Featured
ಚುನಾವಣಾ ರಾಜಕೀಯಕ್ಕೆ ಗೀತಾ ಶಿವರಾಜ್ ಕುಮಾರ್ ನಿವೃತ್ತಿ ಘೋಷಣೆ
ಇನ್ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಟ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೂತನವಾಗಿ ಆಯ್ಕೆಯಾದ ಶ್ವೇತಾ ಬಂಡಿಯ ಹುದ್ದೆ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದರೂ ಪಕ್ಷದ ಸಂಘಟನೆಗಳಲ್ಲಿ ಜೊತೆಯಾಗಿ ಭಾಗವಹಿಸುತ್ತೇನೆ. ಪಕ್ಷ ಕರೆದರೆ ಯಾವಾಗಲೂ ಸಹಕರಿಸಲು ಸಿದ್ಧನಿದ್ದೇನೆ” ಎಂದು ತಿಳಿಸಿದರು. ಶ್ವೇತಾ ಬಂಡಿಯನ್ನು ಕಳೆದ
ಗುಡ್ ನ್ಯೂಸ್: ಅಕ್ಟೋಬರ್ ತಿಂಗಳಿಂದಲೇ ಹೊಸ ಬಿಪಿಎಲ್ ಗೆ ಅರ್ಜಿ ಸಲ್ಲಿಕೆ ಆರಂಭ
ಕರ್ನಾಟಕ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಅರ್ಜಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಅಕ್ಟೋಬರ್ ತಿಂಗಳಿಂದ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆಯಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಶುಕ್ರವಾರ ತಿಳಿಸಿದ್ದಾರೆ.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಸುತ್ತೇನೆ: ಎಂಬಿ ಪಾಟೀಲ್
ಗೊಂದಲ, ಗದ್ದಲ, ಸರ್ವರ್ ಸಮಸ್ಯೆಗಳು ಹಾಗೂ ವಿರೋಧದ ಮಧ್ಯೆ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದ ರಾಜಕೀಯ ಜಟಾಪಟಿ ತೀವ್ರವಾಗಿದೆ. ಈ ಹಿನ್ನಲೆಯಲ್ಲಿ ಸಚಿವ ಎಂ. ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನಾನು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ನಮೂದಿಸುತ್ತೇನೆ
ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್ ಫಾಸ್ಟ್ ರೈಲಿಗೆ ಸಮ್ಮತಿ
ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಸೇವೆಗೆ ಕೇಂದ್ರ ರೈಲ್ವೆ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. 30 ವರ್ಷಗಳ ಈ ಬೇಡಿಕೆ ಈಗ ನನಸಾಗಲಿದ್ದು, ಕರ್ನಾಟಕದ ಜನತೆಗೆ ಇದು ಸಂತಸದ ಸುದ್ದಿ
ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣ: ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಡಿ.ಕೆ. ಶಿವಕುಮಾರ್
ಧರ್ಮಸ್ಥಳ ಸರಣಿ ಹತ್ಯೆ ಪ್ರಕರಣದ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಜನರಿಗೆ ನಿಖರವಾದ ವಾಸ್ತವಾಂಶಗಳನ್ನು ತಿಳಿಸುವುದೇ ನಮ್ಮ ಸರ್ಕಾರದ ಏಕೈಕ ಉದ್ದೇಶ” ಎಂದು ಹೇಳಿದರು. ಶನಿವಾರ (ಸೆ. 27) ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ
ಬಾಗಲಕೋಟೆಯಲ್ಲಿ ಭಾರೀ ಮಳೆಗೆ ಗೋಡೆ ಕುಸಿದು ಬಾಲಕ ಸಾವು
ಸತತ ಮಳೆಯಿಂದಾಗಿ ಮನೆ ಗೋಡೆ ಕುಸಿದು ಓರ್ವ ಬಾಲಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ಅಂಬೇಡ್ಕರ್ ವೃತ್ತದ ಬಳಿಯ ಮನೆ ಗೋಡೆ ಕುಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ 11 ವರ್ಷದ
ಮದರಸಾದ ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡಿದ್ದ 40 ಬಾಲಕಿಯರು ಪತ್ತೆ!
14 ವರ್ಷದೊಳಗಿನ 40 ಬಾಲಕಿಯರನ್ನು ಉತ್ತರ ಪ್ರದೇಶದ ಅಕ್ರಮ ಮದರಾಸದ ಶೌಚಾಲಯದಲ್ಲಿ ಕೂಡಿಟ್ಟ ಆಘಾತಕಾರಿ ವಿಷಯ ಅಧಿಕಾರಿಗಳ ದಾಳಿಯ ವೇಳೆ ಬೆಳಕಿಗೆ ಬಂದಿದೆ. ಪಯಾಗ್ ಪುರದ ಸಬ್ ಡಿವಿಜನ್ ಮ್ಯಾಜಿಸ್ಟ್ರೇಟ್ ಅಶ್ವಿನಿ ಕುಮಾರ್ ಪಾಂಡೆ ನೇತೃತ್ವದಲ್ಲಿ ಪಹಲ್ವಾರಾ ಗ್ರಾಮದಲ್ಲಿರುವ ಮೂರಂತಸ್ತಿನ ಕಟ್ಟಡದಲ್ಲಿ
ತ್ರಿ ಈಡಿಯಟ್ಸ್ ಸ್ಫೂರ್ತಿ ಸೋನಮ್ ವಾಂಗ್ಚುಕ್ ಜೋಧಪುರಕ್ಕೆ ರವಾನೆ
ತ್ರಿ ಈಡಿಯಟ್ಸ್ ಚಿತ್ರದ ಸ್ಫೂರ್ತಿಯಾದ ಸೋನಮ್ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿ ಜೋಧಪುರಕ್ಕೆ ರವಾನಿಸಿದೆ. ಪ್ರಸ್ತುತ ಲಡಾಖ್ ನಲ್ಲಿ ನಡೆಯುತ್ತಿರುವ ಸಂಘರ್ಷ ಸೋನಮ್ ವಾಂಗ್ಚುಕ್ ಯುವಕರಿಗೆ ನೀಡಿದ ಪ್ರಚೋದನಕಾರಿಯೇ ಕಾರಣ ಎಂದು ಆರೋಪಿಸಲಾಗಿದೆ. ನನ್ನನ್ನು ಯಾವುದೇ ಸಮಯದಲ್ಲಿ ಬಂಧಿಸಬಹುದು.
34 ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ: ಸರ್ಕಾರದ ಅಧಿಕೃತ ಪಟ್ಟಿ ಬಿಡುಗಡೆ
ರಾಜ್ಯ ಸರ್ಕಾರವು 34 ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ. ನೂತನ ಅಧ್ಯಕ್ಷರ ಅವಧಿ ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳವರೆಗೆ ಇರಲಿದೆ. ಹೈಕಮಾಂಡ್ ನೀಡಿದ್ದ 39 ಹೆಸರಿನ ಪಟ್ಟಿಗೆ
ರಾಜ್ಯದಲ್ಲಿ ಭಾರೀ ಮಳೆ ಎಚ್ಚರಿಕೆ: ಯಾವೆಲ್ಲ ಜಿಲ್ಲೆಗಳಿಗೆ ಅಲರ್ಟ್?
ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮತ್ತೆ ಮಳೆ ಅಬ್ಬರಿಸಲು ಸಜ್ಜಾಗಿದೆ. ಹವಾಮಾನ ಇಲಾಖೆ ಶನಿವಾರದಿಂದ (ಸೆಪ್ಟೆಂಬರ್ 27) ಮುಂದಿನ ಮೂರು ದಿನಗಳಿಗೆ ವ್ಯಾಪಕ ಮಳೆಯ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಬಂಗಾಳ ಕೊಲ್ಲಿ ಹಾಗೂ ಒಡಿಶಾ ಕರಾವಳಿಯಲ್ಲಿ ವಾಯುಭಾರ ಕುಸಿತ




