Featured
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ನಿಲುವೇನಿಲ್ಲ: ಸಿಎಂ ಸ್ಪಷ್ಟನೆ
ಕೊಪ್ಪಳ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ನಿಲುವು ಏನೂ ಇಲ್ಲ. ಈ ವಿಚಾರದಲ್ಲಿ ಮುನ್ನೆಲೆಯೂ ಇಲ್ಲ, ಹಿನ್ನೆಲೆಯೂ ಇಲ್ಲ. ಕೆಲ ವಿರಕ್ತಮಠದ ಸ್ವಾಮೀಜಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಗಿಣಗೇರಾ ಏರ್‌ಸ್ಟ್ರಿಪ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ನವೆಂಬರ್‌ನಲ್ಲಿ ಕ್ರಾಂತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದ ಸಚಿವ ತಂಗಡಗಿ ಹೇಳಿಕೆಗೆ ತಲೆದೂಗಿದರು. ಕೆಮ್ಮಿನ ಔಷಧಿ
ಬಿಹಾರದಲ್ಲಿ ನವೆಂಬರ್ 6, 11 ಮತದಾನ; 14ರಂದು ಫಲಿತಾಂಶ
ಬಹು ನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರ ಚುನಾವಣಾ ಆಯೋಗ ಸೋಮವಾರ ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿದ್ದು, ಚುನಾವಣಾ ನೀತಿ ಸಂಹಿತೆ
ತುಂಡುಡುಗೆಯಲ್ಲಿ ದೇಗುಲ ಪ್ರವೇಶ ನಿರಾಕರಣೆ: ಅರ್ಚಕರು-ಪೊಲೀಸರೊಂದಿಗೆ ಯುವತಿ ಜಗಳ
ಹರಿದ್ವಾರದ ದಕ್ಷಿಣ ಕಾಳಿ ದೇಗುಲಕ್ಕೆ ಅರೆಬರೆ ಬಟ್ಟೆ ಧರಿಸಿ ಬಂದಿದ್ದ ಯುವತಿ ಪ್ರವೇಶ ನಿರಾಕರಿಸಿದ್ದಕ್ಕೆ ಸಿಟ್ಟಾಗಿ ಅರ್ಚಕರು ಮತ್ತು ಪೊಲೀಸರೊಂದಿಗೆ ಗಲಾಟೆ ಮಾಡಿರುವ ವೀಡಿಯೊ ವೈರಲ್ ಆಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಯುವತಿ ಮೊಣಕಾಲಿಗಿಂತ ಮೇಲೆ ನಿಲ್ಲುವ ಶಾರ್ಟ್ಸ್ ಮತ್ತು ಟೀ
ಸುಪ್ರೀಂ ಸಿಜೆಐ ಮೇಲೆ ಷೂ ಎಸೆದ ವಕೀಲನ ಬಂಧನ
ಸುಪ್ರೀಂಕೋರ್ಟ್‌ನಲ್ಲಿ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಮೇಲೆ ಶೂ ಎಸೆದಿದ್ದು, ಆರೋಪಿಯನ್ನು ರಾಕೇಶ್ ಕಿಶೋರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ತಕ್ಷಣವೇ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸುವ ಕುರಿತಾದ ವಿಚಾರಣೆಯ ಸಂದರ್ಭದಲ್ಲಿ
ಮ್ಯಾಟ್ರಿಮೊನಿಯಲ್ಲಿ ಸಿಕ್ಕ ಯುವ ಪ್ರಿಯಕರ: ನಿವೃತ್ತ ಶಾಲಾ ಶಿಕ್ಷಕಿಗೆ 2.3 ಕೋಟಿ ರೂ. ವಂಚನೆ
ಬೆಂಗಳೂರಿನ ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ ಸ್ನೇಹಿತನಾದ ಯುವಕನ ಮಾತು ನಂಬಿ 2.3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. 4 ವರ್ಷಗಳಲ್ಲಿ ಈ ಪ್ರಮಾಣದ ಹಣ ಕಳೆದುಕೊಂಡಿರುವ ಶಿಕ್ಷಕಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರು ಮೂಲದ 59 ವರ್ಷದ ಮಹಿಳೆ ಹಲವು
ಕಾಮಾಕ್ಷಿಪಾಳ್ಯದಲ್ಲಿ ರಿವರ್ಸ್ ತೆಗೆಯುತ್ತಿದ್ದ ಕಾರಿಗೆ ಮಗು ಬಲಿ
ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿವರ್ಸ್ ತೆಗೆಯುತ್ತಿದ್ದ ಕಾರು ಹರಿದು ಹನ್ನೊಂದು ತಿಂಗಳ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ಮಗುವನ್ನು ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಕಾಮಾಕ್ಷಿಪಾಳ್ಯದಲ್ಲಿ ವಾಸಿಸುತ್ತಿರುವ ಸ್ವಾಮಿ ಎಂಬವರ ಮನೆಯಲ್ಲಿ ಕುಣಿಗಲ್‌ನಿಂದ ಬಂದಿದ್ದ
ಯಾವ ಜಾತಿಯನ್ನೂ ತುಳಿಯುವ ಪ್ರಶ್ನೆಯಿಲ್ಲ, ಸಮಸಮಾಜ ಬಯಸದವರಿಂದ ಸಮೀಕ್ಷೆಗೆ ವಿರೋಧ: ಸಿಎಂ
ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವ ಜಾತಿಯವರನ್ನು ತುಳಿಯುವ ಪ್ರಶ್ನೆಯಿಲ್ಲ. ಸಮಸಮಾಜವನ್ನು ಬಯಸದವರು ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮೇಲ್ಜಾತಿಗಳನ್ನು ತುಳಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂಬ ಕೇಂದ್ರ ಸಚಿವ ಸೋಮಣ್ಣ ಆರೋಪಿಸಿರುವ
ಪತಿ, ಮಕ್ಕಳಿದ್ದರೂ ಅಕ್ರಮ ಸಂಬಂಧ: ಪ್ರಿಯಕರನ ಜೊತೆ ತನ್ನ ಸ್ನೇಹಿತೆಯ ನೋಡಿ ಬಸವೇಶ್ವರ ನಗರದಲ್ಲಿ ಮಹಿಳೆ ಆತ್ಮಹತ್ಯೆ
ತನ್ನ ಆಪ್ತ ಸ್ನೇಹಿತೆಯೇ ತನ್ನ ಪ್ರಿಯಕರನ ಜೊತೆ ಸಂಬಂಧದಲ್ಲಿ ಇರುವುದನ್ನು ಕಂಡ ವಿವಾಹಿತ ಮಹಿಳೆಯೊಬ್ಬರು ಬೆಂಗಳೂರಿನ ಬಸವೇಶ್ವರ ನಗರದ ಕೆ ಹೆಚ್ ಬಿ ಕಾಲೊನಿಯಲ್ಲಿರುವ ಓಯೋ ಚಾಂಪಿನಿಯನ್ ಕಂಫರ್ಟ್ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿರುವ ಯಶೋಧಾ (38)
ಜೈಪುರ ಆಸ್ಪತ್ರೆಯಲ್ಲಿ ಬೆಂಕಿ: ಎಂಟು ರೋಗಿಗಳು ಸಜೀವ ದಹನ
ಜೈಪುರದ ಸವಾಯಿ ಮಾನ್ ಸಿಂಗ್ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಬೆಂಕಿ ಹೊತ್ತಿಕೊಂಡು ಎಂಟು ರೋಗಿಗಳು ಸಜೀವ ದಹನವಾಗಿ ಹೋಗಿರುವ ದಾರುಣ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಐವರ ಸ್ಥಿತಿ ಗಂಭೀರವಾಗಿದ್ದು ಗಾಯಾಳುಗಳನ್ನು ಸ್ಥಳೀಯ
ಮತ್ತೆ ಪತಿಯೊಂದಿಗೆ ಜೀವಿಸಬೇಕೆಂದು ವಿಚ್ಛೇದಿತೆ ಮನವಿ: ನಿರಾಕರಿಸಿದ ಹೈಕೋರ್ಟ್
ಮದುವೆಯಾದ ಮಹಿಳೆ ಪತಿಯೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪದೆ ಆತನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿ ಮತ್ತೆ ಆತನೊಂದಿಗೆ ಜೀವನ ನಡೆಸಲು ಬಯಸಿದ್ದು, ಆತ ಒಪ್ಪದಿದ್ದಾಗ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಆದರೆ ಕೋರ್ಟ್ ಆಕೆಯ ಮನವಿಯನ್ನು ನಿರಾಕರಿಸಿದೆ. ಇದು ಪತಿಗೆ ಪತ್ನಿಯಿಂದ




