Menu

ವಿದ್ಯುತ್ ಪ್ರವಹಿಸಿ ಗರ್ಭಿಣಿ ಸೇರಿ ಒಂದೇ ಕುಟುಂಬದ ಮೂವರ ದುರ್ಮರಣ

ವಿರುಧನಗರ: ದೇವಾಲಯ ಉತ್ಸವದ ವೇಳೆ ವಿದ್ಯುತ್ ಪ್ರವಹಿಸಿ ಗರ್ಭಿಣಿ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ಸಂಭವಿಸಿದೆ. ಕರಿಸೇರಿ ಗ್ರಾಮದಲ್ಲಿ ಸೋಮವಾರ ಈ ದುರ್ಘಟನೆ ಸಂಭವಿಸಿದ್ದು, ದೇವಸ್ಥಾನದ ಉತ್ಸವದ ವೇಳೆ ಧ್ವನಿವರ್ಧಕ ಅಳವಡಿಸುತ್ತಿದ್ದಾಗ ತಿರುಪ್ಪತ್ತಿ ಎಂಬವರಿಗೆ ಕರೆಂಟ್ ಹೊಡೆದಿದೆ. ಇದನ್ನು ಗಮನಿಸಿದ 7 ತಿಂಗಳ ಗರ್ಭಿಣಿ ಪತ್ನಿ ಹಾಗೂ ಅಜ್ಜಿ ರಕ್ಷಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಇನ್ನೂ ಇಬ್ಬರು ಗಾಯಗೊಂಡಿದ್ದು,

ಹಿರಿಯ ಪತ್ರಕರ್ತ ಶ್ಯಾಮ್ ಸುಂದರ್ ಇನ್ನಿಲ್ಲ

ಬೆಂಗಳೂರು: ಕನ್ನಡ ಮಾಧ್ಯಮದ ಡಿಜಿಟಲ್ ಮಾಧ್ಯಮದ ಹಿರಿಯ ಪತ್ರಕರ್ತ ಎಸ್‌.ಕೆ. ಶ್ಯಾಮ್‌ಸುಂದರ್‌ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ಯಾಮ್‌ಸುಂದರ್‌ ಅವರನ್ನು ವಿದ್ಯಾಪೀಠ ಸರ್ಕಲ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸುವರ್ಣ ನ್ಯೂಸ್,

ಸಿಎಸ್ ಕೆ ಗೆಲುವಿನಲ್ಲಿ ಮಿಂಚಿದ ಧೋನಿ: ಎಲ್ ಎಸ್ ಜಿಗೆ ತವರಿನಲ್ಲೇ ಮುಖಭಂಗ

ಲಕ್ನೊ: ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತವರಿನಲ್ಲಿ 5 ವಿಕೆಟ್ ಗಳಿಂದ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಧೋನಿ ನಾಯಕನಾಗಿ ಮರಳಿದ ಬೆನ್ನಲ್ಲೇ ಐಪಿಎಲ್ ನಲ್ಲಿ ಗೆಲುವಿನ ಹಾದಿ ಕಂಡುಕೊಂಡಿದೆ. ಲಕ್ನೋದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ

ಮುಡಾ ಅಕ್ರಮ ಲೋಕಾ ಬಿ ವರದಿ: ವಿರುದ್ಧದ ಇಡಿ ತಕರಾರು ಅರ್ಜಿ ನಾಳೆ ತೀರ್ಪು

ಬೆಂಗಳೂರು:ಮೈಸೂರಿನ ಮುಡಾ ಅಕ್ರಮ ನಿವೇಶನ ಹಂಚಿಕೆಯಲ್ಲಿ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲವೆಂದು ಲೋಕಾಯುಕ್ತ ಬಿ.ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ(ಇಡಿ) ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಮಂಗಳವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಲಿದೆ. ವಿಶೇಷ ಜನಪ್ರತಿನಿಧಿ ನ್ಯಾಯಾಲಯದ

2026 ಜೂನ್ ವೇಳೆಗೆ ನೀಲಿ ಮಾರ್ಗದ ಮೆಟ್ರೋ ಪೂರ್ಣ

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿದೆ. ಉಳಿದ ಇನ್ನರ್ಧ ಕಾಮಗಾರಿಯೂ ನಿಗದಿತ ವೇಳೆ ಮುಗಿದರೆ 2026 ಅಂತ್ಯಕ್ಕೆ ಈ ಯೋಜನೆಯು ಪೂರ್ಣವಾಗಲಿದ್ದು,ಬರುವ. 2026 ಜೂನ್ ವೇಳೆಗೆ

ಬೆಂಗಳೂರಿನಲ್ಲಿ 5ನೇ ಮಹಡಿಯಿಂದ ಹಾರಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: 21 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಪರೀಕ್ಷಾ ಭಯದಿಂದ ಅಪಾರ್ಟ್‌ಮೆಂಟ್​​ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಆಂಧ್ರಪ್ರದೇಶ ಮೂಲದ ಯಶವಂತಪುರ ಖಾಸಗಿ ಕಾಲೇಜಿನ 2ನೇ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಾತಿಗಣತಿ ಜನತೆಗೆ ಖುಷಿಯಾದರೆ ಬಿಜೆಪಿಗೆ ಸಹಿಸಿಕೊಳ್ಳಕ್ಕೆ ಆಗುತ್ತಿಲ್ಲ: ಸಚಿವ ಬೈರತಿ ಸುರೇಶ್

ಕೋಲಾರ: ಜಾತಿಗಣತಿ ವರದಿ ಜಾರಿಗೆ ತಂದಿರುವುದು ರಾಜ್ಯದ ಜನತೆಗೆ ಖುಷಿ ಉಂಟು ಮಾಡಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗರಿಗೆ ಮಾನ ಮರ್ಯಾದೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ

ಹುಬ್ಬಳ್ಳಿ ಎನ್‌ಕೌಂಟರ್ ತನಿಖೆಗೆ ಸಚಿವ ಡಾ.ಜಿ ಪರಮೇಶ್ವರ್ ಸೂಚನೆ

ಬೆಂಗಳೂರು:ಬಾಲಕಿಯ ಮೇಲೆ ಅತ್ಯಾಚಾರ ಕೊಲೆ ಪ್ರಕರಣದ ಸಂಬಂಧ ಹುಬ್ಬಳ್ಳಿಯಲ್ಲಿ ರಿತೇಶ್ ಕುಮಾರ್ ಎನ್‌ಕೌಂಟರ್ ಸಂದರ್ಭದಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡಿಕ್ಕಿದ್ದಾರೆ ಆದರೆ ಅದು ಬೆನ್ನಿಗೆ ಬಿದ್ದಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಎನ್ ಕೌಂಟರ್ ಘಟನೆ ಸಂಬಂಧಿಸಿದಂತೆ ತಕ್ಷಣಯ

ಗುಜರಾತ್ ಕರಾವಳಿಯಲ್ಲಿ 1800 ಕೋಟಿ ಮೌಲ್ಯದ ಡ್ರಗ್ಸ್ ವಶ!

ಅಹಮದಾಬಾದ್: ಗುಜರಾತ್ ಕರಾವಳಿಯ ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆಯ ಬಳಿ 1,800 ಕೋಟಿ ರೂ. ಮೌಲ್ಯದ 300 ಕೆಜಿ ಮೆಥಾಂಫೆಟಮೈನ್ ಡ್ರಗ್ಸ್‌ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಭಾರತೀಯ ಕೋಸ್ಟ್ ಗಾರ್ಡ್ (ICG) ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.

ಬೆಲ್ಜಿಯಂನಲ್ಲಿ ಮೆಹುಲ್ ಚೊಕ್ಸಿ ಅರೆಸ್ಟ್: ಭಾರತದಿಂದ ಗಡಿಪಾರಿಗೆ ಯತ್ನ

ನವದೆಹಲಿ: ಭಾರತದ ಬ್ಯಾಂಕ್ ಗಳಿಗೆ 12,636 ಕೋಟಿ ರೂ. ವಂಚಿಸಿ ದೇಶ ತೊರೆದಿರುವ ವಜ್ರದ ವ್ಯಾಪಾರಿ ಮೆಹುಲ್ ಚೊಕ್ಸಿ ಸ್ವಿರ್ಜರ್ಲೆಂಡ್ ಗೆ ಪರಾರಿಯಾಗುವ ಮುನ್ನ ಬೆಲ್ಜಿಯಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಭಾರತ ತೊರೆದು ವಿದೇಶಗಳಲ್ಲಿ ತಲೆಮರೆಸಿಕೊಂಡಿದ್ದ ಮೆಹುಲ್ ಚೊಕ್ಸಿ ಭಾರತಕ್ಕೆ ವಾಪಸ್