Featured
ಒಂದು ಕೋಟಿ ಬಾರಿ “ಗೋವಿಂದ” ಬರೆದರೆ ತಿರುಪತಿಯಲ್ಲಿ ಉಚಿತ ವಿಐಪಿ ದರ್ಶನ
25 ವರ್ಷದೊಳಗಿನ ಯುವಕರು ಒಂದು ಕೋಟಿ ಬಾರಿ “ಗೋವಿಂದ” ನಾಮ ಬರೆದರೆ, ಅವರು ಕುಟುಂಬ ಸದಸ್ಯರೊಂದಿಗೆ ತಿರುಮಲ ಶ್ರೀನಿವಾಸನ ಉಚಿತ ವಿಐಪಿ ದರ್ಶನ ಪಡೆಯಬಹುದಾಗಿದೆ. ಯುವಜನರಲ್ಲಿ ಆಧ್ಯಾತ್ಮಿಕತೆ ಬೆಳೆಸುವ ಉದ್ದೇಶದಿಂದ ಟಿಟಿಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಗೋವಿಂದ ಕೋಟಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆಲವು ನಿಯಮಗಳಿವೆ. 25 ವರ್ಷದೊಳಗಿನವರಿಗೆ ಮಾತ್ರ ಈ ಅವಕಾಶವಿದೆ. ಪ್ರತಿ ಪುಸ್ತಕದಲ್ಲಿ ಸುಮಾರು 39,600 ನಾಮಗಳು ಬರೆಯಬಹುದು. ಒಟ್ಟು 26 ಪುಸ್ತಕಗಳು ಬೇಕು. ಕರ್ನಾಟಕದ ಕೀರ್ತನ
ರಾಜ್ಯದ ಹಲವೆಡೆ ಇವತ್ತೂ ಮಳೆ: ಹವಾಮಾನ ಇಲಾಖೆ
ಬೆಂಗಳೂರು ಸೇರಿದಂತೆ ನಿನ್ನೆ ರಾಜ್ಯ ಬಹುತೇಕ ಕಡೆ ಭಾರೀ ಮಳೆ ಸುರಿದಿದ್ದು, ಇಂದು ಕೂಡ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ, ದಕ್ಷಿಣ ಕನ್ನಡ, ಚಾಮರಾಜನಗರ,ಬೀದರ್, ಬಿಜಾಪುರ, ಬಾಗಲಕೋಟೆ, ಉಡುಪಿ
ಆಪರೇಷನ್ ಸಿಂಧೂರ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ: ಟೆಕ್ಕಿ ಜೈಲುಪಾಲು
ಉಗ್ರರ ವಿರುದ್ಧ ಭಾರತದ ವಾಯುಪಡೆಯು ನಡೆಸಿದ ʻಆಪರೇಷನ್ ಸಿಂಧೂರʼ ವಿಜಯೋತ್ಸವ ಆಚರಣೆ ವೇಳೆ ಬೆಂಗಳೂರಿನ ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದಡಿ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿರುವುದು ಐದು ದಿನಗಳ ಬಳಿಕ ಬಹಿರಂಗಗೊಂಡಿದೆ. ಶುಭಾಂಶು ಶುಕ್ಲಾ (26)
ಇನ್ನಷ್ಟು ರಕ್ಷಣಾ ಕ್ಷಿಪಣಿ ಎಸ್ 400ಗಾಗಿ ರಷ್ಯಾಗೆ ಭಾರತ ಬೇಡಿಕೆ
ಭಾರತದ ವಾಯುಪಡೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಉಡಾಯಿಸುತ್ತಿದ್ದ ಕ್ಷಿಪಣಿಗಳನ್ನು ತಡೆದು ನಾಶಗೊಳಿಸಿ ಭಾರತ ವನ್ನು ರಕ್ಷಿಸಿದ್ದ S-400 ವಾಯು ರಕ್ಷಣಾ ಕ್ಷಿಪಣಿಯ ಹೆಚ್ಚುವರಿ ಘಟಕಗಳನ್ನು ನೀಡುವಂತೆ ಭಾರತವು ರಷ್ಯಾಗೆ ಮನವಿ ಮಾಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಉಡಾಯಿಸಿದ ಕ್ಷಿಪಣಿಗಳು
ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿ 6 ಸಾವು
ರಾಜ್ಯದ ವಿವಿಧೆಡೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸೇರಿದಂತೆ 6 ಮಂದಿ ಮೃತಪಟ್ಟ ಘಟನೆ ಮಂಗಳವಾರ ವರದಿಯಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ರಾರಾವಿ ಗ್ರಾಮದ ನಿವಾಸಿಗಳಾದ ಬೀರಪ್ಪ
ಪಹಲ್ಗಾಮ್ ದಾಳಿ ಉಗ್ರರ ತಲೆಗೆ 20 ಲಕ್ಷ ರೂ. ಬಹುಮಾನ ಘೋಷಣೆ
ಶ್ರೀನಗರ:ಕಾಶ್ಮೀರದ ಪಹಲ್ಗಾಮ್ನಲ್ಲಿ ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಉಗ್ರರ ಬಗ್ಗೆ ಸುಳಿವು ಅಥವಾ ಹಿಡಿದು ಕೊಟ್ಟವರಿಗೆ 20 ಲಕ್ಷ ರೂ ನಗದು ಬಹುಮಾನ ಘೋಷಿಸಲಾಗಿದೆ. ಪ್ರವಾಸಿಗರ ಹತ್ಯೆ ಮಾಡಿದ ಉಗ್ರರ ಪತ್ತೆ ಕಾರ್ಯ ನಡೆಯುತ್ತಿದೆ. ಶಂಕಿತ ಮೂವರು ಉಗ್ರರು
ಪಾಕಿಸ್ತಾನಕ್ಕೆ ನೀರು ಬಿಡಲ್ಲ: ಕೇಂದ್ರ ವಿದೇಶಾಂಗ ಸಚಿವಾಲಯ ಸ್ಪಷ್ಟನೆ
ದೆಹಲಿ: ಉಗ್ರರಿಗೆ ಬೆಂಬಲ ಹಾಗೂ ಪ್ರಚೋದನೆ ನೀಡುವುದನ್ನು ನಿಲ್ಲಿಸುವವರೆಗೂ ಭಾರತ ಸಿಂಧೂ ನದಿ ನೀರು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಮಾತನಾಡಿ, ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ
ಮನೆಗೆ ನುಗ್ಗಿ ಹೊಡೆಯುತ್ತೇವೆ: ಪ್ರಧಾನಿ ಮೋದಿ ಎಚ್ಚರಿಕೆ
ಅಮೃತಸರ: ಉಗ್ರರಿಗೆ ಆಶ್ರಯ ನೀಡಿದರೆ ಮನೆಗೆ ನುಗ್ಗಿ ಹೊಡೆಯುತ್ತೇವೆ. ತಪ್ಪಿಸಿಕೊಳ್ಳಲು ಕೂಡ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ದಾಳಿ ಪ್ರತಿದಾಳಿ ನಂತರ ಕದನ
ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ: ಆರ್.ಅಶೋಕ
ಬೆಂಗಳೂರು: ಭಾರತೀಯ ಸೇನೆ 100 ಕ್ಕೂ ಅಧಿಕ ಭಯೋತ್ಪಾದಕರನ್ನು ನಾಶ ಮಾಡಿದೆ. ಕದನ ವಿರಾಮ ಘೋಷಣೆಯಾದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಒಡಕು ಮಾತುಗಳನ್ನು ಆಡಬಾರದು.
ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಪ್ರಕಟ: ಬೆಂಗಳೂರಿಗೆ 3ನೇ ಸ್ಥಾನ!
ನವದೆಹಲಿ: ಸಿಬಿಎಸ್ ಇ 10ನೇ ತರಗತಿ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಶೇ.93.66 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ದೇಶದಲ್ಲೇ ಅತೀ ಹೆಚ್ಚು ಫಲಿತಾಂಶ ಪಡೆದ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ಮಂಗಳವಾರ ಸಿಬಿಎಸ್ ಇ 10ನೇ




