Featured
ಕಾಂಗ್ರೆಸ್ ನಾಯಕರು ರೈತರಿಗೆ ಅಪಮಾನ ಮಾಡಿರುವುದು ಇದೇನು ಮೊದಲಲ್ಲ: ಆರ್ ಅಶೋಕ್ ಕಿಡಿ
ಅಧಿಕಾರದ ಮದದಿಂದ ಕಾಂಗ್ರೆಸ್ ನಾಯಕರು ರೈತರ ಮೇಲೆ ದಬ್ಬಾಳಿಕೆ ಮಾಡಿರುವುದು, ಅನ್ನದಾತರಿಗೆ ಅಪಮಾನ ಮಾಡಿರುವುದು ಇದೇನು ಮೊದಲಲ್ಲ. ಆ ಪಟ್ಟಿ ಬಹಳ ದೊಡ್ಡದಿದೆ. ಆದರೆ ಹಿರಿಯರು, ಎಐಸಿಸಿ ಅಧ್ಯಕ್ಷ ಖರ್ಗೆಯವರು ಸಹ ಈಗ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಕನ್ನಡ ನಾಡಿನ ಕೃಷಿಕರ ದುರಂತ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹರಿಹಾಯ್ದಿದ್ದಾರೆ. ತೊಗರಿ ಬೇಳೆ ಹಾಳಾಗಿ ನಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳಲು ಬಂದ ನೊಂದ ರೈತರ ಬಳಿ ಈ ರೀತಿ
ನಾರಾಯಣಗುರು ಒಂದು ಸಮುದಾಯ, ಜಾತಿಗೆ ಮೀಸಲಾದವರಲ್ಲ, ಇಡೀ ಸಮಾಜದ ಆಸ್ತಿ : ಸಿಎಂ
ನಾರಾಯಣ ಗುರುಗಳು ಇಡೀ ಸಮಾಜದ ಆಸ್ತಿಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟಗಳ ಉದ್ದೇಶವನ್ನು
ಜಾತಿ ಮೇಲೆ ನಿಂತ ವ್ಯಕ್ತಿ ನಾನಲ್ಲ, ಬಂಗಾರಪ್ಪ ನನ್ನ ತಿದ್ದಿ, ತೀಡಿ ಬೆಳೆಸಿದ ಗುರು
“ಜಗತ್ತಿನ ಯಾವುದೇ ಧರ್ಮದವರ, ಜಾತಿಯ, ಕರಿಯ, ಬಿಳಿಯ ಜನಾಂಗದ ವ್ಯಕ್ತಿಗಳ ರಕ್ತದ ಬಣ್ಣ ಕೆಂಪಾಗಿರುತ್ತದೆ. ಎಲ್ಲರ ಕಣ್ಣೀರು, ಬೆವರಿನ ರುಚಿ ಉಪ್ಪಾಗಿಯೇ ಇರುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು
ಬ್ಯಾಟರಾಯನಪುರದಲ್ಲಿ ಕುಡಿದು ಸ್ನೇಹಿತನ ಮೇಲೆ ಬಾಟಲಿಯಿಂದ ಹಲ್ಲೆಗೈದು ಆತ್ಮಹತ್ಯೆ ಮಾಡಿಕೊಂಡ ಆರೋಪಿ
ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಿಷಿ ತೇಜ್ ಎಂಬ ಯುವಕನ ಮೇಲೆ ಸ್ನೇಹಿತ ದಿವ್ಯ ತೇಜ್ ಎಂಬಾತ ಹಲ್ಲೆ ನಡೆಸಿ ಬಳಿಕ ಆತ್ಮಹತ್ಯೆ
ನೋಟಿಸ್ ಕೊಡಲು ಬಂದ ಕೋರ್ಟ್ ಸಿಬ್ಬಂದಿ ಕಣ್ಣಿಗೆ ಖಾರದಪುಡಿ ಎರಚಿದ ಮಂಡ್ಯ ಮಹಿಳೆ
ಮಂಡ್ಯದ ಕೆ.ಆರ್.ಪೇಟೆಯ ಕಾಳೇನಹಳ್ಳಿ ಗ್ರಾಮದಲ್ಲಿ ನೋಟಿಸ್ ಕೊಡಲು ಬಂದ ಕೋರ್ಟ್ ಸಿಬ್ಬಂದಿ ಕಣ್ಣಿಗೆ ಮಹಿಳೆ ಖಾರದಪುಡಿ ಎರಚಿದ ಘಟನೆ ನಡೆದಿದೆ. ಅಪಘಾತ ಪ್ರಕರಣ ಸಂಬಂಧ ನೋಟೀಸ್ ಕೊಡಲು ಹೋಗಿದ್ದ ಕೋರ್ಟ್ ಸಿಬ್ಬಂದಿಗೆ ಮಹಿಳೆ ಖಾರದ ಪುಡಿ ಎರಚಿರುವ ವೀಡಿಯೊ ಮೊಬೈಲ್ ನಲ್ಲಿ
ವಿಡಿಯೊ ಗೇಮ್ ಗಳು ಮಕ್ಕಳ ಕ್ರಿಯಾಶೀಲತೆಯನ್ನು ಕುರುಡಾಗಿಸುತ್ತವೆ: ಕೆವಿ ಪ್ರಭಾಕರ್
ಮನೆಯೇ ಮೊದಲ ಶಾಲೆ ಎನ್ನುವುದು ಹೋಗಿ ಮೊಬೈಲೇ ಮೊದಲ ಶಾಲೆಯಂತಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್ ಹೇಳಿದ್ದಾರೆ. ಪ್ರೆಸ್ ಕ್ಲಬ್ ಮತ್ತು ಬಾಲ ಭವನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಮಕ್ಕಳ ಜಾತ್ರೆ” ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳು
ಮೈಸೂರು ದಸರಾ: ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆ
ನಾಡಹಬ್ಬ ಮೈಸೂರು ದಸರಾ-2025ಕ್ಕೆ ಎಲ್ಲ ಬಗೆಯ ಸಿದ್ಧತೆ ಭರದಿಂದ ಸಾಗಿದೆ, ದಸರಾ ವೀಕ್ಷಣೆಗಾಗಿ ಸಾರ್ವಜನಿಕರಿಗೆ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಜಿಲ್ಲಾಡಳಿತವು ದಸರಾ ಅಧಿಕೃತ ವೆಬ್ ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ದಸರಾ ಹಬ್ಬದಲ್ಲಿ ಅರಮನೆ, ಜಂಬೂಸವಾರಿ, ಪಂಜಿನ ಕವಾಯತು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಬಾನು ದಸರಾ ಉದ್ಘಾಟನೆ ವಿರೋಧಿಸಿ ಹೈಕೋರ್ಟ್‌ಗೆ ಅರ್ಜಿ; ಬದುಕಿದ್ದೇವೆ ಎಂದು ತೋರಿಸಿಕೊಳ್ಳುವ ಪ್ರಯತ್ನವೆಂದ ಡಿಕೆ ಶಿವಕುಮಾರ್
“ತಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಕೆಲವರು ಬಾನು ಮುಸ್ತಾಕ್ ಅವರಿಂದ ದಸರಾ ಉದ್ಘಾಟನೆ ವಿರೋಧಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸದಾಶಿವನಗರ ನಿವಾಸದ ಬಳಿ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ದಸರಾ ಉದ್ಘಾಟನೆಗೆ
ಸಂಸದ ಸುಧಾಕರ್ ಕಾಲೇಜಿನ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ
ಸಂಸದ ಸುಧಾಕರ್ ಗೆ ಸೇರಿದ ಚಿಕ್ಕಬಳ್ಳಾಪುರದ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬ ಕಿಟಕಿ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳ ಮೂಲದ ವಿದ್ಯಾರ್ಥಿ ಮಹಮದ್ ಶಬೀರ್ (26) ಆತ್ಮಹತ್ಯೆ ಮಾಡಿಕೊಂಡವ. ಸಂಸದ ಸುಧಾಕರ್ ಗೆ ಸೇರಿದ ಶಾಂತ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್‌ನಲಿ ಈ
ಸುಳ್ಳು ಕೇಸ್ ದಾಖಲಿಸಿದ್ದ ಬೆಂಗಳೂರಿನ ಮಹಿಳೆಗೆ ಹೈಕೋರ್ಟ್‌ನಿಂದ ಎರಡು ಲಕ್ಷ ರೂ. ದಂಡ
ಮಗ ಕಾಣೆಯಾಗಿದ್ದಾನೆ ಎಂದು ಸುಳ್ಳು ಕೇಸ್ ದಾಖಲಿಸಿದ್ದ ಬೆಂಗಳೂರಿನ ಮಹಿಳೆಗೆ ಹೈಕೋರ್ಟ್ ಎರಡು ಲಕ್ಷ ರೂ. ದಂಡ ವಿಧಿಸಿದೆ. ಎರಡು ವಾರದಲ್ಲಿ ದಂಡ ಕಟ್ಟದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಪೊಲೀಸರ ಮೇಲಿನ ಕೋಪಕ್ಕೆ ಬೆಂಗಳೂರಿನ ಇಂದಿರಾನಗರ ನಿವಾಸಿ