Menu

ಜೆಇಇ ಮೈನ್‌ ಎಕ್ಸಾಂ ಫಲಿತಾಂಶ ಪ್ರಕಟ: ಕರ್ನಾಟಕದಿಂದ ಕುಶಾಗ್ರ ಗುಪ್ತ ಟಾಪರ್‌

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೆಇಇ ಮುಖ್ಯ ಸೆಷನ್ 2 ಪರೀಕ್ಷೆಯ ಫಲಿತಾಂಶ ಪ್ರಕಟಿಸಿ, ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 24 ಅಭ್ಯರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ. ಕರ್ನಾಟಕದಿಂದ ಕುಶಾಗ್ರ ಗುಪ್ತ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ರಾಜಸ್ತಾನದ ೭ ಮಂದಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಮಹಾರಾಷ್ಟ್ರ ನಂತರದ ಸ್ಥಾನದಲ್ಲಿದೆ. ಅಭ್ಯರ್ಥಿಗಳು JEE ಮುಖ್ಯ ಅಧಿಕೃತ ವೆಬ್‌ಸೈಟ್ jeemain.nta.nic.in ಗೆ ಭೇಟಿ ನೀಡುವ ಮೂಲಕ ಫಲಿತಾಂಶ ಪರಿಶೀಲಿಸಬಹುದು.

ದಾಂಡೇಲಿಯಲ್ಲಿ ನಕಲಿ ನೋಟು: ಆರೋಪಿ ಲಕ್ನೋದಲ್ಲಿ ಸೆರೆ

ಕಾರವಾರದ ದಾಂಡೇಲಿಯ ಗಾಂಧಿನಗರ ಬಡಾವಣೆಯ ಮನೆಯೊಂದರಲ್ಲಿ ಕಂತೆ ಕಂತೆ ನಕಲಿ ಕರೆನ್ಸಿ ನೋಟುಗಳು ಪತ್ತೆಯಾದ ಪ್ರಕರಣದ  ಆರೋಪಿಯನ್ನು ಪತ್ತೆ ಹಚ್ಚಿ  ಲಕ್ನೋದಲ್ಲಿ ಪೊಲೀಸರು ಬಂಧಿಸಿದ್ದಾರೆ. ಗೋವಾ,ಹೈದರಾಬಾದ್ ಎಂದು ಪೊಲೀಸರನ್ನು ಯಾಮಾರಿಸಿದ್ದ ಆರೋಪಿ ಅರ್ಷದ್ ಅಂಜುಂ ಖಾನ್‌ನನ್ನು ಉತ್ತರ ಪ್ರದೇಶದ ಲಖನೌನಲ್ಲಿ ಬಂಧಿಸಿ

ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಯಿಂದ ಬಾಲಕ ಸಾವು

ತೀರ್ಥಹಳ್ಳಿ ತಾಲೂಕಿನ ದತ್ತರಾಜಪುರ ಗ್ರಾಮದಲ್ಲಿ ಮಂಗನ ಕಾಯಿಲೆಯಿಂದ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ರಾಮು ಹಾಗೂ ಮಮತಾ ಎಂಬವರ ಮಗ ರಚಿತ್ ಮೃತ ಬಾಲಕ. ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕ ಅಸು ನೀಗಿದ್ದಾನೆ. ಈ ಮೂಲಕ ತೀರ್ಥಹಳ್ಳಿ ತಾಲೂಕಿನಲ್ಲಿ

ಕಟ್ಟಡ ಕುಸಿದು 9 ತಿಂಗಳ ಮಗು ಸೇರಿ ನಾಲ್ವರ ಸಾವು

ದೆಹಲಿಯ ಮುಸ್ತಫಾಬಾದ್‌ ಪ್ರದೇಶದಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು 9 ತಿಂಗಳ ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. 18 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಕೆಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಶಾನ್ಯ ದೆಹಲಿಯ ದಯಾಲ್‌ಪುರ ಪೊಲೀಸ್ ಠಾಣಾ

ಮಂತ್ರಾಲಯ ಪ್ರವಾಸದಲ್ಲಿ ದೇವನಹಳ್ಳಿಯ ವಿದ್ಯಾರ್ಥಿಗಳಿಬ್ಬರು ತುಂಗಭದ್ರಾ ಪಾಲು

ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ರಾಯಚೂರಿನ ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಎಲೆಬಿಚ್ಚಾಲಿ ಗ್ರಾಮದ ಬಳಿ ನಡೆದಿದೆ. ಮಂತ್ರಾಲಯಕ್ಕೆ ಪ್ರವಾಸಕ್ಕೆ ತೆರಳಿದ್ದ ದೇವನಹಳ್ಳಿ ತಾಲೂಕಿನ ಚಿನವಂಡನಹಳ್ಳಿಯ ಮುತ್ತುರಾಜು(23) ಹಾಗೂ ಮದನ್(20) ಮೃತ ವಿದ್ಯಾರ್ಥಿಗಳು. ದೇವನಹಳ್ಳಿಯ

ಮುಖಂಡರಂತೆ ಪಕ್ಷಗಳ ಕಾರ್ಯಕರ್ತರಲ್ಲೂ ಗೆಳೆತನವಿರಲಿ

ರಾಜಕೀಯ ನೇತಾರರು ಚುನಾವಣೆಯ ನಂತರದಲ್ಲಿ ಗಳಸ್ಯ ಕಂಠಸ್ಯ ಸ್ನೇಹಿತರಾಗುವಾಗ ಕಾರ್ಯಕರ್ತರಲ್ಲಿ ಮಾತ್ರ ದ್ವೇಷವೇಕೆ? ಆದ್ದರಿಂದ ಪ್ರತಿಯೊಬ್ಬರು ನಾಗರಿಕ ಸಮಾಜದ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಒಂದಾಗುವುದು ಅವಶ್ಯವಿದೆ. ರಾಜಕೀಯ ಏನೇ ಇರಲಿ ವೈಯಕ್ತಿಕ ಸಂಬಂಧಗಳು ಗಟ್ಟಿಯಾಗಿರಬೇಕು. ವೈಯಕ್ತಿಕ ದ್ವೇಷಗಳಿಗೆ ಸಂಬಂಧಗಳನ್ನು ಬಲಿ ಕೊಡಬಾರದು.

ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ಮುತ್ತಪ್ಪ ರೈ 2ನೇ ಪತ್ನಿ ಸೇರಿ ನಾಲ್ವರ ವಿರುದ್ಧ ಕೇಸ್‌

ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಪ್ಪ ರೈ ಅವರ 2ನೇ ಪತ್ನಿ ಅನುರಾಧಾ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಕೇಶ್‌ಮಲ್ಲಿ, 2ನೇ ಪತ್ನಿ ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್

ಸಿದ್ದರಾಮಯ್ಯ ಗ್ಯಾಂಗ್‌ ಎಲ್ಲೋ ಕುಳಿತು ರೂಪಿಸಿದ ಜಾತಿ ಗಣತಿ ಅವೈಜ್ಞಾನಿಕ: ಆರ್‌.ಅಶೋಕ

ಸಿಎಂ ಸಿದ್ದರಾಮಯ್ಯನವರ ಗ್ಯಾಂಗ್‌ ಎಲ್ಲೋ ಕುಳಿತು ಸಿದ್ಧಪಡಿಸಿದ ಜಾತಿ ಗಣತಿ ವರದಿಯನ್ನು ಯಾರೂ ಒಪ್ಪಬೇಕಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ವರದಿಯಲ್ಲಿ ಸಹಿ ಹಾಕದೆ ಕಾಂತರಾಜು ಓಡಿಹೋಗಿದ್ದಾರೆ. ಜಯಪ್ರಕಾಶ್‌ ಹೆಗ್ಡೆ ವರದಿಯನ್ನು ತೆಗೆದು ನೋಡಿದಾಗ ಅದು ಅಸಲಿ

ರಾಜ್ಯದಲ್ಲೂ ಮಡಿವಾಳ ಸಮುದಾಯ ಎಸ್ಸಿಗೆ ಸೇರ್ಪಡೆ ಸಂಬಂಧ ಸಿಎಂ ಜತೆ ಚರ್ಚೆ: ಡಿಕೆ ಶಿವಕುಮಾರ್‌

17 ರಾಜ್ಯಗಳಲ್ಲಿ ನಿಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ, ನಮ್ಮ ರಾಜ್ಯದಲ್ಲೂ ಸೇರಿಸಬೇಕು ಎಂದು ಕೇಳಿದ್ದೀರಿ. ಮುಖ್ಯಮಂತ್ರಿಗಳು ಹಾಗೂ ನಾವು ಮುಂದಿನ ದಿನಗಳಲ್ಲಿ ಈ ವಿಚಾರ ಚರ್ಚೆ ಮಾಡುತ್ತೇವೆ. ಈ ಸಮುದಾಯದಿಂದ ಕೆಲವೇ ಕೆಲವರು ಮಾತ್ರ ಅಧಿಕಾರಿಗಳಿದ್ದಾರೆ. ನಿಮ್ಮಲ್ಲಿ ಬಹುತೇಕರು ಕುಲಕಸುಬು ಬಿಟ್ಟಿಲ್ಲ.

ತವರಿನಲ್ಲಿ ಆರ್ ಸಿಬಿಗೆ ಹ್ಯಾಟ್ರಿಕ್ ಸೋಲು; ಗೆದ್ದು 2ನೇ ಸ್ಥಾನಕ್ಕೆ ಜಿಗಿದ ಪಂಜಾಬ್

ಬೆಂಗಳೂರು: ಆಲ್ ರೌಂಡರ್ ಟಿಮ್ ಡೇವಿಡ್ ಹೋರಾಟದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 5 ಸೋಲನುಭವಿಸುವ ಮೂಲಕ ತವರಿನಲ್ಲಿ ಆಡಿದ ಐಪಿಎಲ್ ಟಿ-20 ಟೂರ್ನಿಯ ಮೂರು ಪಂದ್ಯಗಳಲ್ಲೂ ಸೋತು ಹ್ಯಾಟ್ರಿಕ್ ಸೋಲು ಕಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ