Wednesday, January 21, 2026
Menu

ರಷ್ಯಾದ ತೈಲ ಖರೀದಿಸಲ್ಲವೆಂದು ಮೋದಿ ಹೇಳಿದ್ದಾರೆ, ಖರೀದಿಸಿದ್ರೆ ಭಾರಿ ಸುಂಕ: ಟ್ರಂಪ್‌ ಬೆದರಿಕೆ

ನಾನು ರಷ್ಯಾದ ತೈಲ ಖರೀದಿ ಮಾಡುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಭಾರಿ ಪ್ರಮಾಣದ ಸುಂಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಬೆದರಿಕೆಯೊಡ್ಡಿದ್ದಾರೆ. ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ. ಟ್ರಂಪ್‌ ಮತ್ತು ಪ್ರಧಾನಿ ಮೋದಿ ನಡುವಿನ ಯಾವುದೇ ಇತ್ತೀಚಿನ ಸಂಭಾಷಣೆಯ ಬಗ್ಗೆ ತಿಳಿದಿಲ್ಲ

ಪುತ್ತೂರಿನ ಯುವಕ ಬೆಂಗಳೂರಲ್ಲಿ ಸಾವು: ಸಿಗರೇಟ್‌, ಪುಡ್‌ ಪಾಯಿಸನ್‌, ಅಸ್ತಮಾ ಕಾರಣವೇ?

ಪುತ್ತೂರಿನ ಯುವಕನೊಬ್ಬ ಕೊಡಗಿನ ಯುವತಿ ಜೊತೆ ಬೆಂಗಳೂರಿನ ಮಡಿವಾಳ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ. ಈ ಸಾವಿಗೆ ಫುಡ್ ಪಾಯ್ಸನ್ ಅಥವಾ ಅತಿಯಾದ ಸಿಗರೇಟ್ ಸೇವನೆ ಕಾರಣವೇ ಅಥವಾ ಅವರ ಕುಟುಂಬವನ್ನು ಬಾಧಿಸುತ್ತಿದ್ದ ಅಸ್ತಮಾ ಕಾರಣ ಇರಬಹುದೇ

ಸಂಸದ ರಾಘವೇಂದ್ರ ಹಿಟ್ ಅಂಡ್ ರನ್ ನಾಯಕರ ಪಟ್ಟಿಗೆ ಸೇರುವುದು ಬೇಡ: ಡಿಕೆ ಶಿವಕುಮಾರ್

"ಸಂಸದ ರಾಘವೇಂದ್ರ ಅವರು ಹಿಟ್ ಅಂಡ್ ರನ್ ನಾಯಕರ ಪಟ್ಟಿಗೆ ಸೇರುವುದು ಬೇಡ" ಎಂದು ಡಿಸಿಎಂ ಡಿಕೆ ಶಿವಕುಮಾರ್  ಸಲಹೆ ನೀಡಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ  ಅವರು ಪ್ರತಿಕ್ರಿಯೆ ನೀಡಿದರು. ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಕಿರುಕುಳ

ಹಾಲುಮತದವರು ಅವರಾಗಿಯೇ ಪದತ್ಯಾಗ ಮಾಡಬೇಕು, ಬಲವಂತ ಸಾಧ್ಯವಿಲ್ಲ ಎಂದ ಕೋಡಿಮಠದ ಶ್ರೀ

ಹೋದ ಸಲ ಐದು ವರ್ಷವಾದರೂ ಅವರನ್ನು ಏನೂ ಮಾಡಲು ಆಗಲಿಲ್ಲ. ಅವರಾಗಿಯೇ ಪದತ್ಯಾಗ ಮಾಡಬೇಕೇ ಹೊರತು ಬಲವಂತ ಮಾಡಲು ಸಾಧ್ಯವಿಲ್ಲ. ಹಾಲುಮತ ಸಮಾಜಕ್ಕೆ ಘನತೆ, ಗೌರವವಿದೆ, ಅಧಿಕಾರ ಬಂದರೆ, ವಾಪಸ್ ತೆಗೆದುಕೊಳ್ಳುವುದು ಕಷ್ಟ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ

ನಾರಾಯಣ ನೇತ್ರಾಲಯದಲ್ಲಿ ಮೂರು ಪಟಾಕಿ ಗಾಯ ಕೇಸ್

ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಸಿಡಿದು ಗಾಯಗೊಂಡ 15 ಒಳಗಿನ ವರ್ಷದ ಮೂರು ಮಕ್ಕಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪಟಾಕಿ ಸಿಡಿಸುವಾಗ ನೋಡುತ್ತಿದ್ದ ಮೂರು ವರ್ಷದ ಮಗುವೊಂದಕ್ಕೆ ಗಾಯವಾಗಿದೆ. ಕಳೆದ ವರ್ಷ ದೀಪಾವಳಿ ಸಮಯದಲ್ಲಿ ಗಾಯಗೊಂಡು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 71 ಜನ,

ಡಾ. ಕೃತಿಕಾ ಕೊಲೆ ಪ್ರಕರಣ: ಮಹೇಂದ್ರ ರೆಡ್ಡಿ ಖುದ್ದು ಡ್ರಗ್ಸ್ ಖರೀದಿ

ಬೆಂಗಳೂರಿನಲ್ಲಿ ವೈದ್ಯೆಯಾಗಿದ್ದ ಪತ್ನಿ ಕೃತಿಕಾ ರೆಡ್ಡಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ವೈದ್ಯ ಮಹೇಂದ್ರ ರೆಡ್ಡಿ ಪೊಲೀಸ್‌ ವಿಚಾರಣೆಯಲ್ಲಿ ತಾನು ಆಕೆಗೆ ಅನಸ್ತೇಷಿಯಾ ನೀಡಿ ಕೊಲೆ ಮಾಡಿರುವುದಾಗಿ ಈಗಾಗಲೇ ಒಪ್ಪಿಕೊಂಡಿದ್ದಾನೆ. ತಾನೇ ಖುದ್ದಾಗಿ ಮೆಡಿಕಲ್‌ ಶಾಪ್‌ಗೆ ತೆರಳಿ ಡ್ರಗ್ಸ್‌ ಖರೀದಿಸಿರುವುದಾಗಿಯೂ ಪೊಲೀಸರಿಗೆ

ಯಲ್ಲಾಪುರದಲ್ಲಿ ಬಸ್ ಮರಕ್ಕೆ ಡಿಕ್ಕಿ: ಬಸ್ಸಲ್ಲೇ ಸಿಲುಕಿತು ಚಾಲಕನ ಮುರಿದ ಕಾಲು

ಮುಂಬೈಯಿಂದ ಗೋವಾಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಚಾಲಕನ ಕಾಲು ಮುರಿದು ಬಸ್‌ನಲ್ಲೇ ಸಿಕ್ಕಿಕೊಂಡ ಘಟನೆ ಯಲ್ಲಾಪುರದ ಹಳಿಯಾಳ ಕ್ರಾಸ್ ಬಳಿ ನಡೆದಿದೆ. ಸ್ಥಳೀಯರು ಮತ್ತು ಪೊಲೀಸರು ಧಾವಿಸಿ ಚಾಲಕನನ್ನು ರಕ್ಷಣೆ ಮಾಡಿದ್ದಾರೆ, ಘಟನೆಯಲ್ಲಿ

ದರ್ಶನ್‌ಗೆ ಮತ್ತೆ ಬೆನ್ನು ನೋವು: ಹೀಟಿಂಗ್ ಬೆಲ್ಟ್ ಗೆ ಜೈಲು ವೈದ್ಯರ ಮನವಿ

ಚಿತ್ರದುರ್ಗದ ರೇಣುಕಾಚಾರ್ಯ ಕೊಲೆ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೆ ಬೆನ್ನುನೋವು ಹೆಚ್ಚಾದ ಹಿನ್ನೆಲೆಯಲ್ಲಿ ಹೀಟಿಂಗ್ ಬೆಲ್ಟ್ ಒದಗಿಸಲು ಜೈಲಿನ ವೈದ್ಯಾಧಿಕಾರಿಗಳು ಪತ್ರ ಬರೆದಿದ್ದಾರೆ. ಕಾರಾಗೃಹ ಆಸ್ಪತ್ರೆಯ ಮುಖ್ಯ ವೈದ್ಯರು, ಸಿ.ವಿ.ರಾಮನ್ ನಗರ ಆಸ್ಪತ್ರೆ ವೈದ್ಯಕೀಯ

ಹಾಸನಾಂಬೆ ದರ್ಶನ ಪಡೆದು ವಾಪಸಾಗುತ್ತಿದ್ದ ಮೂವರು ಅಪಘಾತಕ್ಕೆ ಬಲಿ

ಹಾಸನಾಂಬೆಯ ದರ್ಶನ ಪಡೆದುಕೊಂಡು ವಾಪಸಾಗುತ್ತಿದ್ದ ಎರಡು ಬೈಕ್‌ಗಳಿಗೆ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಇಬ್ಬರು ಅಸು ನೀಗಿದ್ದಾರೆ. ಸ್ನೇಹಿತ ಬಸವರಾಜು ಜೊತೆಯಲ್ಲಿ ಬೆಂಗಳೂರಿನಿಂದ ಯಮಹಾ

ವಿರಳಾತಿವಿರಳ Hyper-IgE Syndrome: ಸರ್ಕಾರದಿಂದ ಚಿಕಿತ್ಸೆಗೆ ಹಣ ಸಿಗದೆ ಸುಳ್ಯದ ಚಾಂದಿನಿ ಸಾವು

ಅಪರೂಪದಲ್ಲಿ ಅಪರೂಪದ ಕಾಯಿಲೆ (ಹೈಪರ್-IgE ಸಿಂಡ್ರೋಮ್‌)ಯಿಂದ ಬಳಲುತ್ತಿದ್ದ ದಕ್ಷಿಣ ಕನ್ನಡದ ಸುಳ್ಯ ಗಾಂಧಿನಗರ ನಿವಾಸಿ ಚಾಂದಿನಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.  ಕಳೆದ ಕೆಲವು ವರ್ಷಗಳಿಂದ ಚಾಂದಿನಿ ಈ ಕಾಯಿಲೆಯಿಂದ ಬಳಲುತ್ತಿದ್ದು, ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದರು. ಚಾಂದಿನಿಯವರನ್ನು ಕಾಡುತ್ತಿದ್ದ ಕಾಯಿಲೆ ಏನು