Menu

ಮೆಕ್ಕಾದಲ್ಲಿ ಟ್ಯಾಂಕರ್‌ ಡಿಕ್ಕಿಯಾಗಿ ಬಸ್ಸಿನಲ್ಲಿದ್ದ 42 ಭಾರತೀಯ ಯಾತ್ರಿಗಳು ಸಜೀವ ದಹನ

ಸೌದಿ ಅರೇಬಿಯಾದಲ್ಲಿ ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್‌ಗೆ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಕನಿಷ್ಠ 42 ಭಾರತೀಯ ಯಾತ್ರಿಕರು ಸಜೀವ ದಹನವಾಗಿದ್ದಾರೆ. ಮೆಕ್ಕಾ ಬಳಿಯ ಅಲ್ ಮುಫ್ರಿಹಾತ್‌ನಲ್ಲಿ ಈ ದುರಂತ ಸಂಬವಿಸಿದ್ದು, ಮೃತಪಟ್ಟವರಲ್ಲಿ ಮಹಿಳೆಯರು, ಮಕ್ಕಳು ಕೂಡ ಸೇರಿದ್ದಾರೆ. ಮೃತರು ಹೈದರಾಬಾದ್‌ ಮೂಲದವರು ಎಂದು ಹೇಳಲಾಗುತ್ತಿದೆ. ಮೆಕ್ಕಾದಲ್ಲಿ ಉಮ್ರಾ ವಿಧಿಗಳನ್ನು ನೆರವೇರಿಸಿ ಮದೀನಾಕ್ಕೆ ತೆರಳುತ್ತಿದ್ದಾಗ ಪ್ರವಾಸಿಗರ ಬಸ್ಸಿಗೆ ಡಿಸೇಲ್ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ನಸುಕಿನ

ಬೆಂಗಳೂರಿನ ಮನೆಯಲ್ಲಿ ಮಹಿಳೆಯ ಕೊಲೆಗೈದು ಹಂತಕರು ಪರಾರಿ

ಬೆಂಗಳೂರಿನ ಹೊಂಗಸಂದ್ರದ ಮನೆಯೊಂದರಲ್ಲಿ ಗೃಹಿಣಿ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ದಾಳಿ ನಡೆಸಿಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿರಸಿಯ ಪ್ರಮೋದಾ(35) ಹತ್ಯೆಯಾದ ಮಹಿಳೆ. ಹತ್ಯೆಯಾದ ಮಹಿಳೆಯ ಪತಿ ಸುರೇಶ‌, ಅಕ್ಕ ತಂಗಿ ಇಬ್ಬರನ್ನು ಮದುವೆಯಾಗಿದ್ದ. ಕೊಲೆಯಾಗಿರುವ ಪ್ರಮೋದಾ ಎರಡನೇ ಹೆಂಡತಿ. ಆಕೆಗೆ ಇಬ್ಬರು

ಮಗಳನ್ನು ಮಾಡೆಲ್‌ ಮಾಡಲೆಂದು 3.74 ಲಕ್ಷ ರೂ. ಕಳೆದುಕೊಂಡ ತಾಯಿ

ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ತನ್ನ ಮಗಳನ್ನು ಮಾಡೆಲ್ ಮಾಡಬೇಕೆಂಬ ಆಸೆಗೆ ಬಿದ್ದು 3.74 ಲಕ್ಷ ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ. ಸುಮಾ 3.74 ಲಕ್ಷ ರೂ. ಕಳೆದುಕೊಂಡ ಮಹಿಳೆ. ಸುಮಾ ಸಾಮಾಜಿಕ ಜಾಲತಾಣದಲ್ಲಿ ಚೈಲ್ಡ್ ಮಾಡೆಲ್ ಜಾಹೀರಾತು ನೋಡಿದ್ದರು. ಲಿಟ್ಲ್ ನೆಸ್ಟ್ ಎಂಬ

ಸಂಪುಟ ಪುನಾರಚನೆ, ಪವರ್ ಶೇರಿಂಗ್  ತೀರ್ಮಾನ  ಪಕ್ಷದ ಹೈಕಮಾಂಡ್‌ನದು: ಡಿಕೆ ಸುರೇಶ್

ಸಂಪುಟ ಪುನಾರಚನೆ, ಪವರ್ ಶೇರಿಂಗ್ ಎಲ್ಲವನ್ನು ತೀರ್ಮಾನ ಮಾಡುವುದು ಹೈಕಮಾಂಡ್. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ಎಂದು ಕಾದು ನೋಡೋಣ ಎಂದು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್  ಹೇಳಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ  ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್

ಡಿಜಿಟಲ್‌ ಅರೆಸ್ಟ್‌: ಬೆಂಗಳೂರಿನ ಮಹಿಳಾ ಟೆಕ್ಕಿ ಕಳೆದುಕೊಂಡಿದ್ದು 31.83 ಕೋಟಿ ರೂ.

ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಡಿಜಿಟಲ್ ಅರೆಸ್ಟ್ ಹೆಸರಿನ ವಂಚನೆಗೆ ಒಳಗಾಗಿ 31.83 ಕೋಟಿ ರೂ. ಕಳೆದುಕೊಂಡಿದ್ದಾರೆ. ಇಂದಿರಾನಗರದ 57 ವರ್ಷದ ಮಹಿಳಾ ಟೆಕ್ಕಿ ಮೇಲೆ ಸೈಬರ್ ಅಪರಾಧಿಗಳು ಆರು ತಿಂಗಳಿಗೂ ಹೆಚ್ಚು ಕಾಲ ಕಣ್ಗಾವಲಿನಲ್ಲಿರಿಸಿದ್ದರು. ಹಣ ದೋಚಿ ಸಂಪರ್ಕ ಕಡಿತಗೊಳಿಸಿದ್ದರು ಎಂದು

5 ಕೋಟಿ ರೂ. ಸಿಎಂ ವಿಶೇಷ ಅನುದಾನ ಆಮಿಷವೊಡ್ಡಿ 50 ಲಕ್ಷ ರೂ. ಕಮಿಷನ್‌ ವಂಚನೆ

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಐದು ಕೋಟಿ ರೂ. ಮಂಜೂರು ಮಾಡಿಸುವುದಾಗಿ ವ್ಯಕ್ತಿಯನ್ನು ನಂಬಿಸಿ 50 ಲಕ್ಷ ರೂ. ಕಮಿಷನ್‌ ಪಡೆದು ವಂಚಿಸಿದ ಆರೋಪದಡಿ ಅನ್ನಪೂಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ನಾಗರಬಾವಿ ನಿವಾಸಿ ವೆಂಕಟೇಶ್ ಬಾಬು ಹರೀಶ್ ಹಾಗೂ ಸಂದೀಪ್ ಎಂಬವರ ವಿರುದ್ಧ

ಹಗಲು ರಾತ್ರಿ ಪಕ್ಷ ಕಟ್ಟಿದ್ದೇನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನೇಕೆ ರಾಜೀನಾಮೆ ನೀಡಲಿ: ಡಿಕೆ ಶಿವಕುಮಾರ್

“ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವತ್ತೂ ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನಲ್ಲ. ನಾನು ಹಗಲು ರಾತ್ರಿ ದುಡಿದು ಪಕ್ಷ ಕಟ್ಟಿದ್ದೇನೆ. ಮುಂದೆಯೂ ಕಟ್ಟುತ್ತೇನೆ” ಎಂದು ಡಿಸಿಎಂ ಡಿಕೆ. ಶಿವಕುಮಾರ್  ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು. ಕೆಪಿಸಿಸಿ ಅಧ್ಯಕ್ಷ

ಗಳಲೆ ರೋಗ: ಬೆಳಗಾವಿ ಮೃಗಾಲಯದಲ್ಲಿ ಕೃಷ್ಣಮೃಗಳ ಸಾವಿನ ಸಂಖ್ಯೆ 29ಕ್ಕೆ ಏರಿಕೆ

ಬೆಳಗಾವಿಯ ಭೂತರಾಮನಹಟ್ಟಿಯ ಕಿತ್ತೂರು ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸಂಖ್ಯೆ 29ಕ್ಕೇರಿದೆ. ಗಳಲೆ ರೋಗದಿಂದ ಕೃಷ್ಣ ಮೃಗಗಳು ಮೃತಪಟ್ಟಿರುವುದಾಗಿ ತಜ್ಞ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಸಾವಿಗೆ ನಿಖರ ಕಾರಣ ಏನೆಂಬುದು ವರದಿ ಬಂದ ಬಳಿಕವೇ ತಿಳಿಯಲಿದೆ. ಮೃತ ಕೃಷ್ಣ ಮೃಗಗಳ ಕಿಡ್ನಿ,

ನಾಳೆಯಿಂದ ಬಸವನಗುಡಿ ಕಡ್ಲೆ ಪರಿಷೆ

ನವೆಂಬರ್‌17 ಸೋಮವಾರದಿಂದ 21ರವರೆಗೆ ಬಸವನಗುಡಿ ಕಡ್ಲೆಕಾಯಿ ಪರಿಷೆ ನಡೆಯಲಿದೆ. ಕಳೆದ 116 ವರ್ಷಗಳಿಂದ ಕಡಲೆಕಾಯಿ ಪರಿಷೆ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ ನಡೆದ ಕಡ್ಲೆಕಾಯಿ ಪರಿಷೆಯಲ್ಲಿ 5 ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಈ ವರ್ಷ 5 ಲಕ್ಷಕ್ಕೂ ಅಧಿಕ ಜನರು

ತಿಂಗಳುಗಟ್ಟಲೇ ಒಂದೇ ಕಡೆ ನಿಲ್ಲಿಸಿರುವ ವಾಹನಗಳ ಹರಾಜಿಗೆ ಜಿಬಿಎ ಸಿದ್ಧ

ಬೆಂಗಳೂರಿನಲ್ಲಿ ಅನಧಿಕೃತವಾಗಿ ತಿಂಗಳುಗಟ್ಟಲೇ ಒಂದೇ ಜಾಗದಲ್ಲಿ ನಿಲ್ಲಿಸಿರುವ ವಾಹನಗಳನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹರಾಜಿಗಿಡಲಿದೆ. ಎಷ್ಟೇ ಬಾರಿ ವಾಹನ ತೆರವು ಮಾಡಿ ಅಂದ್ರೂ ವಾಹನ ಮಾಲೀಕರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ರಸ್ತೆ ಬದಿ ವಾಹನ ನಿಲ್ಲಿಸಿರುವುದರಿಂದ ಟ್ರಾಫಿಕ್ ಮತ್ತಷ್ಟು ಹೆಚ್ಚುತ್ತಿದೆ. ಹೀಗಾಗಿ ಸಂಚಾರ