದಿದ್ದರೂ ಮೂಲತಃ ಇದು ಜಾತಿ ಸಮೀಕ್ಷೆ ಎಂಬುದರಲ್ಲಿ ಸಂದೇಹವಿಲ್ಲ. ಇದುವರೆಗೆ ಲಿಂಗಾಯತರು ಮತ್ತು ಒಕ್ಕಲಿಗರು ಅಧಿಕಾರದಲ್ಲಿ ಪ್ರಾಬಲ್ಯ ಸಾಧಿಸಿಕೊಂಡು ಬಂದಿರುವುದಂತೂ ನಿಜ. ೧೯೩೧ ರ ಗಣತಿಯಲ್ಲಿ ಈ

ಒಲಂಪಿಕ್ಸ್ ತರಬೇತಿಗೆ ತಲಾ ರೂ 10 ಲಕ್ಷ ಸಹಾಯಧನ: ಸಿಎಂ ಸಿದ್ದರಾಮಯ್ಯ

ಮುಂದಿನ ಒಲಂಪಿಕ್ಸ್ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ 10 ಲಕ್ಷ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು

ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಗೆ 11 ಬಾರಿ ಚಾಕು ಇರಿದು ಪ್ರಿಯಕರ ಪರಾರಿ!

ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹಾಡಹಗಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಸ್ ಸ್ಟಾಂಡ್ ಬಳಿ ನಡೆದಿದೆ. ಕೊಲೆಯಾದ ಯುವತಿಯನ್ನು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಮೂಲದ ರೇಖಾ ಎಂದು ಗುರುತಿಸಲಾಗಿದೆ. ಲೋಕೇಶ್ ಎಂಬ ಯುವಕ, ರೇಖಾಳನ್ನು

ನಾನು ಭಕ್ತರ ಹೃದಯದಲ್ಲಿ ಪೀಠ ಕಟ್ಟಿದ್ದೇನೆ, ಉಚ್ಚಾಟನೆ ಮಾಡುವ ಅಧಿಕಾರ ಯಾರಿಗೂ ಇಲ್ಲ: ಜಯಮೃತ್ಯುಂಜಯ ಸ್ವಾಮೀಜಿ

ಸೃಷ್ಟಿಕರ್ತ ಪರಮಾತ್ಮ, ಪರಮಾತ್ಮನ ಸ್ವರೂಪವಾದ ಭಕ್ತರನ್ನು ಬಿಟ್ಟು, ಯಾರಿಗೂ ನಮ್ಮನ್ನು ಉಚ್ಚಾಟನೆ ಮಾಡುವ ಅಧಿಕಾರ ಈ ಜಗತ್ತಿನಲ್ಲಿ ಇಲ್ಲ, ಎಂದು ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ನ

ಇನ್ಪೋಸಿಸ್‌ನ ಡಾ. ಸುಧಾಮೂರ್ತಿ ಅವರನ್ನು ವಂಚಿಸಲು ಸೈಬರ್ ವಂಚಕರ ವಿಫಲ ಯತ್ನ

ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರನ್ನು ವಂಚಿಸಲು ಖದೀಮರು ಯತ್ನಿಸಿ ವಿಫಲರಾಗಿದ್ದಾರೆ. ದೂರಸಂಪರ್ಕ ಸಚಿವಾಲಯದ ಉದ್ಯೋಗಿಯೆಂದು ಸುಳ್ಳು ಹೇಳಿ, “ನಿಮ್ಮ ನಂಬರ್ ಆಧಾರ್‌ಗೆ ಲಿಂಕ್ ಆಗಿಲ್ಲ” ಎಂದು