Featured
ಜನಾಕ್ರೋಶ ಯಾತ್ರೆ ಪ್ರಹಸನ: ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ಕಪಾಳಮೋಕ್ಷ
ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸನವನ್ನು ಶುರುಮಾಡಿರುವ ರಾಜ್ಯದ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳು ವಂತೆ ಕಪಾಳಮೋಕ್ಷ ಮಾಡಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿರುವ ಸಿಎಂ, ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿರುವ ಸತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರೇ ದೇಶದ ಜನರ ಮುಂದೆ ಬಿಚ್ಚಿಟ್ಟು ಒಪ್ಪಿಕೊಂಡಿದ್ದಾರೆ
ಬೆಂಗಳೂರು ನಗರ ಜಿಲ್ಲೆಯ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ಡಿಸಿಎಂ ಸೂಚನೆ
ಬೆಂಗಳೂರು ನಗರ ಜಿಲ್ಲೆಯ ಕೆರೆಗಳಿಗೆ ಕಲುಷಿತ ನೀರು ಹರಿಯದಂತೆ ಕ್ರಮ ಕೈಗೊಳ್ಳಲು ಹಾಗೂ ಎಲ್ಲಾ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ
ಬೆಟ್ಟಿಂಗ್ ಆ್ಯಪ್ ಪ್ರಮೋಟ್ ಮಾಡಿದ ಕಿರುತೆರೆ, ರೀಲ್ಸ್ ಸ್ಟಾರ್‌ಗಳಿಗೆ ಸಂಕಷ್ಟ
ಅನುಮತಿ ಪಡೆಯದ ಬೆಟ್ಟಿಂಗ್ ಆ್ಯಪ್ ಬಗ್ಗೆ ಪ್ರಮೋಟ್ ಮಾಡಿದ ಕಿರುತರೆ ನಟಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾನ್ಯತೆ ಪಡೆಯದ ಬೆಟ್ಟಿಂಗ್ ಆ್ಯಪ್ ಗಳ ಪ್ರಮೋಟ್ ಮಾಡಿ ಕಿರುತರೆ ನಟಿಯರು ಹಾಗೂ ಸೋನು ಶ್ರೀನಿವಾಸ್ ಗೌಡ, ದೀಪಕ್ ಗೌಡ, ವರುಣ್ ಅರಾದ್ಯ, ದಚ್ಚು ಸೇರಿದಂತೆ
ಮುಡಾ ಹಗರಣದ ಲೋಕಾಯುಕ್ತ ಬಿ ರಿಪೋರ್ಟ್ ಸಂಬಂಧ ಇಂದು ಕೋರ್ಟ್ ಆದೇಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧದ ಆರೋಪವಾಗಿ ತೀವ್ರ ವಿವಾದಕ್ಕೆ ಗ್ರಾಸವಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ್‌ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಂಗಳವಾರ (ಇಂದು) ಆದೇಶ ನೀಡಲಿದೆ. ನಾಲ್ಕು ತಿಂಗಳು ತನಿಖೆ ನಡೆಸಿದ ಲೋಕಾಯುಕ್ತ ಸಿಎಂ
ಕೃಷ್ಣಾ -ಕಾವೇರಿ ಜಲಹಂಚಿಕೆಯಲ್ಲಿ ರಾಜ್ಯವೆಂದೂ ನೀರುಗಂಟಿಯೇ…!
ಕರ್ನಾಟಕದ ಜನತೆಯ ಪಾಲಿಗೆ ಆಲಮಟ್ಟಿ, ತುಂಗಭದ್ರಾ, ಕೆಆರ್‌ಎಸ್ ಅಣೆಕಟ್ಟುಗಳು ಕಾಮಧೇನುವಲ್ಲ, ಕಲ್ಪ ವೃಕ್ಷವೂ ಆಗಿಲ್ಲ. ಏಕೆಂದರೆ ನದಿದಂಡೆ ಮೇಲಿನ ಭಾಗದಲ್ಲಿರುವ ರಾಜ್ಯಕ್ಕೆ ಇದುವರೆಗೆ ಸಿಕ್ಕಿದ್ದು ಬೊಗಸೆ ನೀರು. ಆದರೆ ಆಂಧ್ರ ಮತ್ತು ತಮಿಳುನಾಡಿಗೆ ದೊರೆತಿದ್ದು ಹಂಡೆಯಷ್ಟು.. ಕೃಷ್ಣಾ – ಕಾವೇರಿ ನದಿ
ಬೆಲೆ ಏರಿಸಿರುವ ಕೇಂದ್ರದ ವಿರುದ್ಧ ಬಿಜೆಪಿ ಜನಾಕ್ರೋಶ ಯಾತ್ರೆ ಮಾಡಲಿ: ಡಿ.ಕೆ. ಶಿವಕುಮಾರ್
ಬೆಂಗಳೂರು: “ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸ್ನೇಹಿತರು ಜನಾಕ್ರೋಶ ಯಾತ್ರೆ ಮಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಎಲ್ ಪಿಜಿ ಹಾಗೂ ಇಂಧನ
ಆರ್ ಸಿಬಿಗೆ 12 ರನ್ ರೋಚಕ ಜಯ, ಮುಂಬೈ ನೆಲದಲ್ಲಿ 10 ವರ್ಷ ನಂತರ ಗೆಲುವಿನ ದಾಖಲೆ!
ಮುಂಬೈ: ಜಿದ್ದಾಜಿದ್ದಿನ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್,ಶಿಸ್ತಿನ ದಾಳಿ ಹಾಗೂ ಚುರುಕಿನ ಕ್ಷೇತ್ರರಕ್ಷಣೆಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10 ರನ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಮೂರನೇ ಗೆಲುವು ದಾಖಲಿಸಿದೆ. ಇದೇ ವೇಳೆ ಮುಂಬೈನಲ್ಲಿ 10
ಟಿ-20ಯಲ್ಲಿ 13,000 ರನ್ ಪೂರೈಸಿದ ಮೊದಲ ಭಾರತೀಯ ಕೊಹ್ಲಿ!
ಮುಂಬೈ: ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ನಲ್ಲಿ 13,000 ರನ್ ಪೂರೈಸಿದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 18 ರನ್ ಗಳಿಸುತ್ತಿದ್ದಂತೆ
ಅಕ್ಕಿ ರಫ್ತು ಮೇಲೆ ಹೊಸ ಸುಂಕ ನಿಯಮ ಮೇ 1ರಿಂದ ಜಾರಿಗೆ ಕೇಂದ್ರದ ಆದೇಶ
ಚಂಡೀಗಢ: ಕೇಂದ್ರ ಸರ್ಕಾರ ಮೇ 1ರಿಂದ ಅಕ್ಕಿ ರಫ್ತಿನ ಮೇಲೆ ಹೊಸ ಸುಂಕ ನಿಯಮವನ್ನು ಜಾರಿಗೆ ತರಲಿದೆ. ಸಂಸ್ಕರಣಾ ವಿಧಾನ, ವೈವಿಧ್ಯತೆ ಮತ್ತು ಜಿಐ ಟ್ಯಾಗಿಂಗ್ ಆಧಾರದ ಮೇಲೆ ಅಕ್ಕಿಯನ್ನು ವರ್ಗೀಕರಿಸಲು ಈ ಆಡಳಿತವು ಪ್ರಯತ್ನಿಸುತ್ತದೆ. ಇದು ಭಾರತೀಯ ಅಕ್ಕಿಯ ಜಾಗತಿಕ
ಬಿಸಿಗಾಳಿಗೆ ಉತ್ತರ ತತ್ತರ: 21 ನಗರಗಳಲ್ಲಿ ಸರಾಸರಿಗಿಂತ ಅಧಿಕ ಉಷ್ಣಾಂಶ
ನವದೆಹಲಿ: ಮುಂದಿನ ಮೂರು ದಿನಗಳ ಕಾಲ ಉತ್ತರ ಭಾರತದ ರಾಜ್ಯಗಳು ತತ್ತರಿಸಲಿದ್ದು, 21 ನಗರಗಳಲ್ಲಿ ಸರಾಸರಿಗಿಂತ ಕನಿಷ್ಟ 3 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ ಮೊದಲ ವಾರವಾದ ಭಾನುವಾರ 5 ರಾಜ್ಯಗಳ




