Menu

ದಾಂಡೇಲಿಯಲ್ಲಿ 14 ಕೋಟಿ ರೂ. ಮೌಲ್ಯದ ನಕಲಿ ನೋಟುಗಳ ಬಂಡಲ್‌ ಪತ್ತೆ

ದಾಂಡೇಲಿಯ ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ 500ರೂ. ಮುಖಬೆಲೆ ತೋರುವ ನೋಟುಗಳ ಕಂತೆ ಪತ್ತೆಯಾಗಿದೆ. 500 ಮುಖಬೆಲೆಯ 50 ನೋಟುಗಳ ಬಂಡಲ್‌ನಂತೆ ಅಂದಾಜು ₹14 ಕೋಟಿ ಮೌಲ್ಯವೆಂದು ಲೆಕ್ಕಕ್ಕೆ ತೆಗೆದುಕೊಳ್ಳಬಹುದಾದ ನಕಲಿ ನೋಟುಗಳು ಸಿಕ್ಕಿವೆ. ಖಚಿತ ಮಾಹಿತಿ ಹಿನ್ನೆಲೆ ಯಲ್ಲಿ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಈ ನೋಟುಗಳು ಹಾಗೂ ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಗಾಂಧಿನಗರದಲ್ಲಿರುವ ನೂರ್‌ಜಾನ್‌ ಝುಂಜವಾಡಕರ ಎಂಬವರ ಮನೆಯನ್ನು ಗೋವಾ ಮೂಲದ ಅರ್ಷದ್‌ ಖಾನ್‌ ಎಂಬಾತ

ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊಸ ರೈಲು: ಸಚಿವ ಸೋಮಣ್ಣ

ಬೆಂಗಳೂರಿನಿಂದ  ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ 12ರಿಂದ ಹೊಸ ರೈಲು ಸಂಚರಿಸಲಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ರೈಲ್ವೆ ಗೇಟ್ ಮೇಲ್ಸತುವೆಗೆ ಗುದ್ದಲಿ ಪೂಜೆ ನಡೆಸಿದ ಬಳಿಕ ಮಾತನಾಡಿ, ಏಪ್ರಿಲ್‌ 12 ರಂದು ಬೆಂಗಳೂರಿನಿಂದ

ಮುಳಗುಂದದಲ್ಲಿ ತಂದೆಯಿಂದ ಅತ್ಯಾಚಾರ, ಬಾಲಕಿ ಗರ್ಭಿಣಿ: ಆರೋಪ

ಗದಗ ಜಿಲ್ಲೆಯ ಮುಳಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನಾರು ವರ್ಷದ ಬಾಲಕಿ ಮೇಲೆ 55 ವರ್ಷದ ತಂದೆ ಕಳೆದ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದ್ದು, ಆರೋಪಿ ರಮೇಶ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತ

ಬಳ್ಳಾರಿಯಲ್ಲಿ ಮನಿ ಡಬ್ಲಿಂಗ್‌ ಹೆಸರಿನಲ್ಲಿ ವಂಚನೆ: ಪೊಲೀಸ್‌ ಠಾಣೆ ಮೊರೆ ಹೋದ ಸಂತ್ರಸ್ತರು

ವಾಸವಿ ಸ್ವಗೃಹ ಹೋಮ್ ನೀಡ್ಸ್ ಆ್ಯಂಡ್​ ಕನ್ಸಲ್ಟನ್ಸ್​ ಹೆಸರಲ್ಲಿ ವಿಶ್ವನಾಥ್​ ಎಂಬಾತ ಜನರಿಗೆ ಆಮಿಷವೊಡ್ಡಿ ಹಣ ಪಡೆದು ವಂಚನೆ ಮಾಡಿರುವುದಾಗಿ ಬಳ್ಳಾರಿಯ  ಬ್ರೂಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ವರ್ಷದ ಹಿಂದೆ ವಿಶ್ವನಾಥ ಕಿರಾಣಿ ಅಂಗಡಿ ಆರಂಭಿಸಿ, ಐದು

ರಿಪೋ ದರ ಕಡಿತಗೊಳಿಸಿದ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ ರಿಪೋ ದರಗಳನ್ನು 25 ಮೂಲಾಂಕಗಳಷ್ಟು ಕಡಿತಗೊಳಿಸಿದೆ. ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ರಿಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದಾಗಿ ಮಾಹಿತಿ

ಭಾರತಕ್ಕೆ ಇನ್ನಷ್ಟು ಗೋಡೆಗಳು, ದ್ವೇಷ ಬೇಕಿಲ್ಲ, ಸೇತುವೆಗಳು, ಆಶಾವಾದ ಬೇಕು: ಸಿಎಂ ಸಿದ್ದರಾಮಯ್ಯ

ಭಾರತಕ್ಕೆ ಇನ್ನಷ್ಟು ಗೋಡೆಗಳ ಅವಶ್ಯಕತೆಯಿಲ್ಲ. ಅದಕ್ಕೆ ಬೇಕಿರುವುದು ಸೇತುವೆಗಳು. ಭಾರತಕ್ಕೆ ಇನ್ನಷ್ಟು ದ್ವೇಷವಲ್ಲ,  ಇನ್ನಷ್ಟು ಆಶಾವಾದದ ಅಗತ್ಯವಿದೆ. ವ್ಯಕ್ತಿತ್ವವನ್ನು ದ್ವೇಷದ ಮೇಲೆ ಕಟ್ಟಲಾಗುವುದಿಲ್ಲ, ಈ ದೇಶವನ್ನು ಒಗ್ಗಟ್ಟು, ಪ್ರೀತಿ ಮತ್ತು ಸತ್ಯದ ಆಧಾರದ ಮೇಲೆ ಕಟ್ಟಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು

ಪ್ರಿಯಾಂಕ್ ಸಿಡಿಲ ಶತಕ; ಚೆನ್ನೈ ಸೂಪರ್ ಕಿಂಗ್ಸ್ ಗೆ ಆಘಾತ

ಮೊಹಾಲಿ: ಪ್ರಿಯಾಂಕ್ ಆರ್ಯಾ ಚೊಚ್ಚಲ ಶತಕದ ಸಹಾಯದಿಂದ ಪಂಜಾಬ್ ಕಿಂಗ್ಸ್ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ರನ್ ಗಳ ರೋಚಕ ಜಯ ಸಾಧಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20

ಲಾರಿ ಚಾಲಕನ ಪುತ್ರಿ ಕಲಾ ವಿಭಾಗದಲ್ಲಿ ಪ್ರಥಮ

ಬೆಂಗಳೂರು: ದ್ವಿತೀಯ ಪಿಯುಸಿಯ ಈ ಬಾರಿಯ ಫಲಿತಾಂಶದಲ್ಲಿ ಲಾರಿ ಚಾಲಕನ ಪುತ್ರಿಯೊಬ್ಬಳು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿರುವುದು ವಿಶೇಷ. ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾಬಾಯಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 600ಕ್ಕೆ 597

39 ಎಸೆತಗಳಲ್ಲಿ ಶತಕ ಸಿಡಿಸಿ ಹಲವು ದಾಖಲೆ ಬರೆದ ಪ್ರಿಯಾಂಶ್

ಮೊಹಾಲಿ: ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಪ್ರಿಯಾಂಶ್ ಆರ್ಯ ಶತಕ ಸಿಡಿಸಿ ಐಪಿಎಲ್ ಟಿ-20ಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಮೊಹಾಲಿಯಲ್ಲಿ ಮಂಗಳವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಪ್ರಿಯಾಂಶ್ ಆರ್ಯಾ 18ನೇ ಆವೃತ್ತಿಯ ಐಪಿಎಲ್ ನಲ್ಲಿ

ದ್ವಿತೀಯ ಪಿಯು ಫಲಿತಾಂಶ: 123 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ

ಬೆಂಗಳೂರು: 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, 123 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ರಾಜ್ಯದ 123 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಪಡೆದಿವೆ ಎಂದರು. 134